ಉತ್ತರ ಪ್ರದೇಶ ಚುನಾವಣೆಗೆ ಮುನ್ನ ದಾಳಿ ಸಂಚು ಹೂಡಿದ್ದ 6 ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್, ಇಬ್ಬರಿಗೆ ಪಾಕ್ ನಂಟು

TV9 Digital Desk

| Edited By: Rashmi Kallakatta

Updated on:Sep 14, 2021 | 7:31 PM

ಪೊಲೀಸರ ಪ್ರಕಾರ ಉಗ್ರರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಏನಾದರೂ ದೊಡ್ಡ ಯೋಜನೆ ರೂಪಿಸಿ ದೇಶದಾದ್ಯಂತ ಉದ್ದೇಶಿತ ಕೊಲೆಗಳು ಮತ್ತು ಸ್ಫೋಟಗಳನ್ನು ನಡೆಸಲು ಸಂಚು ಹೂಡಿದ್ದರು.

ಉತ್ತರ ಪ್ರದೇಶ ಚುನಾವಣೆಗೆ ಮುನ್ನ ದಾಳಿ ಸಂಚು ಹೂಡಿದ್ದ 6 ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್, ಇಬ್ಬರಿಗೆ ಪಾಕ್ ನಂಟು
ದೆಹಲಿ ಪೊಲೀಸ್

ದೆಹಲಿ: ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ವ್ಯಕ್ತಿಗಳು ಸೇರಿದಂತೆ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ದೆಹಲಿ ಪೊಲೀಸರ ವಿಶೇಷ ಘಟಕವು ಸ್ಫೋಟಕಗಳು ಮತ್ತು ಬಂದೂಕುಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿದೆ ಎಂದು ಡಿಸಿಪಿ ವಿಶೇಷ ಘಟಕ ಪ್ರಮೋದ್ ಕುಶ್ವಾಹ ಹೇಳಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಪ್ರಯಾಗರಾಜ್ ಮತ್ತು ದೆಹಲಿಯಲ್ಲಿ ನಡೆದ ದಾಳಿಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರು ಮಂದಿಯ ಪೈಕಿ ಒಸಾಮಾ ಮತ್ತು ಜೀಶನ್ ಪಾಕಿಸ್ತಾನದಲ್ಲಿ ತರಬೇತಿ ಪಡೆದವರಾಗಿದ್ದಾರೆ. ಈ ವ್ಯಕ್ತಿಗಳಿಗೆ ಭೂಗತ ಜಗತ್ತಿನ ಸಂಪರ್ಕವಿದೆ ಎಂದು ಪೊಲೀಸರು ಹೇಳಿರುವುದಾಗಿ ಇಂಡಿಯಾ ಟಿವಿ ನ್ಯೂಸ್ ವರದಿ ಮಾಡಿದೆ.

ಪೊಲೀಸರ ಪ್ರಕಾರ ಉಗ್ರರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಏನಾದರೂ ದೊಡ್ಡ ಯೋಜನೆ ರೂಪಿಸಿ ದೇಶದಾದ್ಯಂತ ಉದ್ದೇಶಿತ ಕೊಲೆಗಳು ಮತ್ತು ಸ್ಫೋಟಗಳನ್ನು ನಡೆಸಲು ಸಂಚು ಹೂಡಿದ್ದರು.

ಕೋಟಾದಿಂದ ಸಮೀರ್, ದೆಹಲಿಯಿಂದ ಇಬ್ಬರು ವ್ಯಕ್ತಿಗಳು ಮತ್ತು ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿದೆ. 6 ಜನರಲ್ಲಿ ಇಬ್ಬರನ್ನು ಮಸ್ಕತ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಸ್ಫೋಟಕಗಳು ಮತ್ತು ಬಂದೂಕುಗಳಲ್ಲಿ 15 ದಿನಗಳ ಕಾಲ ತರಬೇತಿ ನೀಡಲಾಯಿತು ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಹೇಳಿದ್ದಾರೆ.

ಬಂಧಿತರು ತಮ್ಮ ಗುಂಪಿನಲ್ಲಿ 14-15 ಬಾಂಗ್ಲಾ ಮಾತನಾಡುವ ವ್ಯಕ್ತಿಗಳನ್ನು ಇದೇ ತರಹದ ತರಬೇತಿಗಾಗಿ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಈ ಕಾರ್ಯಾಚರಣೆಯು ಗಡಿಯುದ್ದಕ್ಕೂ ನಿಕಟವಾಗಿ ಸಂಯೋಜಿಸಲ್ಪಟ್ಟಂತೆ ತೋರುತ್ತಿದೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ವಿಶೇಷ ಸಿಪಿ ನೀರಜ್ ಠಾಕೂರ್ ಹೇಳಿದ್ದಾರೆ.

ಅವರು 2 ತಂಡಗಳನ್ನು ರಚಿಸಿದರು. ಒಂದನ್ನು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಅವರು ಸಂಘಟಿಸಿದರು. ಗಡಿಯಾಚೆಗಿನ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪಡೆಯಲು ಮತ್ತು ಅವುಗಳನ್ನು ಇಲ್ಲಿ ಅಡಗಿಸಲು ಇರಿಸಲಾಗಿತ್ತು. ಇತರ ತಂಡವು ಹವಾಲಾ ಮೂಲಕ ಧನಸಹಾಯ ವ್ಯವಸ್ಥೆ ಮಾಡುವುದಕ್ಕೆ ನಿಯೋಜಿಸಲಾಗಿತ್ತು ಎಂದು ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ನೀಟ್ ಪರೀಕ್ಷೆಯಲ್ಲಿ ಸೋಲುವ ಭಯದಿಂದ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

(Delhi Police arrested six terror suspects two men who were trained in Pakistan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada