Festival Special Trains: ದಸರಾ, ದೀಪಾವಳಿ ಪ್ರಯಾಣಕ್ಕೆ ವಿಶೇಷ ರೈಲು ಸೇವೆ; 18 ರೈಲುಗಳ ವೇಳಾಪಟ್ಟಿ ಬಿಡುಗಡೆ
South Central Railway: ಬಹುತೇಕ ರೈಲುಗಳು ಈ ತಿಂಗಳ 28ನೇ ತಾರೀಖಿನಿಂದ ಆರಂಭವಾಗಿ ಈ ವರ್ಷದ ಅಂತ್ಯದ ವರೆಗೂ ಸಂಚಾರ ನಡೆಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ.
ದೆಹಲಿ: ಹಬ್ಬದ ಸಮಯ ಬಂದಾಗ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುವುದು ಹೆಚ್ಚುತ್ತದೆ. ಭಾರತದಲ್ಲಿ ಒಂದೂರಿನ ಜನರು ಮತ್ತೊಂದು ಪ್ರದೇಶದಲ್ಲಿ ಕೆಲಸ ಮಾಡುವುದು ಸಾಮಾನ್ಯ. ಹಬ್ಬದ ಸಂಭ್ರಮಕ್ಕೆ ಎಲ್ಲೇ ಇದ್ದರೂ ಮತ್ತೆ ಮನೆಗೆ ಹೋಗಿ ಸಮಯ ಕಳೆಯುವ ಆಸೆ ಬಹುತೇಕ ಎಲ್ಲಾ ಜನರದ್ದು ಆಗಿರುತ್ತದೆ. ಹೀಗಾಗಿ ಹಬ್ಬದ ವಿಶೇಷ ಎಂದು ಹೆಚ್ಚು ರೈಲು ಸಂಚಾರ (Indian Railways) ನಡೆಸುವುದು ಕೂಡ ಇರುತ್ತದೆ. ಹೇಗೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಬಸ್ ಸಂಚಾರ, ಪ್ರಯಾಣಿಕರ ದಟ್ಟಣೆ ಇರುತ್ತದೋ ರೈಲು ಸಂಚಾರಕ್ಕೆ ಕೂಡ ಹೆಚ್ಚಿನ ವ್ಯವಸ್ಥೆ ಮಾಡಿರಲಾಗುತ್ತದೆ. ಸೌತ್ ಸೆಂಟ್ರಲ್ ರೈಲ್ವೇ (South Central Railway), ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆ ನೀಡುವ ಬಗ್ಗೆ ತಿಳಿಸಿದೆ.
ಹಬ್ಬಗಳು ಸಾಲು ಸಾಲಾಗಿ ಎದುರುಗೊಳ್ಳುತ್ತಿದೆ. ಈ ವರ್ಷದ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳು ಮುಗಿದಿವೆ. ಇನ್ನು ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳು ಬರಲಿವೆ. ದೇಶದ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳು ಇವು. ನವರಾತ್ರಿಯ 9 ದಿನಗಳಲ್ಲಿ ವಿವಿಧ ದೇವಿಯರ ಆರಾಧನೆ ನಡೆಯುತ್ತದೆ. ಭಾರತದ ಉತ್ತರ, ದಕ್ಷಿಣ, ಈಶಾನ್ಯ ಭಾಗದಲ್ಲಿ ಕೂಡ ನವರಾತ್ರಿ ಆಚರಣೆ ಸಂಭ್ರಮದಿಂದ ಕೂಡಿರುತ್ತದೆ.
ದೀಪಾವಳಿ ಸಂಭ್ರಮದ ಬಗ್ಗೆ ಹೊಸದಾಗಿ ಹೇಳಬೇಕು ಎಂದಿಲ್ಲ. ಜಾತಿ, ಮತ ಬೇಧ ಇಲ್ಲದೆ ಎಲ್ಲೆಡೆ ಸಡಗರದ ದೀಪಾವಳಿ ಆಚರಿಸಲಾಗುತ್ತದೆ. ಎಲ್ಲರೂ ಮನೆಯಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ರೈಲು ಸೇವೆಯನ್ನು ಕೂಡ ಒದಗಿಸಲಾಗಿದೆ. ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ. ಒಟ್ಟು ವಿಶೇಷ 18 ರೈಲುಗಳು ಸಂಚಾರ ಮಾಡಲಿವೆ.
ಬಹುತೇಕ ರೈಲುಗಳು ಈ ತಿಂಗಳ 28ನೇ ತಾರೀಖಿನಿಂದ ಆರಂಭವಾಗಿ ಈ ವರ್ಷದ ಅಂತ್ಯದ ವರೆಗೂ ಸಂಚಾರ ನಡೆಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ. ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
18 Special Trains extended to Run #SpecialTrains pic.twitter.com/AORbIFGjBM
— South Central Railway (@SCRailwayIndia) September 14, 2021
ವಿಶೇಷ ರೈಲು ಸೇವೆ ಯಾವೆಲ್ಲಾ ಊರಿಗೆ? ಪಟ್ಟಿ ಇಲ್ಲಿದೆ
- ಹೊವ್ರ- ಹೈದರಾಬಾದ್
- ಹೈದರಾಬಾದ್- ಹೊವ್ರ
- ಶಾಲಿಮಾರ್- ಸಿಕಂದರಾಬಾದ್
- ಸಿಕಂದರಾಬಾದ್- ಶಾಲಿಮಾರ್
- ಹಟಿಯಾ- ಯಶವಂತಪುರ
- ಯಶವಂತಪುರ- ಹಟಿಯಾ
- ಹೊವ್ರ- ಮೈಸೂರು
- ಮೈಸೂರು- ಹೊವ್ರ
- ಹೊವ್ರ- ಯಶವಂತಪುರ
- ಯಶವಂತಪುರ- ಹೊವ್ರ
- ಹೊವ್ರ- ವಾಸ್ಕೊ ಡ ಗಾಮ
- ವಾಸ್ಕೊ ಡ ಗಾಮ- ಹೊವ್ರ
- ಹೊವ್ರ- ಪುದುಚೆರಿ
- ಪುದುಚೆರಿ- ಹೊವ್ರ
- ಹೊವ್ರ- ಎರ್ನಾಕುಲಂ
- ಎರ್ನಾಕುಲಂ- ಹೊವ್ರ
- ಹಟಿಯಾ- ಬೆಂಗಳೂರು ಕಂಟೋನ್ಮೆಂಟ್
- ಬೆಂಗಳೂರು ಕಂಟೋನ್ಮೆಂಟ್- ಹಟಿಯಾ
ಇದನ್ನೂ ಓದಿ: ಶ್ರೀ ರಾಮಾಯಣ ಎಕ್ಸ್ಪ್ರೆಸ್ ರೈಲು ನವೆಂಬರ್ 7 ರಂದು ನವದೆಹಲಿಯಿಂದ ಹೊರಡಲಿದೆ!
ಇದನ್ನೂ ಓದಿ: Consumer Dispute: ರೈಲು ತಡವಾಗಿದ್ದರಿಂದ ರೂ. 30 ಸಾವಿರ ನಷ್ಟ ಪರಿಹಾರ ಕಟ್ಟಿಕೊಡುವಂತೆ ರೈಲ್ವೇಸ್ಗೆ ಸುಪ್ರೀಂ ನಿರ್ದೇಶನ
Published On - 8:37 pm, Tue, 14 September 21