Gold Rate Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಶುಭ ಶುಕ್ರವಾರದಂದು ಚಿನ್ನದ ದರ ಇಳಿಕೆ
Gold Silver Price Today: ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,150 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 6,000 ರೂ. ಇಳಿಕೆ ಆಗಿದೆ. ಆ ಮೂಲಕ 4,51,500 ರೂಪಾಯಿ ದಾಖಲಾಗಿದೆ.
Gold Silver Rate Today | ಬೆಂಗಳೂರು: ಜೂನ್ ತಿಂಗಳ ಪ್ರಾರಂಭದಲ್ಲಿ ಚಿನ್ನದ ದರ(Gold Rate) ಏರಿಕೆಯತ್ತ ಸಾಗಿತ್ತು. ಆದರೆ ಈ ವಾರದಿಂದ ಆಭರಣದ ಬೆಲೆ ಇಳಿಕೆ ಕಾಣುತ್ತಿದೆ. ಇಂದು (ಶುಕ್ರವಾರ, ಜೂನ್ 18) ಚಿನ್ನದ ದರ ಇಳಿಕೆಯತ್ತ ಸಾಗಿದೆ. ಬರೋಬ್ಬರಿ 5,000 ರೂಪಾಯಿ ಇಳಿಕೆ ಕಂಡಿದೆ. ಆ ಮೂಲಕ ಬೆಂಗಳೂರಿನಲ್ಲಿ 100 ಗ್ರಾಂ ಚಿನ್ನಕ್ಕೆ 4,48,500 ರೂಪಾಯಿ ನಿಗದಿ ಆಗಿದೆ. ಅದೇ ರೀತಿ ವಿವಿಧ ನಗರಗಳಲ್ಲಿ ಬೆಳ್ಳಿ ದರವೂ ಸಹ ಕುಸಿದಿರುವುದು ಗ್ರಾಹಕರಿಗೆ ಖುಷಿ ನೀಡುವ ವಿಚಾರ.
ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 500 ರೂಪಾಯಿ ಇಳಿಕೆಯ ಬಳಿಕ 44,850 ರೂಪಾಯಿಗೆ ಕುಸಿದಿದೆ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನ 540 ರೂಪಾಯಿ ಇಳಿಕೆಯ ಬಳಿಕ 48,930 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 5,400 ರೂಪಾಯಿ ಇಳಿಕೆ ಬಳಿಕ 4,89,300 ರೂಪಾಯಿಗೆ ಕುಸಿದಿದೆ. ಬೆಳ್ಳಿ ದರವೂ ಕೂಡಾ ಇಳಿಕೆಯತ್ತ ಸಾಗಿದೆ. 1,000 ರೂಪಾಯಿ ಕುಸಿತದ ಬಳಿಕ ಕೆಜಿ ಬೆಳ್ಳಿ ಬೆಲೆ 70,300 ರೂಪಾಯಿ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,150 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 6,000 ರೂ. ಇಳಿಕೆ ಆಗಿದೆ. ಆ ಮೂಲಕ 4,51,500 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 650 ರೂಪಾಯಿ ಇಳಿಕೆ ಕಂಡ ಬಳಿಕ 49,250 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 6,500 ರೂಪಾಯಿ ಕುಸಿತ ಕಂಡಿದ್ದು, 4,92,500 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಕೆ ಕಂಡಿದೆ. 1,100 ರೂಪಾಯಿ ಇಳಿಕೆಯ ಬಳಿಕ, 75,100 ರೂಪಾಯಿ ನಿಗದಿ ಮಾಡಲಾಗಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 500 ರೂಪಾಯಿ ಇಳಿಕೆ ಕಂಡಿದ್ದು, 47,000 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನದ ದರ 5,000 ರೂಪಾಯಿ ಇಳಿಕೆ ಕಂಡಿದ್ದು, 4,70,000 ರೂಪಾಯಿಗೆ ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,900 ರೂಪಾಯಿ ಹಾಗೂ 100 ಗ್ರಾಂ ಚಿನ್ನ 5,09,000 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆ 1,000 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿಗೆ 70,300 ರೂಪಾಯಿ ಇಳಿಕೆ ಕಂಡು ಬಂದಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,350 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,73,500 ರೂಪಾಯಿಗೆ ಕುಸಿತ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,350 ರೂಪಾಯಿಗೆ ಇಳಿದಿದೆ, ಅದೇ ರೀತಿ 100 ಗ್ರಾಂ ಚಿನ್ನದ ದರ 4,83,500 ರೂಪಾಯಿಗೆ ಕುಸಿತ ಕಂಡಿದೆ. ಬೆಳ್ಳಿ ದರದಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 70,300 ರೂಪಾಯಿಗೆ ಇಳಿಕೆಯಾಗಿದೆ.
ಇದನ್ನೂ ಓದಿ:
Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ
Gold jewelry hallmarking: ಚಿನ್ನದ ಆಭರಣಗಳಿಗೆ ಇಂದಿನಿಂದ ಹಾಲ್ಮಾರ್ಕ್ ಕಡ್ಡಾಯ; ಏನಿದು ಹಾಲ್ಮಾರ್ಕಿಂಗ್?
(Gold price decreased today on 2021 june 18 and silver price check gold rate in Bangalore Delhi Mumbai and your city in kannada )
Published On - 8:25 am, Fri, 18 June 21