ಕೊರೊನಾಗೆ ಬಲಿಯಾದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್

|

Updated on: Aug 28, 2020 | 9:18 PM

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ಹರಿಕೃಷ್ಣ ವಸಂತ್ ಕುಮಾರ್ ಶುಕ್ರವಾರ ಸಾಯಂಕಾಲ ಪಿಡುಗಿಗೆ ಬಲಿಯಾದರು, ಅವರಿಗೆ 70 ವರ್ಷ ವಯಸ್ಸಾಗಿತ್ತು. ವಸಂತ್ ಕುಮಾರ್ ಅವರನ್ನು ಇದೇ ತಿಂಗಳು 10ನೇ ತಾರೀಕಿನಂದು ಚೆನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಆಸ್ಪತ್ರೆಗೆ ಸೇರಿಸಿದ ನಂತರ ನ್ಯುಮೊನಿಯಾ ಕೂಡ ಬಾಧಿಸಲಾರಂಭಿಸಿದ್ದರಿಂದ ಅವರ ಆರೋಗ್ಯ ತೀವ್ರಗತಿಯಲ್ಲಿ ಕ್ಷೀಣಿಸಲಾರಂಭಿಸಿತ್ತು. ವೈದ್ಯರ ಪ್ರಕಾರ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲ ಬಾರಿಗೆ ಸಂಸದರಾಗಿದ್ದ ವಸಂತ ಕುಮಾರ್, ಅದಕ್ಕೆ ಮೊದಲು ಎರಡು […]

ಕೊರೊನಾಗೆ ಬಲಿಯಾದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್
Follow us on

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ಹರಿಕೃಷ್ಣ ವಸಂತ್ ಕುಮಾರ್ ಶುಕ್ರವಾರ ಸಾಯಂಕಾಲ ಪಿಡುಗಿಗೆ ಬಲಿಯಾದರು, ಅವರಿಗೆ 70 ವರ್ಷ ವಯಸ್ಸಾಗಿತ್ತು.

ವಸಂತ್ ಕುಮಾರ್ ಅವರನ್ನು ಇದೇ ತಿಂಗಳು 10ನೇ ತಾರೀಕಿನಂದು ಚೆನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಆಸ್ಪತ್ರೆಗೆ ಸೇರಿಸಿದ ನಂತರ ನ್ಯುಮೊನಿಯಾ ಕೂಡ ಬಾಧಿಸಲಾರಂಭಿಸಿದ್ದರಿಂದ ಅವರ ಆರೋಗ್ಯ ತೀವ್ರಗತಿಯಲ್ಲಿ ಕ್ಷೀಣಿಸಲಾರಂಭಿಸಿತ್ತು. ವೈದ್ಯರ ಪ್ರಕಾರ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೊದಲ ಬಾರಿಗೆ ಸಂಸದರಾಗಿದ್ದ ವಸಂತ ಕುಮಾರ್, ಅದಕ್ಕೆ ಮೊದಲು ಎರಡು ಬಾರಿ ಶಾಸಕನಾಗಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ರಾಜಕಾರಣಿಯಲ್ಲದೆ, ಉದ್ಯಮಿಯೂ ಆಗಿದ್ದ ಅವರು ಗೃಹುಪಯೋಗಿ ವಸ್ತುಗಳ ಅತಿ ದೊಡ್ಡ ಸರಪಳಿಯಾಗಿರುವ ವಸಂತ್ ಌಂಡೆ್ ಕಂಪನಿಯ ಸಂಸ್ಥಾಪಕರಾಗಿದ್ದರು . ತಮಿಳನಾಡಿನಲ್ಲಿ ಜನಪ್ರಿಯ ಟಿವಿ ಚ್ಯಾನಲ್​ಗಳಲ್ಲೊಂದಾಗಿರುವ ವಸಂತ್ ಟಿವಿ ಅವರ ಒಡೆತನಕ್ಕೆ ಸೇರಿದ್ದು.

ವಸಂತ್ ಅವರ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ

‘‘ವಸಂತ್ ಕುಮಾರ್ ಜೀ ಅವರ ಸಾವಿನ ಸುದ್ದಿ ಕೇಳಿ ದುಖಃವಾಗಿದೆ. ಉದ್ಯಮ ಹಾಗು ಸಾಮಾಜಿಕ ಸೇವೆಗೆ ಅವರು ನೀಡಿರುವ ಕಾಣಿಕೆ ಉಲ್ಲೇಖನೀಯವಾಗಿದೆ. ಅವರೊಂದಿಗೆ ಮಾತಾಡುವಾಗಲೆಲ್ಲ ತಮಿಳು ನಾಡಿನ ಪ್ರಗತಿ ಬಗ್ಗೆ ಅವರಿಗಿದ್ದ ಕಾಳಜಿಯನ್ನು ನಾನು ಗಮನಿಸುತ್ತಿದ್ದೆ. ಅವರ ಕುಟುಂಬ, ಸ್ನೇಹಿತರು ಹಾಗು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ@narendramodi’’

ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

‘‘ಹುಟ್ಟು ಹೋರಾಟಗಾರ, ದಿಟ್ಟ ಕಾಂಗ್ರೆಸ್ ನಾಯಕ, ಸಂಸದ, ಮತ್ತು ಟಿಎನ್​ಸಿಸಿಯ ಕಾರ್ಯಾಧ್ಯಕ್ಷರಾಗಿದ್ದ ವಸಂತ್ ಕುಮಾರ್ ಅವರ ಅಕಾಲಿಕ ಮರಣದಿಂದ ಅತೀವ ದುಖಃವಾಗಿದೆ. ಅವರ ಲಕ್ಷಾಂತರ ಬೆಂಬಲಿಗರೊಂದಿಗೆ ನಾವೆಲ್ಲ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಹೃದಯಾಂತರಾಳದ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ@rssurjewala’’ 

ಅಂದಹಾಗೆ, ಕೊವಿಡ್ ಬಲಿಯಾದ ಮೊದಲ ಸಂಸದ ವಸಂತ್ ಕುಮಾರ್ ಅವರಾಗಿದ್ದಾರೆ