Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿನ ದರ ವಿವರ ಹೀಗಿದೆ

Gold Silver Price Today: ಚಿನ್ನದ ದರ ಸರಿಸುಮಾರು 100 ರೂಪಾಯಿಯಷ್ಟು ಚಿನ್ನದ ದರ ಇಳಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 4,82,600 ರೂಪಾಯಿಗೆ ಇಳಿದಿದೆ.

Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿನ ದರ ವಿವರ ಹೀಗಿದೆ
ಚಿನ್ನಾಭರಣ
TV9kannada Web Team

| Edited By: shruti hegde

Jun 19, 2021 | 9:32 AM

Gold Silver Rate Today |ಬೆಂಗಳೂರು: ಕಳೆದ ಒಂದು ವಾರದಿಂದ ಚಿನ್ನದ ದರ(Gold Rate) ಇಳಿಕೆಯತ್ತ ಸಾಗುತ್ತಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಇಂದು (ಶನಿವಾರ, ಜೂನ್​ 19) ಮತ್ತೆ ಚಿನ್ನದ ದರ ಇಳಿಕೆಯಾಗಿದೆ. ಇದು ಆಭರಣ ಪ್ರಿಯರಿಗೆ ಮತ್ತಷ್ಟು ಖುಷಿ ತಂದಿರುವ ವಿಚಾರ. ಬೆಳ್ಳಿ ದರವೂ(Silver Rate) ಕೂಡಾ ಕಳೆದ ಮೂರ್ನಾಲ್ಕು ದಿನಗಳಿಂದ ಇಳಿಕೆಯತ್ತ ಸಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,240 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರ 4,42,400 ರೂಪಾಯಿಗೆ ಕುಸಿತ ಕಂಡಿದೆ.

ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ದರ 4,82,600 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ 4,82,600 ರೂಪಾಯಿ ದಾಖಲಾಗಿದೆ. ಜತೆಗೆ ಬೆಳ್ಳಿ ದರದಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿಗೆ ಇಳಿಕೆಯಾಗಿದೆ.

ಚಿನ್ನವನ್ನು ಕೊಳ್ಳಲೆಂದೇ ಹಣವನ್ನು ಕೂಡಿಟ್ಟು ಕಾಪಾಡಿರುತ್ತೇವೆ. ಜತೆಗೆ ದರ ಇಳಿಕೆಯತ್ತ ಸಾಗುತ್ತಿರುವುದನ್ನೇ ಕಾಯುತ್ತಿರುತ್ತೇವೆ. ಹಾಗಾಗಿಯೇ ಚಿನ್ನದ ದರದ ಕುರಿತಾಗಿ ಕುತೂಹಲ ಹೆಚ್ಚು. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಇಷ್ಟು ವರ್ಷ ಸಾಕಿ ಸಲುಹಿದ ಮನೆಯವರಿಗಾಗಿ ಚಿನ್ನ ಕೊಡಿಸಬೇಕೆಂಬ ಆಸೆಯೂ ಇರಬಹುದು. ಹಾಗಿದ್ದಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಲೇಬೇಕು.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,540 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,45,400 ರೂಪಾಯಿಗೆ ಕುಸಿತ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,590 ರೂಪಾಯಿಗೆ ಇಳಿದಿದ್ದು, 100 ಗ್ರಾಂ ಚಿನ್ನದ ದರ 4,85,900 ರೂಪಾಯಿಗೆ ಕುಸಿತ ಕಂಡಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಆ ಮೂಲಕ ಕೆಜಿ ಬೆಳ್ಳಿ ಬೆಲೆ 74,100 ರೂಪಾಯಿಗೆ ಏರಿಕೆಯಾಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,390 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,63,900 ರೂಪಾಯಿಗೆ ಕುಸಿತ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,480 ರೂಪಾಯಿಗೆ ಇಳಿಕೆಯಾಗಿದ್ದು 100 ಗ್ರಾಂ ಚಿನ್ನಕ್ಕೆ 5,04,800 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದೆ. ಆ ಮೂಲಕ ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿಗೆ ಇಳಿಕೆಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ದರ ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,350 ರೂಪಾಯಿ ನಿದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,73,500 ರೂಪಾಯಿ ದಾಖಲಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ದರ 48,350 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,83,500 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿಗೆ ಕುಸಿತ ಕಂಡಿದೆ.

ಇದನ್ನೂ ಓದಿ:

Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ

Gold Rate Today: ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​; ಶುಭ ಶುಕ್ರವಾರದಂದು ಚಿನ್ನದ ದರ ಇಳಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada