Milkha Singh: ಇಂದು ಸಂಜೆ 5ಗಂಟೆಗೆ ಮಿಲ್ಖಾ ಸಿಂಗ್​ ಅಂತ್ಯಕ್ರಿಯೆ; ಮನೆಯಲ್ಲೇ ಅಂತಿಮ ದರ್ಶನಕ್ಕೆ ಸಿದ್ಧತೆ, ಪೊಲೀಸ್ ಬಿಗಿ ಭದ್ರತೆ

ಮಿಲ್ಖಾ ಸಿಂಗ್​​ರಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ನಂತರ ತಮ್ಮ ಮನೆಯಲ್ಲೇ ಐಸೋಲೇಟ್​ ಆಗಿದ್ದರು. ಆರೋಗ್ಯ ಬಿಗಡಾಯಿಸಿದ ಬೆನ್ನಲ್ಲೇ ಐಸಿಯುಗೆ ದಾಖಲಿಸಲಾಗಿತ್ತು.

Milkha Singh: ಇಂದು ಸಂಜೆ 5ಗಂಟೆಗೆ ಮಿಲ್ಖಾ ಸಿಂಗ್​ ಅಂತ್ಯಕ್ರಿಯೆ; ಮನೆಯಲ್ಲೇ ಅಂತಿಮ ದರ್ಶನಕ್ಕೆ ಸಿದ್ಧತೆ, ಪೊಲೀಸ್ ಬಿಗಿ ಭದ್ರತೆ
ಮಿಲ್ಖಾ ಸಿಂಗ್ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on: Jun 19, 2021 | 10:22 AM

ಚಂಡೀಗಢ: ಕೊರೊನಾದಿಂದ ಮೃತಪಟ್ಟ ಮಿಲ್ಖಾಸಿಂಗ್​​ರಿಗೆ ಇಡೀ ದೇಶ ಗೌರವ ಸಲ್ಲಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅನೇಕ ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್​ರನ್ನು ಮೇ 24ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ನಿಧನರಾದರು. ಮಿಲ್ಖಾ ಸಿಂಗ್​ ಪತ್ನಿ ನಿರ್ಮಲಾ ಕೌರ್​ ಕೂಡ ಕೆಲವು ದಿನಗಳ ಹಿಂದಷ್ಟೇ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಮಿಲ್ಖಾ ಸಿಂಗ್​ ಅವರ ಅಂತ್ಯಕ್ರಿಯೆ ಇಂದು ಸಂಜೆ 5ಗಂಟೆಗೆ ಚಂಡಿಗಢ್​​ನಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಸದ್ಯ ಅವರ ಮೃತದೇಹವನ್ನು ಚಂಡೀಗಢದ ಸೆಕ್ಟರ್​ 8ರಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಅವರ ಮನೆಗೆ ಇಂದು ಗಣ್ಯರು ಭೇಟಿ ನೀಡಲಿದ್ದು, ತನ್ನಿಮಿತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಮಿಲ್ಖಾ ಸಿಂಗ್​​ರಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ನಂತರ ತಮ್ಮ ಮನೆಯಲ್ಲೇ ಐಸೋಲೇಟ್​ ಆಗಿದ್ದರು. ಆರೋಗ್ಯ ಬಿಗಡಾಯಿಸಿದ ಬೆನ್ನಲ್ಲೇ ಚಂಡೀಗಢ ವೈದ್ಯಕೀಯ ಮಹಾ ವಿದ್ಯಾಲಯದ ಕೊವಿಡ್​ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಇದನ್ನೂ ಓದಿ: ಮೂರನೇ ಅಲೆಗೂ ಮೊದಲೇ ಶಿವಮೊಗ್ಗದಲ್ಲಿ ಆತಂಕ; ಕವಾಸಕಿ ಕಾಯಿಲೆಗೆ ಇಬ್ಬರು ಮಕ್ಕಳು ಬಲಿ