ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?

ಅವನು ದುಡ್ ಮಾಡ್ಬೇಕು ಅಂತಾ ಸಿಲಿಕಾನ್ಸಿಟಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸಕ್ಕೂ ಸೇರಿದ್ದ. ಪ್ರತಿದಿನವೂ ಕಾಸು ನೋಡುತ್ತಿದ್ದ. ಕೆಲಸ ಮುಗೀತಿದ್ದಂತೆ ಫುಲ್ ಟೈಟ್ ಆಗ್ತಿದ್ದ. ಹೀಗಿದ್ದವನು ಲಾಲ್ಡೌನ್ ಅಂತಾ ಊರಿಗೆ ಬಂದು ಓಡಾಡಿಕೊಂಡಿದ್ದವನು ಈಗ ಮಸಣ ಸೇರಿದ್ದಾನೆ.

ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?
ಚಂದನ್ ಕೊಲೆಯಾದ ಯುವಕ
Follow us
TV9 Web
| Updated By: ಆಯೇಷಾ ಬಾನು

Updated on: Jun 17, 2021 | 7:27 AM

ಮಂಡ್ಯ: ಹಣ ಮಾಡಬೇಕು ಅಂತ ಬೆಂಗಳೂರಿಗೆ ಬಂದವ ವಾಪಸ್ ಮನೆಗೆ ಹೋಗುತ್ತಿದ್ದಂತೆ ಕೊಲೆಯಾಗಿದ್ದಾರೆ. ಚಂದನ್(22) ಕೊಲೆಯಾದ ಯುವಕ. ಈತ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದ ನಿವಾಸಿ. ದುಡ್ ಮಾಡ್ಬೇಕು ಅಂತಾ ಗಂಟು ಮೂಟೆ ಕಟ್ಕೊಂಡು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸ ಮಾಡ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದ. ಪ್ರತಿದಿನ ದೇಹಕ್ಕೆ ಮತ್ತೇರಿಸಿಕೊಂಡು ಮಜಾ ಮಾಡ್ತಿದ್ದ. ಮೂರು ತಿಂಗಳಿಗೊಮ್ಮೆನೋ ಅಥವಾ ಆರು ತಿಂಗಳಿಗೊಮ್ಮೆನೋ ಊರಿಗೆ ಹೋಗುತ್ತಿದ್ದ. ಒಂದೆರಡು ದಿನ ಊರಲ್ಲಿದ್ದು ವಾಪಸ್ ಬೆಂಗಳೂರಿಗೆ ಬರ್ತಿದ್ದ. ಆದ್ರೆ, 2ನೇ ಅಲೆಯ ಹೊಡೆತದಿಂದ ಬೆಂಗಳೂರು ಲಾಕ್ಡೌನ್ ಆಗಿದ್ದೇ ತಡ, ಈ ಚಂದನ್ ಊರಿಗೆ ಹೋಗಿದ್ದ. ತಂದೆ, ತಾಯಿ ಮತ್ತು ಅಣ್ಣನ ಜೊತೆ ವಾಸವಿದ್ದ. ಆದರೆ ಸಿಲ್ಲಿ ವಿಚಾರಕ್ಕೆ ಅಣ್ಣನಾದ ಅಭಿಷೇಕ್, ಚಂದನ್ನ್ನ ಕೊಲೆ ಮಾಡಿದ್ದಾನೆ. ಅದು ಕೂಡ ಕಲ್ಲಿನಿಂದ ಜಜ್ಜಿ ಪರಾರಿ ಆಗಿದ್ದಾನೆ.

ಎಣ್ಣೆ ಪಾರ್ಟಿಗಳ ನಡುವೆ ಕಿರಿಕ್.. ತಮ್ಮ ಕೊಲೆ ಈ ಚಂದನ್, ಅಭಿಷೇಕ್ ಇಬ್ರೂ ಎಣ್ಣೆ ಪಾರ್ಟಿಗಳೇ. ಹೀಗಾಗಿ ಅಣ್ಣ, ತಮ್ಮಂದಿರ ನಡುವೆ ಹೊಂದಾಣಿಕೆ ಇರಲಿಲ್ವಂತೆ. ಕುಡಿದ ಮತ್ತಲ್ಲಿ ಇಬ್ಬರು ಜಗಳ ಮಾಡಿಕೊಳ್ತಿದ್ರಂತೆ. ಮನೆಯಲ್ಲಿ ಇಬ್ಬರನ್ನ ಸಮಾಧಾನ ಮಾಡೋದೇ ಪೋಷಕರಿಗೆ ದೊಡ್ಡ ಕೆಲಸವಾಗಿತ್ತಂತೆ. ಹೀಗೆ ಮೊನ್ನೆಯೂ ಸಹೋದರರು ಕುಡಿದ ಮತ್ತಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೃಗದಂತೆ ಆದ ಅಭಿಷೇಕ್, ಕಲ್ಲಿನಿಂದ ಹೊಡೆದು ತಮ್ಮನನ್ನ ಕೊಂದು ತಲೆ ಮರೆಸಿಕೊಂಡಿದ್ದಾನೆ.

ಸದ್ಯ, ಒಬ್ಬ ಮಗನನ್ನ ಕಳೆದುಕೊಂಡಿರೋ ಪೋಷಕರು, ಇನ್ನೊಬ್ಬನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇತ್ತ, ಕೆರಗೋಡು ಪೊಲೀಸರು ಪರಾರಿ ಆಗಿರೋ ಆರೋಪಿಗೆ ಬಲೆ ಬೀಸಿದ್ದು, ಕೊಲೆಗೆ ಬೇರೆ ರೀಸನ್ ಏನಾದ್ರು ಇದ್ಯಾ ಅಂತಾ ತನಿಖೆ ಮಾಡ್ತಿದ್ದಾರೆ.

ಇದನ್ನೂ ಓದಿ: ಈ 4 ರಾಶಿಯ ಜನ ತುಂಬಾ ಕಾಸ್ಟ್ಲಿ ಲೈಫ್​ಸ್ಟೈಲ್ ಇಷ್ಟಪಡುತ್ತಾರೆ; ಇವರು ಹಣವನ್ನು ನೀರಿನಂತೆ ಬಳಸುತ್ತಾರೆ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು