ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಒಕ್ಕೂಟದಲ್ಲಿ ಒಡಕು, ಉದ್ಧವ್ ಠಾಕ್ರೆ ಬಣದ ಬೇಡಿಕೆ ತಿರಸ್ಕರಿಸಿದ ಕಾಂಗ್ರೆಸ್​

ಶಿವಸೇನೆಯ ಉದ್ಧವ್ ಠಾಕ್ರೆ(Uddhav Thackeray) ಬಣ ಹಾಗೂ ಕಾಂಗ್ರೆಸ್(Congress)​ ನಡುವೆ ಸೀಟು ಹಂಚಿಕೆ ತಿಕ್ಕಾಟ ಆರಂಭವಾಗಿದೆ. ಕಾಂಗ್ರೆಸ್​, ಎನ್​ಸಿಪಿ ಹಾಗೂ ಶಿವಸೇನೆ ಉದ್ಧವ್ ಬಣದ ಮೂಲಕ ಮಹಾ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಸೀಟು ಹಂಚಿಕೆ ಚರ್ಚೆ ಆರಂಭವಾಗಿದ್ದು ಈಗ ಒಡಕು ಶುರುವಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣವು 48 ಲೋಕಸಭಾ ಕ್ಷೇತ್ರವಿರುವ ಮಹಾರಾಷ್ಟ್ರದಲ್ಲಿ 23 ಸೀಟುಗಳನ್ನು ಕೇಳುತ್ತಿವೆ.

ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಒಕ್ಕೂಟದಲ್ಲಿ ಒಡಕು, ಉದ್ಧವ್ ಠಾಕ್ರೆ ಬಣದ ಬೇಡಿಕೆ ತಿರಸ್ಕರಿಸಿದ ಕಾಂಗ್ರೆಸ್​
ಉದ್ಧವ್ ಠಾಕ್ರೆ

Updated on: Dec 28, 2023 | 3:05 PM

ಶಿವಸೇನೆಯ ಉದ್ಧವ್ ಠಾಕ್ರೆ(Uddhav Thackeray) ಬಣ ಹಾಗೂ ಕಾಂಗ್ರೆಸ್(Congress)​ ನಡುವೆ ಸೀಟು ಹಂಚಿಕೆ ತಿಕ್ಕಾಟ ಆರಂಭವಾಗಿದೆ. ಕಾಂಗ್ರೆಸ್​, ಎನ್​ಸಿಪಿ ಹಾಗೂ ಶಿವಸೇನೆ ಉದ್ಧವ್ ಬಣದ ಮೂಲಕ ಮಹಾ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಸೀಟು ಹಂಚಿಕೆ ಚರ್ಚೆ ಆರಂಭವಾಗಿದ್ದು ಈಗ ಒಡಕು ಶುರುವಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣವು 48 ಲೋಕಸಭಾ ಕ್ಷೇತ್ರವಿರುವ ಮಹಾರಾಷ್ಟ್ರದಲ್ಲಿ 23 ಸೀಟುಗಳನ್ನು ಕೇಳುತ್ತಿವೆ.

ಆದರೆ ಕಾಂಗ್ರೆಸ್ ಸಭೆಯಲ್ಲಿ ಈ ಬೇಡಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಲಾಗಿದೆ. ಶಿವಸೇನೆ ಇಬ್ಭಾಗವಾಗಿದೆ, ಹೀಗಿರುವಾಗ 48ರಲ್ಲಿ 23 ಸೀಟುಗಳನ್ನು ಉದ್ಧವ್ ಠಾಕ್ರೆ ಬಣಕ್ಕೆ ನೀಡುವುದು ಅಸಮಂಜಸ, ಗೆಲುವಿನ ಸೂತ್ರ ಆಧರಿಸಿ, ಸೀಟು ಹಂಚಿಕೆ ಮಾಡಬೇಕು ಎನ್ನುವ ಅಭಿಪ್ರಾಯವು ಕಾಂಗ್ರೆಸ್​ ಸಭೆಯಲ್ಲಿ ವ್ಯಕ್ತವಾಗಿದೆ.

ಈ ಮೂಲಕ ಇಂಡಿಯಾ ಒಕ್ಕೂಟದ ಭಾಗವಾಗಿರುವ ಮಹಾ ವಿಕಾಸ್ ಅಘಾಡಿಯಲ್ಲೂ ಒಡಕು ನಿರ್ಮಾಣವಾಗಿದೆ. ಮೂರು ಪಕ್ಷಗಳು ಹೆಚ್ಚು ಸೀಟುಗಳನ್ನು ಕೇಳುವುದು ಖಾತ್ರಿಯಾಗಿದೆ. ಕಳೆದವಾರ ಶರದ್ ಪವಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಉದ್ಧವ್ ಠಾಕ್ರೆ ನಡುವೆ ಈ ಸಂಬಂಧ ಮೊದಲ ಹಂತದ ಮಾತುಕತೆ ಕೂಡ ನಡೆದಿತ್ತು.

ಮತ್ತಷ್ಟು ಓದಿ: ಫೇಸ್‌ಬುಕ್‌ನಲ್ಲಿ ಏಕನಾಥ್ ಶಿಂಧೆ ವಿರುದ್ಧ ಅಶ್ಲೀಲ ಹೇಳಿಕೆ​, ದೂರು ದಾಖಲು

ಇದೇ ಸಮಸ್ಯೆ ಬಿಜೆಪಿ ಒಕ್ಕೂಟಕ್ಕೂ ಭವಿಷ್ಯದಲ್ಲಿ ಬರಬಹುದು, ಶಿವಸೇನೆ, ಏಕನಾಥ್ ಶಿಂಧೆ ಬಣ, ಎನ್​ಸಿಪಿ ಅಜಿತ್ ಪವಾತ್ ಬಣವನ್ನು ಬಿಜೆಪಿ ಹಗೆ ಸಂಬಾಳಿಸುತ್ತದೆ ಎನ್ನುವುದು ಕೂಡ ಆಸಕ್ತಿಕರ ವಿಷಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ