Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ಅಲೆಗೂ ಮೊದಲೇ ಶಿವಮೊಗ್ಗದಲ್ಲಿ ಆತಂಕ; ಕವಾಸಕಿ ಕಾಯಿಲೆಗೆ ಇಬ್ಬರು ಮಕ್ಕಳು ಬಲಿ

ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ 28 ಮಕ್ಕಳು ಕವಾಸಕಿ (ಮಲ್ಟಿ ಸಿಸ್ಟಂ ಇನ್ಪಾಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್ (ಎಂಐಎಸ್-ಸಿ) ) ಸಮಸ್ಯೆಯಿಂದ ಬಳುತ್ತಿದ್ದಾರೆ. ಮೃತಪಟ್ಟ 9 ವರ್ಷದ ಬಾಲಕನಿಗೆ ಅಪೌಷ್ಟಿಕತೆ ಬಿಟ್ಟು ಬೇರೆ ಆರೋಗ್ಯ ಸಮಸ್ಯೆಗಳಿರಲಿಲ್ಲ. ಇನ್ನೂ 15 ವರ್ಷದ ಬಾಲಕಿಗೆ ಸಿಸ್ಟೆಮಿಕ್ ಲೂಪಸ್ ಆರಿತೊಮೆಟೂಸಸ್ ಎಂಬ ದೇಹದ ರೋಗ ನಿರೋಧಕ ಶಕ್ತಿಯೇ ಆರೋಗ್ಯವಂತ ಅಂಗಾಂಗಗಳ ಮೇಲೆ ದಾಳಿ ಮಾಡುವ ರೋಗವಿತ್ತು.

ಮೂರನೇ ಅಲೆಗೂ ಮೊದಲೇ ಶಿವಮೊಗ್ಗದಲ್ಲಿ ಆತಂಕ; ಕವಾಸಕಿ ಕಾಯಿಲೆಗೆ ಇಬ್ಬರು ಮಕ್ಕಳು ಬಲಿ
ಶಿವಮೊಗ್ಗ ಆಸ್ಪತ್ರೆ
Follow us
TV9 Web
| Updated By: preethi shettigar

Updated on:Jun 19, 2021 | 10:07 AM

ಶಿವಮೊಗ್ಗ: ಕೊರೊನಾ ಎರಡನೇ ಅಲೆ ಗಣನೀಯವಾಗಿ ತಗ್ಗುತ್ತಿರುವಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಈ ನಡುವೆ ಮಲೆನಾಡಿನಲ್ಲಿ ಕೊರೊನಾ ಬಂದು ಹೋದ ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ತೀವ್ರ ಆತಂಕ ಎದುರಾಗಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಯಾವುದೇ ರೀತಿಯ ಆಪತ್ತು ಎದುರಾಗಿಲ್ಲ. ಆದರೆ ಕೊರೊನಾ ಬಂದು ಹೋದ ಒಂದು ಒಂದೂವರೆ ತಿಂಗಳ ಬಳಿಕ ಕೊರೊನಾದಿಂದ ಗುಣಮುಖ ಹೊಂದಿದ ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಈಗಾಗಲೇ ಕೊರೊನಾ ಎರಡನೇ ಅಲೆ ಕೊನೆ ಹಂತದಲ್ಲಿದ್ದು, ಇದರ ಬಳಿಕ ಮೂರನೆ ಅಲೆ ಬರುತ್ತದೆ ಎನ್ನುವುದು ತಜ್ಞರ ಮಾತಾಗಿದ್ದು, ಮೂರನೆ ಅಲೆ ಮಕ್ಕಳನ್ನು ಹೆಚ್ಚು ಕಾಡುತ್ತದೆ ಎನ್ನುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ. ಆದರೆ ಈ ಮೂರನೇ ಅಲೆ ಬರುವ ಮುನ್ನವೇ ಕೊರೊನಾ ತನ್ನ ಮತ್ತೊಂದು ಸ್ವರೂಪ ತೋರಿಸುತ್ತಿದೆ. ಕೊರೊನಾದಿಂದ ಗುಣಮುಖವಾದ ಮಕ್ಕಳಲ್ಲಿ ಕವಾಸಕಿ ರೋಗ ಕಂಡು ಬರುತ್ತಿದೆ. ಶಿವಮೊಗ್ಗದಲ್ಲಿ ಕಳೆದ ಒಂದು ತಿಂಗಳಲ್ಲಿ ಅನೇಕ ಮಕ್ಕಳಲ್ಲಿ ಈ ರೋಗವು ಕಂಡು ಬಂದಿದೆ.

ಈಗಾಗಲೇ ಎರಡು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಬಲಿಯಾಗಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ 28 ಮಕ್ಕಳು ಕವಾಸಕಿ (ಮಲ್ಟಿ ಸಿಸ್ಟಂ ಇನ್ಪಾಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್ (ಎಂಐಎಸ್-ಸಿ) ) ಸಮಸ್ಯೆಯಿಂದ ಬಳುತ್ತಿದ್ದಾರೆ. ಮೃತಪಟ್ಟ 9 ವರ್ಷದ ಬಾಲಕನಿಗೆ ಅಪೌಷ್ಟಿಕತೆ ಬಿಟ್ಟು ಬೇರೆ ಆರೋಗ್ಯ ಸಮಸ್ಯೆಗಳಿರಲಿಲ್ಲ. ಇನ್ನೂ 15 ವರ್ಷದ ಬಾಲಕಿಗೆ ಸಿಸ್ಟೆಮಿಕ್ ಲೂಪಸ್ ಆರಿತೊಮೆಟೂಸಸ್ ಎಂಬ ದೇಹದ ರೋಗ ನಿರೋಧಕ ಶಕ್ತಿಯೇ ಆರೋಗ್ಯವಂತ ಅಂಗಾಂಗಗಳ ಮೇಲೆ ದಾಳಿ ಮಾಡುವ ರೋಗವಿತ್ತು. ಈ ಇಬ್ಬರು ಮಕ್ಕಳು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಈ ಕವಾಸಕಿ ರೋಗವು ಲೋ ಬಿಪಿಯಾಗಿ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಕವಾಸಕಿಯು ಅನ್ಯ ಆರೋಗ್ಯ ಸಮಸ್ಯೆ ಹೊಂದಿರುವ 8 ರಿಂದ 16 ವರ್ಷದೊಳಿಗ ಮಕ್ಕಳಿಗೆ ಕೊರೊನಾ ಸೋಂಕು ಆದ ನಾಲ್ಕೈದು ವಾರಗಳ ಬಳಿಕ ಉರಿಯೂತ (ಇನ್ ಫ್ಲಮೇಶನ್) ಕಾಣಿಸುತ್ತದೆ. ಇದರ ಚಿಕಿತ್ಸೆಗೆ ಹ್ಯುಮನ್ ನಾರ್ಮಲ್ ಇಮ್ಯೂನೋಗ್ಲೋಬ್ಯುಲಿನ್ (IVNEX) ಇಂಜೆಕ್ಷನ್ ನೀಡಲಾಗುತ್ತಿದೆ. ಆರಂಭದಲ್ಲೇ ಮಕ್ಕಳಿಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಿದರೆ ಮಾತ್ರೆಯಲ್ಲಿ ಮಕ್ಕಳು ಗುಣಮುಖ ಆಗುತ್ತಾರೆ. ರೋಗವು ಉಲ್ಬಣವಾದ ಮೇಲೆ ಬಂದರೆ ಮಕ್ಕಳಿಗೆ ಕನಿಷ್ಠ ಐದು ದಿನ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಮಕ್ಕಳ ವೈದ್ಯರಾದ ಡಾ. ಧನಂಜಯರ್ ಸರ್ಜಿ ತಿಳಿಸಿದ್ದಾರೆ.

ಗಂಭೀರ ಇರುವ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ ಗಂಭೀರ ಇರುವ ಮಕ್ಕಳಿಗೆ ಐವಿನೆಕ್ಸ್ ಇಂಜೆಕ್ಷನ್ ಕೊಟ್ಟು ಗುಣ ಮಾಡಬೇಕು. ಸದ್ಯ ಈ ಇಂಜೆಕ್ಷನ್ ತುಂಬಾ ದುಬಾರಿಯಾಗಿದೆ. ಮಕ್ಕಳ ತೂಕದ ಆಧಾರ ಮೇಲೆ ಈ ಇಂಜೆಕ್ಷನ್ ನೀಡಲಾಗುತ್ತಿದೆ. ಒಂದು ಕೆಜಿಗೆ ಎರಡು ಗ್ರಾಂ ಒಂದು ಇಂಜೆಕ್ಷನ್ ನೀಡಬೇಕು. ಒಂದು ಗ್ರಾಂ ಎಂಜೆಕ್ಷನ್​ಗೆ ಎರಡು ಸಾವಿರ ರೂಪಾಯಿದೆ. ಸದ್ಯ ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಬಂದಂತ ಪೋಷಕರು 13 ವರ್ಷದ ಮಗನಿಗೆ ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಮಕ್ಕಳ ವೈದ್ಯರಾದ ಡಾ. ಧನಂಜಯರ್ ಸರ್ಜಿ ಹೇಳಿದ್ದಾರೆ.

ಬಾಲಕನಿಗೆ ಕೊರೊನಾ ಬಂದು ಒಂದು ತಿಂಗಳ ಮೇಲೆ ಆಗಿದೆ. ಬಳಿಕ ಈ ಬಾಲಕನ ಆರೋಗ್ಯದಲ್ಲಿ ಏರುಪೇರು ಆಗಿದೆ. ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಕವಾಸಕಿ ಚಿಕಿತ್ಸೆಗೆ ಇಂಜೆಕ್ಷನ್ ಶುರುಮಾಡಿದ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಒಂದು ಇಂಜೆಕ್ಷನ್ 16 ಸಾವಿರ ರೂಪಾಯಿ ಇದೆ. ಐವಿನೆಕ್ಸ್ ಇಂಜೆಕ್ಷನ್ ತುಂಬಾ ದುಬಾರಿಯಾಗಿದೆ. ಇನ್ನೂ ಅದು ಹೆಚ್ಚು ಪೂರೈಕೆ ಕೂಡಾ ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬಡ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಆರೋಗ್ಯ ದೃಷ್ಟಿಕೋನದಿಂದ ಈ ಇಂಜೆಕ್ಷನ್ ಉಚಿತವಾಗಿ ರಾಜ್ಯ ಸರಕಾರವು ಪೂರೈಕೆ ಮಾಡಬೇಕೆಂದು ಅನಾರೋಗ್ಯದಿಂದ ಬಳುತ್ತಿರುವ ಮಕ್ಕಳ ಪೋಷಕರಾದ ಸಿದ್ರಾಮಪ್ಪ ಮತ್ತು ಮಮತಾ ಮನವಿ ಮಾಡಿಕೊಂಡಿದ್ದಾರೆ. ಒತ್ತಾಯಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ 3364 ಮಕ್ಕಳಿಗೆ ಕೊರೊನಾ ಬಂದಿದೆ. ಮಕ್ಕಳ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳನ್ನು ಈಗಾಗಲೇ ಎಲ್ಲ ಪ್ರಾಥಮಿಕ ಮತ್ತು ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 254 ಅಪೌಷ್ಠಿಕ ಮಕ್ಕಳು ಇದ್ದಾರೆ. ಅವರಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪೋಷಕರು ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದರೆ ಕೂಡಲೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಈಗಾಗಲೇ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಎಚ್​ಒ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊವಿಡ್ ಮೂರನೇ ಅಲೆ: ಗರಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಹಿಳಾ ಇಲಾಖಾ ಅಧಿಕಾರಿಗಳಿಗೆ ಶಶಿಕಲಾ ಜೊಲ್ಲೆ ತಾಕೀತು

ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು

Published On - 10:05 am, Sat, 19 June 21