ಈ 4 ರಾಶಿಯ ಜನ ತುಂಬಾ ಕಾಸ್ಟ್ಲಿ ಲೈಫ್​ಸ್ಟೈಲ್ ಇಷ್ಟಪಡುತ್ತಾರೆ; ಇವರು ಹಣವನ್ನು ನೀರಿನಂತೆ ಬಳಸುತ್ತಾರೆ

ರಾಯಲ್ ಹವ್ಯಾಸವು ಒಬ್ಬ ವ್ಯಕ್ತಿಯಲ್ಲಿ ಹುಟ್ಟಿನಿಂದಲೇ ಬರುತ್ತದೆ. ವ್ಯಕ್ತಿಯ ಜಾತಕದಲ್ಲಿ ಇರುವ ನಕ್ಷತ್ರಗಳು ಅವರ ಈ ಹವ್ಯಾಸಕ್ಕೆ ಕಾರಣವಾಗಿವೆ. ಅಂತಹ ನಾಲ್ಕು ರಾಶಿಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಈ 4 ರಾಶಿಯ ಜನ ತುಂಬಾ ಕಾಸ್ಟ್ಲಿ ಲೈಫ್​ಸ್ಟೈಲ್ ಇಷ್ಟಪಡುತ್ತಾರೆ; ಇವರು ಹಣವನ್ನು ನೀರಿನಂತೆ ಬಳಸುತ್ತಾರೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 17, 2021 | 6:50 AM

ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆ ಮಾತು ಕೇಳಿರುತ್ತೀರಿ. ಅದೇ ರೀತಿ ಕೆಲವು ಜನರು ತಮ್ಮ ಬಳಿ ಏನೂ ಇಲ್ಲದಿದ್ದರೂ ಬಹಳ ಇದೆ ಎಂಬಂತೆ ವರ್ತಿಸುತ್ತಿರುತ್ತಾರೆ. ಇಂತಹ ಜನ ಒಂದು ಕಡೆಯಾದ್ರೆ ಮತ್ತೆ ಕೆಲವರು ನಾವು ತುಂಬಾ ರಿಚ್ ಎಂಬಂತೆ ಕಾಸ್ಟ್ಲಿ ಲೈಫ್​ಸ್ಟೈಲ್ ಅವಲಂಭಿಸಿಕೊಂಡಿರುತ್ತಾರೆ. ಅವರ ಹವ್ಯಾಸಗಳು, ತಿನ್ನುವುದು, ಬಟ್ಟೆ, ಸೂಟುಬೂಟುಗಳನ್ನು ಧರಿಸುವ ವಿಷಯದಲ್ಲೂ ಬೆಸ್ಟ್ ಕ್ಯಾಲಿಟಿ, ಟಾಪ್ 1 ಗುಣಮುಟ್ಟದ ಕಾಸ್ಟ್ಲಿ ವಸ್ತುಗಳನ್ನೇ ಖರೀದಿಸಲು ಮತ್ತು ಬಳಸಲು ಇಷ್ಟಪಡುತ್ತಾರೆ. ಅವರು ತಮ್ಮ ಹವ್ಯಾಸವನ್ನು ಪೂರೈಸಿಕೊಳ್ಳಲು ಹಣದ ಬಗ್ಗೆ ಚಿಂತಿಸುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಈ ರಾಯಲ್ ಹವ್ಯಾಸವು ಒಬ್ಬ ವ್ಯಕ್ತಿಯಲ್ಲಿ ಹುಟ್ಟಿನಿಂದಲೇ ಬರುತ್ತದೆ. ಅವರ ಜಾತಕದಲ್ಲಿ ಇರುವ ನಕ್ಷತ್ರಗಳು ಈ ಹವ್ಯಾಸಕ್ಕೆ ಕಾರಣವಾಗಿವೆ. ಅಂತಹ ನಾಲ್ಕು ರಾಶಿಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ವೃಷಭ: ಕಾಸ್ಟ್ಲಿ ಲೈಫ್ ಸ್ಟೈಲ್ ಅನುಸರಿಸುವವರಲ್ಲಿ ಈ ರಾಶಿಯವರು ಮುಂಚೂಣಿಯಲ್ಲಿದ್ದಾರೆ. ವೃಷಭ ರಾಶಿಯ ಜನರಿಗೆ ರಾಯಲ್ ಹವ್ಯಾಸಗಳಿರುತ್ತವೆ. ಅವರು ಉನ್ನತ ಗುಣಮಟ್ಟದ ವಸ್ತುಗಳನ್ನು ಧರಿಸುವುದು, ತಿನ್ನುವುದು ಮತ್ತು ಕುಡಿಯುವುದಕ್ಕೆ ಇಷ್ಟಪಡುತ್ತಾರೆ. ಅವರ ಜೀವನ ಶೈಲಿ ಸಹ ರಾಯಲ್ ಆಗಿರುತ್ತದೆ. ಅವರು ತಮ್ಮ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತಾರೆ ಹಾಗೂ ಅವರು ಉಳಿತಾಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಅದಕ್ಕಾಗಿಯೇ ಅವರು ಅದ್ದೂರಿ ಜೀವನವನ್ನು ನಡೆಸುತ್ತಿರುತ್ತಾರೆ.

ಸಿಂಹ: ಈ ಪಟ್ಟಿಯಲ್ಲಿ ಬರುವ ಎರಡನೇ ರಾಶಿಯೇ ಸಿಂಹ ರಾಶಿ. ಈ ರಾಶಿಯ ಜನರು ಪರಿಪೂರ್ಣತೆಯನ್ನು ಇಷ್ಟಪಡುತ್ತಾರೆ ಮತ್ತು ಅವರು ಸೌಂದರ್ಯದತ್ತ ಆಕರ್ಷಿತರಾಗುತ್ತಾರೆ. ಅದಕ್ಕಾಗಿಯೇ ಅವರ ಮನೆಗಳು, ಬಟ್ಟೆ ಮತ್ತು ಆಹಾರ ಇತ್ಯಾದಿಗಳೆಲ್ಲವೂ ಬಹಳ ರಾಯಲ್ ಆಗಿ ಇರಬೇಕೆಂದು ಇಷ್ಟಪಡುತ್ತಾರೆ. ಅವರ ವಿಶೇಷವೆಂದರೆ ಅವರು ತಮ್ಮ ಆಪ್ತರು, ಕುಟುಂಬ ಮತ್ತು ಸ್ನೇಹಿತರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಹಣ ಖರ್ಚು ಮಾಡುವಲ್ಲಿ ಯೋಚಿಸುವುದಿಲ್ಲ.

ಮಕರ: ಮಕರ ರಾಶಿ ಜನರು ತುಂಬಾ ಶ್ರಮವಹಿಸಿ ತಮ್ಮ ಶ್ರಮದ ಮೂಲಕ ಎಲ್ಲವನ್ನೂ ಸಾಧಿಸುತ್ತಾರೆ. ಅವರಿಗೆ ಅನೇಕ ಹವ್ಯಾಸಗಳಿರುತ್ತವೆ. ಅವರಿಗೆ ಶಾಪಿಂಗ್ ಮಾಡಲು ಯಾವಾಗ ಅವಕಾಶ ಸಿಕ್ಕಿದರೂ ಬಳಸಿಕೊಳ್ಳುತ್ತಾರೆ. ಹೆಚ್ಚು ಶಾಪಿಂಗ್ ಪ್ರಿಯರಾಗಿತ್ತಾರೆ ಮತ್ತು ಅವರು ಏನನ್ನಾದರೂ ಖರೀದಿಸಿದಾಗಲೆಲ್ಲಾ ಅವರು ಉತ್ತಮ ಗುಣಮಟ್ಟವನ್ನು ಮಾತ್ರ ಖರೀದಿಸುತ್ತಾರೆ. ಇದಕ್ಕಾಗಿ ಎಷ್ಟು ಹಣವನ್ನು ನೀಡಬೇಕಾಗಿ ಬಂದರೂ ಚಿಂತಿಸುವುದಿಲ್ಲ.

ಧನು: ಈ ರಾಶಿ ಜನರು ತುಂಬಾ ದುಬಾರಿ ಹವ್ಯಾಸಗಳನ್ನು ಹೊಂದಿರುತ್ತಾರೆ. ಅವರು ವಿಶಿಷ್ಟ ಸಂಗ್ರಹವನ್ನು ಇಷ್ಟಪಡುತ್ತಾರೆ. ಅವರು ತಮ್ಮ ಹವ್ಯಾಸಗಳನ್ನು ಪೂರೈಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಾರೆ. ಅವರು ವಿಮಾನದಲ್ಲಿ ಪ್ರಯಾಣಿಸಲು, ಎಸಿಯಲ್ಲಿ ಕಾಲ ಕಳೆಯಲು, ದುಬಾರಿ ಹೋಟೆಲ್‌ಗಳಲ್ಲಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಬಟ್ಟೆಯ ವಿಷಯದಲ್ಲೂ ಅವರು ತುಂಬಾ ಕಾಸ್ಟ್ಲಿ ವಸ್ತುಗಳನ್ನು ಧರಿಸಲು ಇಷ್ಟಪಡುತ್ತಾರೆ.

(ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.)

ಇದನ್ನೂ ಓದಿ: Zodiac Signs: ಈ ರಾಶಿಯ ಹುಡುಗಿಯರು ಉತ್ತಮ ಸಂಗಾತಿ ಆಗಬಲ್ಲರು; ಇಲ್ಲಿದೆ ವಿವರ