ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡ, ₹32,000 ಕೋಟಿ ಹಗರಣ ಆರೋಪ ಹೊರಿಸಿದ ರಾಹುಲ್ ಗಾಂಧಿ

Rahul Gandhi: ಗೌತಮ್ ಅದಾನಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಅದು ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಅವರು ಭಾರತದ ಬಡ ಜನರ ಜೇಬಿನಿಂದ ಸರಿಸುಮಾರು 32,000 ಕೋಟಿ ರೂ. ಕಬಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ವಿದ್ಯುತ್ ಸಬ್ಸಿಡಿ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಅದೇ ರೀತಿ ಮಾಡುವ ಯೋಜನೆ ಹಾಕಿಕೊಂಡಿದೆ.

ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡ, ₹32,000 ಕೋಟಿ ಹಗರಣ ಆರೋಪ ಹೊರಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Oct 18, 2023 | 2:14 PM

ದೆಹಲಿ ಅಕ್ಟೋಬರ್ 18: ಅದಾನಿ ಗ್ರೂಪ್ (Adani group) ಕಲ್ಲಿದ್ದಲು ಆಮದುಗಳನ್ನು ಅತಿಯಾಗಿ ಇನ್‌ವಾಯ್ಸ್ ಮಾಡಿದೆ. ಇದು ವಿದ್ಯುತ್ ಬೆಲೆಯಲ್ಲಿ (electricity price) ಹೆಚ್ಚಳಕ್ಕೆ ಕಾರಣವಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮೂಲಗಳನ್ನು ಉಲ್ಲೇಖಿಸಿ ಅವರು, ಈ ಪ್ರಕ್ರಿಯೆಯಲ್ಲಿ ಅದಾನಿ ಸಮೂಹವು ಜನರಿಂದ ಒಟ್ಟು 32,000 ಕೋಟಿ ರೂ ಹಗರಣ ಮಾಡಿದೆ ಎಂದು ಹೇಳಿದ್ದಾರೆ.

“ಗೌತಮ್ ಅದಾನಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಅದು ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಅವರು ಭಾರತದ ಬಡ ಜನರ ಜೇಬಿನಿಂದ ಸರಿಸುಮಾರು 32,000 ಕೋಟಿ ರೂ. ಕಬಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ವಿದ್ಯುತ್ ಸಬ್ಸಿಡಿ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಅದೇ ರೀತಿ ಮಾಡುವ ಯೋಜನೆ ಹಾಕಿಕೊಂಡಿದೆ. ಅದಾನಿ ವಂಚನೆಯಿಂದಾಗಿ ತಮ್ಮ ಬಿಲ್‌ಗಳು ಹೆಚ್ಚಾಗುತ್ತಿವೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು ಪ್ರತಿಷ್ಠಿತ ಬ್ರಿಟಿಷ್ ಪತ್ರಿಕೆ, ಫೈನಾನ್ಷಿಯಲ್ ಟೈಮ್ಸ್, ” Adani and mysterious coal prices ” ಎಂಬ ಸುದ್ದಿ ಪ್ರಕಟಿಸಿದೆ. ಆದರೆ ಈ ವಿಷಯವನ್ನು ಭಾರತದಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ ಎಂದು ಅವರು ಹೇಳಿದರು.

“ನೀವು ನಿಮ್ಮ ಮನೆಯ ಫ್ಯಾನ್ ಅಥವಾ ಲೈಟ್ ಆನ್ ಮಾಡಿದಾಗ ಇದನ್ನು ನೆನಪಿಸಿಕೊಳ್ಳಿ, ಅದಾನಿಜಿಯ ಅಧಿಕ ಬೆಲೆಯ ಮೂಲಕ ನಿಮ್ಮ ಹಣ ಅದಾನಿ ಜೇಬಿಗೆ ಹೋಗುತ್ತಿದೆ. ನೀವು ಪ್ರತಿ ಯೂನಿಟ್ ಗೆ ಹೆಚ್ಚು ಪಾವತಿಸುತ್ತಿದ್ದೀರಿ. ₹ 32,000 ಕೋಟಿಯನ್ನು ನೆನಪಿಡಿ. ಈ ಮೊತ್ತವು ಮತ್ತಷ್ಚು ಏರಿಕೆಯಾಗುತ್ತದೆ. “ಪ್ರಧಾನಿ ಮೋದಿಯವರ ರಕ್ಷಣೆಯಿಲ್ಲದೆ ಇದು ಸಾಧ್ಯವಿಲ್ಲ ಇದರ ಬಗ್ಗೆ ಯಾವುದೇ ತನಿಖೆ ಇಲ್ಲ. ಏಕೆ?” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್-ಸಮಾಜವಾದಿ ಪಕ್ಷ ನಡುವಿನ ಭಿನ್ನಾಭಿಪ್ರಾಯ; ಇಂಡಿಯಾ ಮೈತ್ರಿಕೂಟದ ಮೇಲೆ ಪರಿಣಾಮ?

ಅದಾನಿ ಬಡವರಿಂದ ಹಣವನ್ನು ತೆಗೆದುಕೊಳ್ಳುತ್ತಾರೆ. ಈ ಸುದ್ದಿ ಯಾವುದೇ ಸರ್ಕಾರವನ್ನು ಉರುಳಿಸುತ್ತದೆ. ಇದು ನೇರ ಕಳ್ಳತನ. ಅದಾನಿಯನ್ನು ಪ್ರಧಾನಿ ಮೋದಿ ಮತ್ತೆ ಮತ್ತೆ ಉಳಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರಧಾನಿ ಏಕೆ ಪ್ರತಿಕ್ರಿಯಿಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ರಾಹುಲ್.

ಶರದ್ ಪವಾರ್ ಜೀ ಭಾರತದ ಪ್ರಧಾನಿ ಅಲ್ಲ

ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಭೇಟಿಯ ಬಗ್ಗೆ ನಾನು ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಲ್ಲಿ ಕೇಳಿಲ್ಲ. ಏಕೆಂದರೆ ‘ಶರದ್ ಪವಾರ್ ಜೀ ಭಾರತದ ಪ್ರಧಾನಿ ಅಲ್ಲ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಶರದ್ ಪವಾರ್-ಅದಾನಿ ಭೇಟಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ರಾಹುಲ್, ಇಲ್ಲ ನಾನು ಈ ಪ್ರಶ್ನೆಯನ್ನು ಶರದ್ ಪವಾರ್‌ಗೆ ಕೇಳಿಲ್ಲ. ಶರದ್ ಪವಾರ್ ಭಾರತದ ಪ್ರಧಾನಿ ಅಲ್ಲ. ಶರದ್ ಪವಾರ್ ಅವರು ಅದಾನಿಯನ್ನು ರಕ್ಷಿಸುತ್ತಿಲ್ಲ. ಅವರನ್ನು ರಕ್ಷಿಸುತ್ತಿರುವುದು ಮೋದಿ. ಅದಕ್ಕಾಗಿಯೇ ನಾನು ಈ ಪ್ರಶ್ನೆಯನ್ನು ಮೋದಿಯವರಿಗೆ ಕೇಳಿದ್ದೇನೆ ಹೊರತು ಶರದ್ ಪವಾರ್ ಅಲ್ಲ. ಶರದ್ ಪವಾರ್ ಅವರು ಪ್ರಧಾನಿ ಕುರ್ಚಿಯಲ್ಲಿ ಕುಳಿತು ಅದಾನಿಯನ್ನು ರಕ್ಷಿಸುತ್ತಿದ್ದರೆ, ನಾನು ಈ ಪ್ರಶ್ನೆಯನ್ನು ಶರದ್ ಪವಾರ್ ಅವರಿಗೆ ಕೇಳುತ್ತೇನೆ ಎಂದು ಉತ್ತರಿಸಿದ್ದಾರೆ.

ಶರದ್ ಪವಾರ್ ಇತ್ತೀಚೆಗೆ ಗುಜರಾತ್‌ನಲ್ಲಿ ಸ್ಥಾವರ ಉದ್ಘಾಟನಾ ಸಮಾರಂಭದಲ್ಲಿ ಗೌತಮ್ ಅದಾನಿಯನ್ನು ಭೇಟಿಯಾಗಿದ್ದರು. ಅದಾನಿಯೊಂದಿಗೆ ಶರದ್ ಪವಾರ್ ಅವರ ಆಪ್ತ ಸಂಪರ್ಕ ಅದಾನಿ ವ್ಯವಹಾರಗಳ ತನಿಖೆಗಾಗಿ ಇಂಡಿಯಾ ಬ್ಲಾಕ್‌ನ ಬೇಡಿಕೆಗೆ ತಿರುಗೇಟು ನೀಡಿದೆ. ಅದಾನಿ ವಿಚಾರದಲ್ಲಿ ರಾಹುಲ್ ಗಾಂಧಿ ಶರದ್ ಪವಾರ್ ಜೊತೆ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಶರದ್ ಪವಾರ್ ಅದಾನಿಯನ್ನು ಭೇಟಿಯಾದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ಶರದ್ ಪವಾರ್ ಅವರು ಪ್ರಧಾನಿ ಅಲ್ಲದ ಕಾರಣ ಜವಾಬ್ದಾರರಲ್ಲ ಎಂದಿದ್ದಾರೆ .

ನಾನು ಪ್ರಧಾನಿಗೆ ಸಹಾಯ ಮಾಡುತ್ತಿದ್ದೇನೆ

“ಅದಾನಿಜಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ ಮತ್ತು ಈ ಕಲ್ಲಿದ್ದಲು ಭಾರತಕ್ಕೆ ಬಂದಾಗ, ಬೆಲೆ ದ್ವಿಗುಣಗೊಳ್ಳುತ್ತದೆ. ಹೀಗಾಗಿ ಅದಾನಿ ಜಿ ಸಾರ್ವಜನಿಕರಿಂದ ₹ 12,000 ಕೋಟಿಯನ್ನು ಓವರ್‌ಇನ್‌ವಾಯ್ಸ್ ಮೂಲಕ ಪಡೆದರು. ನಾವು ಕರ್ನಾಟಕದಲ್ಲಿ ವಿದ್ಯುತ್ ಸಬ್ಸಿಡಿ ನೀಡಿದ್ದೇವೆ, ನಾವು ಮಧ್ಯಪ್ರದೇಶದಲ್ಲಿ ಅದೇ ರೀತಿ ಮಾಡುತ್ತೇವೆ. ಆದರೆ ಭಾರತೀಯ ಮಾಧ್ಯಮಗಳು ಯಾವುದೇ ಪ್ರಶ್ನೆಗಳನ್ನು ಎತ್ತುತ್ತಿಲ್ಲ, ಫೈನಾನ್ಷಿಯಲ್ ಟೈಮ್ಸ್ ವರದಿ ಯಾವುದೇ ಸರ್ಕಾರವನ್ನು ಉರುಳಿಸುತ್ತದೆ, ಏಕೆಂದರೆ ಅದು ಒಬ್ಬ ವ್ಯಕ್ತಿಯಿಂದ ನೇರ ಕಳ್ಳತನವಾಗಿದೆ, ಭಾರತದ ಪ್ರಧಾನಿಯಿಂದ ಮತ್ತೆ ಮತ್ತೆ ರಕ್ಷಿಸಲ್ಪಟ್ಟಿದೆ, ನನಗೆ ಅರ್ಥವಾಗುತ್ತಿಲ್ಲ ಪ್ರಧಾನಿ ಏಕೆ ಸಚಿವರು ಈ ಬಗ್ಗೆ ಮಾತನಾಡುವುದಿಲ್ಲ, ಅವರ ರಕ್ಷಣೆ ಇಲ್ಲದೆ ಇದು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. “ಸೆಬಿ ಅವರು ದಾಖಲೆಗಳನ್ನು ಪಡೆದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ, ಆದರೆ ಫೈನಾನ್ಷಿಯಲ್ ಟೈಮ್ಸ್ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದೆ. ಆದ್ದರಿಂದ ಸರ್ಕಾರದ ಉನ್ನತ ಮಟ್ಟದಿಂದ ರಕ್ಷಣೆ ಇದೆ ಎಂಬುದು ವಿಷಯ ಸ್ಪಷ್ಟವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.

“ಇತರ ಹಲವು ದೇಶಗಳು ಅದಾನಿಯನ್ನು ತನಿಖೆ ನಡೆಸುತ್ತಿವೆ, ಆದರೆ ಭಾರತವು ಅದಾನಿಗೆ ಖಾಲಿ ಚೆಕ್ ನೀಡಿದೆ. ಅವರು ಬಯಸಿದ್ದನ್ನು ವಿದ್ಯುತ್, ಬಂದರು ಹೀಗೆ ಎಲ್ಲವನ್ನೂ ಪಡೆಯುತ್ತಾರೆ. “ಪ್ರಧಾನಿ ಅವರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಾನು ಪ್ರಧಾನಿ ಮೋದಿಗೆ ಸಹಾಯ ಮಾಡಲು ಮಾತ್ರ ಪ್ರಯತ್ನಿಸುತ್ತಿದ್ದೇನೆ. ಅವರು ನಿಷ್ಪಕ್ಷವಾಗಿತನಿಖೆಯನ್ನು ಪ್ರಾರಂಭಿಸಬೇಕು. ನಿಮ್ಮ ವಿಶ್ವಾಸಾರ್ಹತೆಯನ್ನು ರಕ್ಷಿಸಿಕೊಳ್ಳಿ” ಎಂದು ರಾಹುಲ್ ಹೇಳಿದ್ದಾರೆ.

ಅಧಿಕಾರಕ್ಕೆ ಬಂದರೆ ಅದಾನಿ ವಿರುದ್ಧ ತನಿಖೆ

ಸಬ್ಸಿಡಿ ವಿದ್ಯುತ್ ನೀಡುತ್ತಿರುವ ಕಾಂಗ್ರೆಸ್ ಆಡಳಿತದ ರಾಜ್ಯಗಳು ಅದಾನಿ ವಿರುದ್ಧ ರಾಜ್ಯ ಮಟ್ಟದ ತನಿಖೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದರು. 2024 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದಾನಿ ವಿರುದ್ಧ ತನಿಖೆ ನಡೆಸಲಿದೆಯೇ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, “ಖಂಡಿತವಾಗಿಯೂ ಮಾಡುತ್ತೇವೆ” ಎಂದು ಹೇಳಿದರು. “ಇದು ಅದಾನಿ ಬಗ್ಗೆ ಪ್ರಶ್ನೆ ಅಲ್ಲ. ಇದು ಕಳ್ಳತನದ ಬಗ್ಗೆ. ಮತ್ತು ₹ 32,000 ಕೋಟಿ ಕದಿಯುವ ಯಾರಾದರೂ ತನಿಖೆ ಎದುರಿಸಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:46 pm, Wed, 18 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್