ಭಾರೀ ಮಳೆಗೆ ಮನೆಗಳ ಗೋಡೆ ಕುಸಿದು 7 ಮಕ್ಕಳು ಸಾವು
ಭಾರೀ ಮಳೆಗೆ ಚಂದ್ರಪುರ ಮತ್ತು ಘಾಟಿಯಾ ಅಜ್ಮತ್ ಅಲಿ ಪ್ರದೇಶಗಳಲ್ಲಿ ಮನೆಗಳ ಗೋಡೆಗಳು ಕುಸಿದು 24 ಗಂಟೆಗಳ ಅಂತರದಲ್ಲಿ ಏಳು ಮಕ್ಕಳು ಉತ್ತರ ಪ್ರದೇಶದ ಇಟಾವಾದಲ್ಲಿ ಸಾವನ್ನಪ್ಪಿದ್ದಾರೆ. ಮಳೆಯ ಅನಾಹುತಕ್ಕೆ ಜಿಲ್ಲೆಯಾದ್ಯಂತ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರಪ್ರದೇಶ: ಭಾರೀ ಮಳೆಗೆ ಚಂದ್ರಪುರ ಮತ್ತು ಘಾಟಿಯಾ ಅಜ್ಮತ್ ಅಲಿ ಪ್ರದೇಶಗಳಲ್ಲಿ ಮನೆಗಳ ಗೋಡೆಗಳು ಕುಸಿದು 24 ಗಂಟೆಗಳ ಅಂತರದಲ್ಲಿ ಏಳು ಮಕ್ಕಳು ಉತ್ತರ ಪ್ರದೇಶದ ಇಟಾವಾದಲ್ಲಿ ಸಾವನ್ನಪ್ಪಿದ್ದಾರೆ. ಮಳೆಯ ಅನಾಹುತಕ್ಕೆ ಜಿಲ್ಲೆಯಾದ್ಯಂತ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆಯಲ್ಲಿ ಬುಧವಾರ ತಡರಾತ್ರಿ ಚಂದ್ರಾಪುರ ಗ್ರಾಮದಲ್ಲಿ ನಾಲ್ವರು ಮಕ್ಕಳು ನಿದ್ರೆಯಲ್ಲಿರುವಾಗ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಸಿಂಕು (10), ಅಭಿ (8), ಸೋನು (7), ಆರತಿ (5) ಎಂದು ಗುರುತಿಸಲಾಗಿದೆ ಎಂದು ಇಟಾವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವ್ನಿಶ್ ರೈ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ನಾಲ್ಕು ವರ್ಷದ ಬಾಲಕ ರಿಶವ್ ಮತ್ತು ಆತನ 75 ವರ್ಷದ ಅಜ್ಜಿ ಶಾರದಾ ದೇವಿ ಗಂಭೀರವಾಗಿ ಗಾಯಗೊಂಡಿದ್ದು, ಡಾ.ಭೀಮರಾವ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 4 ಲಕ್ಷ ರೂ ಪರಿಹಾರ ನೀಡಲಿದ್ದಾರೆ. ಎರಡನೇ ಘಟನೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಅವರ ತಾಯಿಯೂ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
ಮೂರನೇ ಗೋಡೆ ಕುಸಿತದ ಘಟನೆ ಇಟಾವಾಹ್‌ನ ಅಂಡವಾ ಕೆ ಬಾಂಗ್ಲಾನ್ ಗ್ರಾಮದಲ್ಲಿ ನಡೆದಿದೆ. ಜಬರ್ ಸಿಂಗ್ (35) ಅವರ ಮನೆಯು ಭಾರೀ ಮಳೆಯಿಂದಾಗಿ ಕುಸಿದುಬಿದ್ದು ಜೀವಂತ ಸಮಾಧಿಯಾಗಿದ್ದರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಬುಧವಾರ, ಹವಾಮಾನ ಇಲಾಖೆಯು ಯುಪಿಯಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಶುಕ್ರವಾರವೂ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.