Rahul Gandhi: ಇಂದಿನಿಂದ ರಾಹುಲ್ ಗಾಂಧಿ 10 ದಿನಗಳ ಕಾಲ ಇಂಗ್ಲೆಂಡ್‌ ಪ್ರವಾಸ, ಏನು ವಿಶೇಷ? ಇಲ್ಲಿದೆ ಮಾಹಿತಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 28, 2023 | 7:15 AM

ದೊಡ್ಡ ಮಟ್ಟದ ಭಾರತ್ ಜೋಡೋ ಯಾತ್ರೆ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ ಹತ್ತು ದಿನಗಳ ಕಾಲ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ಏನು ವಿಶೇಷ?

Rahul Gandhi: ಇಂದಿನಿಂದ ರಾಹುಲ್ ಗಾಂಧಿ 10 ದಿನಗಳ ಕಾಲ ಇಂಗ್ಲೆಂಡ್‌ ಪ್ರವಾಸ, ಏನು ವಿಶೇಷ? ಇಲ್ಲಿದೆ ಮಾಹಿತಿ
ರಾಹುಲ್ ಗಾಂಧಿ
Follow us on

ನವದೆಹಲಿ: ಭಾರತ್ ಜೋಡೋ ಯಾತ್ರೆ ಯಶಸ್ಸು ಕಂಡಿರುವ ಸಂಭ್ರಮದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಇಂದಿನಿಂದ (ಫೆ.28) 10 ದಿನಗಳ ಕಾಲ ಇಂಗ್ಲೆಂಡ್‌ ಪ್ರವಾಸಕ್ಕೆ(England tour) ತೆರಳಲಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 4ರವರೆಗೆ ಇಂಗ್ಲೆಂಡ್​ಗೆ ತೆರಳಲಿದ್ದು, ಕೆಂಬ್ರಿಡ್ಜ್‌ ಬಳಿಕ ಲಂಡನ್‌ನಲ್ಲೂ ಕೆಲ ದಿನ ಇರಲಿದ್ದಾರೆ. ಈ ವೇಳೆ ಕೆಂಬ್ರಿಡ್ಜ್‌ನಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ. ಅದಾದ ಬಳಿಕ ವಿವಿಯ ಆವರಣದಲ್ಲಿ ಸರಣಿ ಸಂವಾದ ಕಾರ್ಯಕ್ರಗಳಲ್ಲಿ ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿ ವ್ಯಾಸಂಗ ಮಾಡಿರುವ ಕೆಂಬ್ರಿಡ್ಜ್‌ ವಿವಿಗೆ ಭೇಟಿ ನೀಡಲಿದ್ದು, ಜಿಯೋಪಾಲಿಟಿಕ್ಸ್, ಅಂತರಾಷ್ಟ್ರೀಯ ಸಂಬಂಧಗಳು, ದೊಡ್ಡ ಡೇಟಾ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲವು ಜ್ಞಾನವಂತ ಮನಸ್ಸುಗಳೊಂದಿಗೆ ಸಂವಾದ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನು ಇತ್ತೀಚೆಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ನಾನು ಕಲಿತ ವಿಶ್ವವಿದ್ಯಾಲಯವಾದ ಕೆಂಬ್ರಿಡ್ಜ್‌ ವಿವಿಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಕೆಬ್ರಿಡ್ಜ್‌ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದೇನೆ. ಜಿಯೋಪಾಲಿಟಿಕ್ಸ್, ಅಂತರಾಷ್ಟ್ರೀಯ ಸಂಬಂಧಗಳು, ದೊಡ್ಡ ಡೇಟಾ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲವು ಜ್ಞಾನವಂತ ಮನಸ್ಸುಗಳೊಂದಿಗೆ ತೊಡಗಿಸಿಕೊಳ್ಳಲು ಸಂತೋಷವಾಗುತ್ತಿದೆ ಎಂದಿದ್ದರು.

ಇನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದು,’ಈ ತಿಂಗಳ ಕೊನೆಯಲ್ಲಿ ನಮ್ಮ ವಿವಿಗೆ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ. ಅವರು ಕೆಂಬ್ರಿಡ್ಜ್‌ ಎಂಬಿಎ ಕುರಿತು ಉಪನ್ಯಾಸ ನೀಡುತ್ತಾರೆ ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಬಿಗ್ ಡೇಟಾ ಮತ್ತು ಡೆಮಾಕ್ರಸಿ ಮತ್ತು ಭಾರತ-ಚೀನಾ ಸಂಬಂಧಗಳ ಕುರಿತು ಕಾರ್ಯಕ್ರಗಳನ್ನು ನಡೆಸಿಕೊಡಲಿದ್ದಾರೆ ಎಂದು ಟ್ವೀಟ್‌ ಮಾಡಿತ್ತು.