Kannada News National Congress president Election Rahul Gandhi backed the one person, one post rule Ashok Gehlot's New Stand
ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂದ ರಾಹುಲ್ ಗಾಂಧಿ; ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಗೆಹ್ಲೋಟ್ ನಿಲುವೇನು?
ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೆ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಸಚಿನ್ ಪೈಲಟ್- ಅಶೋಕ್ ಗೆಹ್ಲೋಟ್
Follow us on
ದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಅಶೋಕ್ ಗೆಹ್ಲೋಟ್ (Ashok Gehlot) ಅವರು ಗೆದ್ದರೆ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಇಂದು ಸ್ಪಷ್ಟಪಡಿಸಿದ್ದಾರೆ. ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೆ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ (Sachin Pilot) ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಭರದ ಸಿದ್ಧತೆ: ಗೆಹ್ಲೋಟ್ ಹೇಳಿದ್ದೇನು?
ಸಚಿನ್ ಪೈಲಟ್, 2018 ರಲ್ಲಿ ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಗೆದ್ದಾಗಿನಿಂದ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಗಾಂಧಿಯವರ ಆಶೀರ್ವಾದವನ್ನು ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತವೆ.
2020 ರಲ್ಲಿ ದಂಗೆಯ ನಂತರ ತಮ್ಮ ಉಪ ಮುಖ್ಯಮಂತ್ರಿಯಾಗಿದ್ದ ಪೈಲಟ್ ಅವರನ್ನು ವಜಾ ಮಾಡಿದ ನಂತರ ಸಚಿನ್ ಪೈಲಟ್ನ್ನು ತಡೆಯುವುದಕ್ಕಾಗಿ ಗೆಹ್ಲೋಟ್ ಎಲ್ಲ ರೀತಿಯಲ್ಲಿ ಶ್ರಮಿಸಿದ್ದರು. ಆದರೆ ಇಂದು ರಾಹುಲ್ ಗಾಂಧಿಯವರು “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮವನ್ನು ಬೆಂಬಲಿಸಿದ ನಂತರ ಗೆಹ್ಲೋಟ್ ಮುಂದೆ ಬೇರೆ ಯಾವುದೇ ಆಯ್ಕೆಗಳಿಲ್ಲ.
ಒಬ್ಬ ವ್ಯಕ್ತಿ, ಒಂದು ಹುದ್ದೆ ನಿಯಮ ಇದು ಅಶೋಕ್ ಗೆಹ್ಲೋಟ್‌ಗೆ ಅನ್ವಯಿಸುತ್ತದೆಯೇ ಎಂದು ಕೇಳಿದಾಗ ನಾವು ಉದಯಪುರದಲ್ಲಿ ಬದ್ಧತೆಯನ್ನು ಮಾಡಿದ್ದೇವೆ, ಬದ್ಧತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಸಾರ್ವಜನಿಕವಾಗಿ ಈ ಹೇಳಿಕೆ ನೀಡಿದ ನಂತರ ಪಕ್ಷದ ನಿಯಮಕ್ಕೆ ತಾನು ಬದ್ಧ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
71 ವರ್ಷ ಹರೆಯದ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗಲು ಗಾಂಧಿಯವರ ಆಯ್ಕೆಯಾಗಿದೆ. ಆದರೆ ಅವರು ಆಯ್ಕೆಯಾದರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂಬ ಆತಂಕದಿಂದ ಅವರು ಇಲ್ಲಿಯವರೆಗೆ ಹೊರಗುಳಿದಿದ್ದಾರೆ.
ಪೈಲಟ್ ನಿನ್ನೆ ರಾಹುಲ್ ಗಾಂಧಿಯವರೊಂದಿಗೆ ಕೇರಳದಲ್ಲಿ ಅವರ “ಭಾರತ್ ಜೋಡೋ ಯಾತ್ರೆ” ಯಲ್ಲಿ ಪಾಲ್ಗೊಂಡಿದ್ದರು. ಗೆಹ್ಲೋಟ್ ಕೇರಳಕ್ಕೆ ಆಗಮಿಸುವ ಗಂಟೆಗಳ ಮೊದಲು ಇಂದು ಬೆಳಿಗ್ಗೆ ಪೈಲಟ್ ಕೇರಳದಿಂದ ಮರಳಿದ್ದರು.
ಅಕ್ಟೋಬರ್ 17 ರ ಚುನಾವಣೆಗೆ ಸೋಮವಾರ ತಮ್ಮ ಪತ್ರಗಳನ್ನು ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ರಾಹುಲ್ ಗಾಂಧಿಯನ್ನು ಮನವೊಲಿಸಲು “ಕೊನೆಯ ಬಾರಿಗೆ” ಪ್ರಯತ್ನಿಸುವುದಾಗಿ ಗೆಹ್ಲೋಟ್ ಹೇಳಿದ್ದರು. ಆದರೆ ಅವರು 2019 ರಲ್ಲಿ ತ್ಯಜಿಸಿದ ಹುದ್ದೆಗೆ ಹಿಂತಿರುಗುವುದಿಲ್ಲ ಎಂಬ ನಿರ್ಧಾರದಲ್ಲಿ ನಾನು ಅಚಲನಾಗಿದ್ದೇನೆ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಸಂಜೆ, ಗೆಹ್ಲೋಟ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ವಾದವನ್ನು ಒತ್ತಿ ಹೇಳಿದರು. ಒಬ್ಬರು ಸಚಿವರಾಗಿ ಇದ್ದುಕೊಂಡೇ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಆಯ್ಕೆಯಾಗಬಹುದು. ಪಕ್ಷಕ್ಕೆ ಅನುಕೂಲವಾಗುವ ಯಾವುದನ್ನಾದರೂ ನಾನು ಮಾಡುತ್ತೇನೆ, ಒಂದು ಹುದ್ದೆ, ಎರಡು ಹುದ್ದೆ ಅಥವಾ ಮೂರು ಹುದ್ದೆ, ನಾನು ಹಿಂದೆ ಸರಿಯುವುದಿಲ್ಲ ಎಂದು ಅವರು ಸಭೆಯ ಮೊದಲು ಹೇಳಿದ್ದರು.
ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ನಂತರ, ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು “ಒಬ್ಬ ವ್ಯಕ್ತಿ ಒಂದು ಹುದ್ದೆ” ನಿಯಮದ ಕುರಿತು ಮಾತನಾಡಿದ್ದು “ಯಾರು ಸ್ಪರ್ಧಿಸುತ್ತಾರೆ ಮತ್ತು ಗೆಲ್ಲುತ್ತಾರೆ ಎಂಬುದರ ಆಧಾರದ ಮೇಲೆ ಇದು ಅನ್ವಯಿಸುತ್ತದೆ ಎಂದಿದ್ದರು. ಆದರೆ ರಾಹುಲ್ ಗಾಂಧಿ ಈ ಬಗ್ಗೆ ಖಡಾಖಂಡಿತವಾಗಿ ನುಡಿದಿದ್ದಾರೆ.
ಮುಂದಿನ ಪಕ್ಷದ ಅಧ್ಯಕ್ಷರಿಗೆ ನೀವು ಏನು ಹೇಳುತ್ತೀರಿ ಎಂದು ಕೇಳಿದಾಗ ರಾಹುಲ್ ಗಾಂಧಿ “ಕಾಂಗ್ರೆಸ್ ಅಧ್ಯಕ್ಷರಾಗುವವರು ಯಾರೇ ಆಗಲಿ ಅವರು ಕಲ್ಪನೆಗಳು, ನಂಬಿಕೆ ವ್ಯವಸ್ಥೆ, ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನನ್ನ ಸಲಹೆಯಾಗಿದೆ ಎಂದಿದ್ದಾರೆ.