ಯಾವುದಿದು ಪಿಎಫ್ಐ ಸಂಘಟನೆ? ಇದರ ವಿರುದ್ಧ ತನಿಖಾ ಸಂಸ್ಥೆ ದಾಳಿ ನಡೆಸಿರುವುದೇಕೆ?
Popular Front of India ದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ಪ್ರತಿಭಟನೆಗಳಿಗೆ ಉತ್ತೇಜನ ನೀಡುವ ಆರೋಪಗಳಿಗೆ ಸಂಬಂಧಿಸಿರುವ ಪಿಎಫ್ಐ ಆಪಾದಿತ "ಹಣಕಾಸಿನ ಲಿಂಕ್" ಗಳ ಬಗ್ಗೆ ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದೆ.
ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ ನೇತೃತ್ವದ ಬಹು ಏಜೆನ್ಸಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಯ ಕಚೇರಿ ಮೇಲೆ ದಾಳಿ ಮಾಡಿದ್ದು 10 ರಾಜ್ಯಗಳಲ್ಲಿ ಸುಮಾರು 100 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಿಜೆಪಿ (BJP) ಇತ್ತೀಚಿನ ವರ್ಷಗಳಲ್ಲಿ ಸಂಘಟನೆಯ ವಿರುದ್ಧ ಮಾತನಾಡಿದ್ದು ಪ್ರಸ್ತುತ ಘಟಕದ ಬಗ್ಗೆ ಮೃದು ಧೋರಣೆಗಾಗಿ ಕಾಂಗ್ರೆಸ್ ಅನ್ನು ಗುರಿಯಾಗಿಸಿದೆ. ಅಂದಹಾಗೆ ಪಿಎಫ್ಐ ಸಂಘಟನೆ ಏನು ಮಾಡುತ್ತಿದೆ? ಅದರ ಮೇಲೆ ಎನ್ಐಎ ದಾಳಿ ನಡೆಸಿದ್ದೇಕೆ? ಇಲ್ಲಿದೆ ಮಾಹಿತಿ
PFI ಅಂದರೆ
ಪಿಎಫ್ಐ ಮೂರು ಮುಸ್ಲಿಂ ಸಂಘಟನೆಗಳ ವಿಲೀನದೊಂದಿಗೆ 2007 ರಲ್ಲಿ ದಕ್ಷಿಣ ಭಾರತದಲ್ಲಿ ಅಸ್ತಿತ್ವಕ್ಕೆ ಬಂತು. ಕೇರಳದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಾಸರೈ ಎಂಬ ಮೂರು ಸಂಘಟನೆಗಳು ಒಟ್ಟಾಗಿ ಪಿಎಫ್ಐ ರೂಪುಗೊಂಡಿತ್ತು..ವಿಲೀನ ನಿರ್ಧಾರದ ನಾಲ್ಕು ತಿಂಗಳ ನಂತರ ಫೆಬ್ರವರಿ 2007 ರಲ್ಲಿ ಬೆಂಗಳೂರಿನ ರ್ಯಾಲಿಯಲ್ಲಿ ಸಂಘಟನೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಾಯಿತು. ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಯಲ್ಲಿರುವವರ ಹಕ್ಕುಗಳಿಗಾಗಿ ನಮ್ಮ ಸಂಘಟನೆ ಹೋರಾಡುತ್ತದೆ ಎಂದು ಪಿಎಫ್ಐ ಹೇಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ನೀತಿಗಳೊಂದಿಗೆ ಈ ಸಂಘಟನೆ ಆಗಾಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ಅದೇ ವೇಳೆ ಈ ಪಕ್ಷಗಳು ಮತ್ತು ಇತರ ಪಕ್ಷಗಳು ಮುಸ್ಲಿಂ ಮತದಾರರನ್ನು ಸೆಳೆಯಲು ಪಿಎಫ್ಐಯೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿವೆ ಎಂದು ಪರಸ್ಪರ ಆರೋಪ ಮಾಡುತ್ತಲೇ ಇವೆ.
ಪಿಎಫ್‌ಐ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಇದು ಬಲಪಂಥೀಯ ಸಂಘಟನೆಗಳಾದ ವಿಎಚ್‌ಪಿ, ಹಿಂದೂ ಜಾಗರಣ ವೇದಿಕೆ ಮತ್ತು ಆರ್‌ಎಸ್‌ಎಸ್‌ನಂತಿದ್ದು ಮುಸ್ಲಿಮರಿಗಾಗಿ ಸಾಮಾಜಿಕ ಕೆಲಸ ಮಾಡುತ್ತದೆ. ಸಂಸ್ಥೆಯು ಸದಸ್ಯತ್ವದ ಬಗ್ಗೆ ಇದು ಯಾವುದೇ ಅಧಿಕೃತ ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ. 2001 ರಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ನಂತರ PFI ಅನ್ನು ರಚಿಸಲಾಯಿತು. 2007ರಲ್ಲಿ ಪಿಎಫ್ಐ ಪ್ರಾರಂಭವಾಗಿ ಎರಡು ವರ್ಷಗಳ ನಂತರ, ಮುಸ್ಲಿಮರು, ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದವರ ರಾಜಕೀಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ಸಂಘಟನೆಯು ಆಂತರಿಕವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು (SDPI) ರಚಿಸಲಾಯಿತು. ಈ ಸಂಘಟನೆಯು ಕೇರಳದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದ್ದು ವಿರುದ್ಧ ಕೊಲೆ, ಬೆದರಿಕೆ, ಗಲಭೆ ತ್ತುc ಭಯೋತ್ಪಾದಕ ಸಂಘಟನೆಗಳೊಂದಿಗಿನ ಸಂಪರ್ಕಕ್ಕಾಗಿ ಪ್ರಸ್ತುತ ಸಂಘಟನೆ ವಿರುದ್ಧ ಹಲವಾರು ಪ್ರಕರಣಗಳಿವೆ.
ಈಗ PFI ವಿರುದ್ಧ ತನಿಖೆ ಯಾಕೆ?
ದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ಪ್ರತಿಭಟನೆಗಳಿಗೆ ಉತ್ತೇಜನ ನೀಡುವ ಆರೋಪಗಳಿಗೆ ಸಂಬಂಧಿಸಿರುವ ಪಿಎಫ್ಐ ಆಪಾದಿತ “ಹಣಕಾಸಿನ ಲಿಂಕ್” ಗಳ ಬಗ್ಗೆ ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದೆ. ದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ಪ್ರತಿಭಟನೆಗಳಿಗೆ ಉತ್ತೇಜನ ನೀಡಿದ ಆರೋಪಗಳಿಗೆ ಸಂಬಂಧಿಸಿ, ಫೆಬ್ರವರಿ 2020 ರಲ್ಲಿ ದೆಹಲಿ ಗಲಭೆ, ಉತ್ತರ ಪ್ರದೇಶದ ಹಾಥರಸ್ ನಲ್ಲಿ ಪರಿಶಿಷ್ಟ ಜಾತಿ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದಲ್ಲಿ ಪಿತೂರಿ ಮೊದಲಾದ ಆರೋಪ ಈ ಸಂಘಟನೆ ಮೇಲಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಇಡಿ ತನ್ನ ಮೊದಲ ಚಾರ್ಜ್ ಶೀಟ್ ಅನ್ನು ಪಿಎಫ್ಐ ಮತ್ತು ಅದರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ವಿದ್ಯಾರ್ಥಿ ಘಟಕದ ವಿರುದ್ಧಅಕ್ರಮ ಹಣ ವ್ಯವಹಾರ ಆರೋಪದ ಮೇಲೆ ಸಲ್ಲಿಸಿತು. ಅದರ ಸದಸ್ಯರು ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ನಂತರ “ಕೋಮು ಗಲಭೆಗಳನ್ನು ಪ್ರಚೋದಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಬಯಸಿದ್ದರು ಎಂದು ಆರೋಪಿಸಲಾಗಿದೆ.
ಚಾರ್ಜ್ ಶೀಟ್‌ನಲ್ಲಿ ಸಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಿಎಫ್‌ಐ ಸದಸ್ಯ ಕೆ ಎ ರೌಫ್ ಶೆರೀಫ್, CFI ರಾಷ್ಟ್ರೀಯ ಖಜಾಂಚಿ ಅತಿಕುರ್ ರೆಹಮಾನ್, ದೆಹಲಿ ಮೂಲದ CFI ಪ್ರಧಾನ ಕಾರ್ಯದರ್ಶಿ ಮಸೂದ್ ಅಹ್ಮದ್, ಪಿಎಫ್ಐಯೊಂದಿಗೆ ಸಂಬಂಧ ಹೊಂದಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇನ್ನೊಬ್ಬ CFI/PFI ಸದಸ್ಯ ಮೊಹಮ್ಮದ್ ಆಲಂ ಹೆಸರಿದೆ.
Published On - 5:34 pm, Thu, 22 September 22