ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅದನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೊವಿಡ್ 19 ವಿರುದ್ಧ ಹೋರಾಟಕ್ಕೆ ಬೇಕಾಗಿರುವುದು ಒಂದು ಸರಿಯಾದ ಯೋಜನೆ, ಉದ್ದೇಶ ಮತ್ತು ನಿರ್ಣಯಗಳೇ ಹೊರತು ಆಧಾರವಿಲ್ಲದ ವ್ಯರ್ಥ ಮಾತುಗಳು ಅಲ್ಲ ಎಂದು ಟೀಕಿಸಿದ್ದಾರೆ.
ನರೇಂದ್ರ ಮೋದಿಯವರು ಇಂದು 77ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ 7 ವರ್ಷ ಪೂರೈಸಿದ ಬಗ್ಗೆಯೂ ಅವರು ಉಲ್ಲೇಖ ಮಾಡಿದರು. ಇನ್ನು ಮನ್ ಕೀ ಬಾತ್ ಮುಗಿಯುತ್ತಿದ್ದಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ.
ಕಳೆದ 2ದಿನಗಳ ಹಿಂದೆ ಸಹ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಈವೆಂಟ್ ಮ್ಯಾನೇಜರ್ ಎಂದು ಕರೆದಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದನ್ನೂ ಸ್ಟ್ರಾಟಜಿ ಮಾಡಲು ಬರುವುದಿಲ್ಲ ಎಂದಿದ್ದರು. ಕೊರೊನಾ ಎರಡನೇ ಅಲೆಗೆ ಸಂಪೂರ್ಣ ಹೊಣೆ ಪ್ರಧಾನಿ ಮೋದಿಯವರೇ ಆಗಿದ್ದಾರೆ. ಕೊರೊನಾ ಲಸಿಕೆ ಅಭಿಯಾನ ಇದೇ ವೇಗದಲ್ಲಿ ಸಾಗುತ್ತಿದ್ದರೆ ದೇಶದ ಜನರಿಗೆಲ್ಲ ಲಸಿಕೆ ಕೊಟ್ಟು ಮುಗಿಸಲು 2024ರವರೆಗೆ ಕಾಯಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.
कोरोना से लड़ने के लिए चाहिए-
सही नीयत, नीति, निश्चय।महीने में एक बार निरर्थक बात नहीं!
— Rahul Gandhi (@RahulGandhi) May 30, 2021
Published On - 12:26 pm, Sun, 30 May 21