AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಲ್ಲಿದೆ ಪೆಟ್ರೋಲ್​, ಡೀಸೆಲ್​ ದರ ವಿವರ; ಇಂದು ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ ಪರಿಶೀಲಿಸಿ

Petrol Rate Today: ಸತತ 10 ದಿನಗಳಿಂದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಪೆಟ್ರೋಲ್​, ಡೀಸೆಲ್​ ದರ ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

Petrol Price Today: ಇಲ್ಲಿದೆ ಪೆಟ್ರೋಲ್​, ಡೀಸೆಲ್​ ದರ ವಿವರ; ಇಂದು ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Sep 15, 2021 | 7:26 AM

Petrol Diesel Price Today | ದೆಹಲಿ: ಕಳೆದ ಒಂದು ವಾರದಿಂದಲೂ ಸಹ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿಯೇ ಇದೆ. ಇಂಧನ ದರದಲ್ಲಿ ಯಾವುದೇ ಏರಿಳತ ಕಂಡು ಬಂದಿಲ್ಲ. ಅದೇ ರೀತಿ ಇಂದು ( ಸೆಪ್ಟೆಂಬರ್ 15, ಬುಧವಾರ) ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ (Diesel Price) ಯಾವುದೇ ಇಳಿಕೆ ಕಂಡು ಬಂದಿಲ್ಲ. ಸತತ 10 ದಿನಗಳಿಂದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಇಂಧನ ದರ (Fuel Price) ಸ್ಥಿರತೆ ಕಾಯ್ದುಕೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.29 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 88.62 ರೂಪಾಯಿ ಇದೆ. ಅದೇ ರೀತಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.26 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.19 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 98.96 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 93.26 ರೂಪಾಯಿ ಇದೆ.

ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.62 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.71 ರೂಪಾಯಿ ಇದೆ. ಅದೇ ರೀತಿ ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 109.63 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.57 ರೂಪಾಯಿ ಇದೆ.

ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್​ಗೆ 105.26 ರೂಪಾಯಿ ಹಾಗೂ ಲೀಟರ್ ಡೀಸೆಲ್​ಗೆ 96.69 ರೂಪಾಯಿ ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.70 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.04 ರೂಪಾಯಿ ಇದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 98.30 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.02 ರೂಪಾಯಿ ಇದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

(Petrol Price Unchanged today on 2021 September 15 and check diesel price in Bangalore Delhi Mumbai and Major city)

Published On - 7:14 am, Wed, 15 September 21

ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್