ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು

ಮಾರ್ಚ್‌ನಲ್ಲಿ ಸೋಂಕಿತ ಮಕ್ಕಳ ಪ್ರಮಾಣ ಶೇ.3ರಷ್ಟಿತ್ತು. ಆದ್ರೀಗ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಏರಿಕೆ ಆಗುತ್ತಿದೆ. 0-12 ವರ್ಷದೊಳಗಿನ ಮಕ್ಕಳಲ್ಲೇ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಕೊರೊನಾ ಅನ್ಲಾಕ್ ಬೆನ್ನಲ್ಲೇ ಜನರ ಓಡಾಟ ಹೆಚ್ಚಳದ ಜೊತೆಗೆ ಸೋಂಕಿನ‌ ಪ್ರಮಾಣವೂ ಏರಿಕೆಯಾಗುತ್ತಿದೆ.

ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 17, 2021 | 8:15 AM

ಬೆಂಗಳೂರು: ಸದ್ಯ ಕೊರೊನಾ ಎರಡನೇ ಅಲೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ರಾಜ್ಯಕ್ಕೆ ವಿಧಿಸಿದ್ದ ಲಾಕ್ಡೌನ್ ಸಹ ಅನ್ಲಾಕ್ ಆಗಿದೆ. ಆದ್ರೆ ಅವಧಿಗೂ ಮುನ್ನವೇ ಕೊವಿಡ್ 3ನೇ ಅಲೆ ಹರಡಲಿದೆಯಾ? ಎಂಬ ಅನುಮಾನ ಹುಟ್ಟಿದೆ. 2ನೇ ಅಲೆ ಇಳಿಕೆಯ ಬೆನ್ನಲ್ಲೇ ಮಕ್ಕಳಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ.

ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಕೊರೊನಾದ ಮೂರನೇ ಅಲೆ ಶುರುವಾಗುತ್ತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದ್ರೆ ಆಗಸ್ಟ್ ಮುನ್ನವೇ ಮೂರನೇ ಅಲೆ ದೇಶಕ್ಕೆ, ರಾಜ್ಯಕ್ಕೆ ಅಪ್ಪಳಿಸುವ ಭೀತಿ ಶುರುವಾಗಿದೆ. ಈಗಾಗಲೇ ರಾಜ್ಯದಲ್ಲಿ ಅನೇಕ ಮಕ್ಕಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಜೂನ್ 7ರಿಂದ ಜೂನ್ 14ರವರೆಗೂ ಮಕ್ಕಳಲ್ಲೇ ಹೆಚ್ಚು ಸೋಂಕು ಕಂಡು ಬಂದಿದೆ. ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಮಾರ್ಚ್‌ನಲ್ಲಿ ಸೋಂಕಿತ ಮಕ್ಕಳ ಪ್ರಮಾಣ ಶೇ.3ರಷ್ಟಿತ್ತು. ಆದ್ರೀಗ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಏರಿಕೆ ಆಗುತ್ತಿದೆ. 0-12 ವರ್ಷದೊಳಗಿನ ಮಕ್ಕಳಲ್ಲೇ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಕೊರೊನಾ ಅನ್ಲಾಕ್ ಬೆನ್ನಲ್ಲೇ ಜನರ ಓಡಾಟ ಹೆಚ್ಚಳದ ಜೊತೆಗೆ ಸೋಂಕಿನ‌ ಪ್ರಮಾಣವೂ ಏರಿಕೆಯಾಗುತ್ತಿದೆ.

3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕ ಬೇಡ ಕೊರೊನಾ ವೈರಸ್ ಸೋಂಕಿನ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ (All India Institute of Medical Sciences – AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಂಗಳವಾರ ಅಭಿಪ್ರಾಯಪಟ್ಟಿದ್ದರು.

ಭಾರತದಲ್ಲಿ ಕೊರೊನಾ ಸೋಂಕಿನ ಎರಡೂ ಅಲೆಗಳಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಹಳೆಯ ವೈರಾಣು ಇರಬಹುದು ಅಥವಾ ಹೊಸ ರೂಪಾಂತರವೇ ಇರಬಹುದು ಅದರಿಂದ ಮಕ್ಕಳಲ್ಲಿ ತೀವ್ರತರವಾದ ಅಪಾಯ ಇದೆ ಎನ್ನಲು ಆಗುವುದಿಲ್ಲ ಎಂದು ಅವರು ಹೇಳಿದರು. ‘ವಿಶ್ವದ ಅಥವಾ ಭಾರತದಲ್ಲಿ ಸಂಗ್ರಹಿಸಿದ ಯಾವುದೇ ದತ್ತಾಂಶವನ್ನು ಗಮನಿಸಿದರೂ ಮಕ್ಕಳಿಗೆ ಹೆಚ್ಚು ಆತಂಕವಿದೆ ಎಂದು ಅನ್ನಿಸುವುದಿಲ್ಲ. 2ನೇ ಅಲೆಯಲ್ಲಿಯೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಸೋಂಕಿನ ಲಕ್ಷಣಗಳು ಅಲ್ಪಪ್ರಮಾಣದಲ್ಲಿ (ಮೈಲ್ಡ್) ಕಾಣಿಸಿಕೊಂಡಿತ್ತು. ವಿಶ್ವದ ಇತರ ದೇಶಗಳಲ್ಲಿ ಸಂಗ್ರಹಿಸಿದ್ದ ದತ್ತಾಂಶ ವಿಶ್ಲೇಷಿಸಿದಾಗ ಮಕ್ಕಳಲ್ಲಿ ತೀವ್ರತರನಾದ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನಲು ಆಗುವುದಿಲ್ಲ’ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕ ಬೇಡ: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೆರಿಯಾ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್