Rahul Gandhi Birthday: ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿಗೆ 51ನೇ ಹುಟ್ಟುಹಬ್ಬದ ಸಂಭ್ರಮ; ಕಾಂಗ್ರೆಸ್​​ನಿಂದ ಸೇವಾ ದಿವಸ್​ ಆಚರಣೆ

| Updated By: Lakshmi Hegde

Updated on: Jun 19, 2021 | 11:59 AM

Sewa Diwas: ರಾಹುಲ್ ಗಾಂಧಿಯವರ ಜನ್ಮದಿನದಂದು ದೇಶಾದ್ಯಂತ ಸೇವಾ ದಿವಸ್​ ಆಚರಿಸುತ್ತಿರುವ ಕಾಂಗ್ರೆಸ್​, ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್​ಮಾಸ್ಕ್​, ಮೆಡಿಸಿನ್​ ಕಿಟ್​, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ.

Rahul Gandhi Birthday: ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿಗೆ 51ನೇ ಹುಟ್ಟುಹಬ್ಬದ ಸಂಭ್ರಮ; ಕಾಂಗ್ರೆಸ್​​ನಿಂದ ಸೇವಾ ದಿವಸ್​ ಆಚರಣೆ
ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ
Follow us on

ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿಯವರಿಗೆ ಇಂದು 51ನೇ ಜನ್ಮದಿನದ ಸಂಭ್ರಮ. ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದ ಅವರು ಕಳೆದ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕಂತೂ ಕೇರಳದ ವಯಾನಾಡಿನ ಸಂಸದರಾಗಿರುವ ಅವರು ಪಕ್ಷದ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಅದ್ಯಾಕೋ ಮನಸು ಮಾಡುತ್ತಿಲ್ಲ. ಅದೇನೇ ಇರಲಿ ಇಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್​ ಗಾಂಧಿಯವರಿಗೆ ಕಾಂಗ್ರೆಸ್​ ಮುಖಂಡರು, ನಾಯಕರು ಶುಭಕೋರಿದ್ದಾರೆ. ಹಾಗೇ ಇಂದು ಅವರ ಜನ್ಮದಿನವನ್ನು ಪಕ್ಷ ಸೇವಾ ದಿವಸ್​ ಆಗಿ ಆಚರಿಸುತ್ತಿದೆ.

ರಾಹುಲ್ ಗಾಂಧಿಯವರ ಜನ್ಮದಿನದಂದು ದೇಶಾದ್ಯಂತ ಸೇವಾ ದಿವಸ್​ ಆಚರಿಸುತ್ತಿರುವ ಕಾಂಗ್ರೆಸ್​, ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್​ಮಾಸ್ಕ್​, ಮೆಡಿಸಿನ್​ ಕಿಟ್​, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಕಾಂಗ್ರೆಸ್​ ನಿಂತಿದೆ. ಇನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಜತೆಗೆ ಅವರ ಅಗತ್ಯಗಳನ್ನು ಕೇಳಿ, ಪೂರೈಸುತ್ತಿದ್ದಾರೆ.

ಇನ್ನು ರಾಹುಲ್​ ಗಾಂಧಿಯವರಿಗೆ ಕೇವಲ ಕಾಂಗ್ರೆಸ್​ ನಾಯಕರಷ್ಟೇ ಅಲ್ಲದೆ ಎಲ್ಲ ಪಕ್ಷಗಳ ಕೆಲವು ಮುಖಂಡರೂ ಟ್ವಿಟರ್​ ಮೂಲಕ ಶುಭಹಾರೈಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ಕೇಂದ್ರ ಇಲಾಖೆಯ ರಾಜ್ಯ ಸಚಿವ ಬಬುಲ್ ಸುಪ್ರಿಯೋ, ಕೇಂದ್ರ ಮಂತ್ರಿ ನಿತಿನ್​ ಗಡ್ಕರಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತೇಜಸ್ವಿ ಯಾದವ್, ಶಶಿ ತರೂರ್​​ ಸೇರಿ ಹಲವು ನಾಯಕರು ರಾಹುಲ್​ ಗಾಂಧಿ ಬರ್ತ್​ ಡೇಗೆ ವಿಶ್​ ಮಾಡಿ, ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಅದಷ್ಟೇ ಅಲ್ಲದೆ ಕಾಂಗ್ರೆಸ್​ ಕಾರ್ಯಕರ್ತರೂ ಸಹ ಟ್ವಿಟರ್​​ನಲ್ಲಿ ರಾಹುಲ್​ ಗಾಂಧಿಯವರ ಫೋಟೋ ಹಾಕಿ ವಿಶ್​ ಮಾಡಿದ್ದಾರೆ.

ಟ್ವಿಟರ್​​ನಲ್ಲಿ ಮೀಮ್ಸ್​ಗಳು
ಇನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ದೇಶಾದ್ಯಂತ ಅನೇಕರು ತಮಾಷೆ ಮಾಡುತ್ತಾರೆ. ಅದೆಷ್ಟೋ ಕಾರಣಕ್ಕೆ ಈಗಾಗಲೇ ಅವರು ಟ್ರೋಲ್ ಆಗಿದ್ದಾರೆ. ಹಾಗೇ ಬರ್ತ್​ ಡೇ ದಿನ ಕೂಡ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿ ಟ್ವೀಟ್ ಮಾಡುವ ಮೂಲಕ ವಿಶ್​ ಮಾಡಿದ್ದಾರೆ. ರಾಹುಲ್​ ಗಾಂಧಿಯವರನ್ನು ಜೋಕ್​ ಮಾಡಿದ ಮೀಮ್ಸ್​ಗಳನ್ನು ಹಾಕಿ ಫನ್ನಿ ವಿಶ್​​ಗಳನ್ನೂ ಮಾಡಿದ್ದಾರೆ.