ಭಾರತ್ ಬಯೋಟೆಕ್ ಲಸಿಕೆ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದು ಕೂತ ಕಾಂಗ್ರೆಸ್ ಆಡಳಿತ ರಾಜ್ಯಗಳು!
ಪೂರ್ಣ ಪ್ರಮಾಣದ ಪರೀಕ್ಷೆ ಮುಗಿಸಿರುವ ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯನ್ನೇ ನಮಗೆ ಕೊಡಿ ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಆಡಳಿತ ರಾಜ್ಯಗಳು, ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪರಿಣಾಮದ ಬಗ್ಗೆ ಅಂಕಿ ಅಂಶ ನೀಡುವ ತನಕ ಲಸಿಕೆ ಸ್ವೀಕರಿಸುವುದಿಲ್ಲ ಎಂದು ಹೇಳಿಕೆ ನೀಡಿವೆ.
ದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ಬಹಳಷ್ಟು ರಾಜ್ಯಗಳಿಗೆ ದಿನಾಂಕವನ್ನೇ ತಿಳಿಸಿಲ್ಲ. ಮಹಾರಾಷ್ಟ್ರ, ಛತ್ತೀಸ್ಗಢ, ಹರಿಯಾಣ ರಾಜ್ಯಗಳಿಗೆ ಕೊರೊನಾ ಲಸಿಕೆ ಯಾವಾಗ ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಭಾರತದಲ್ಲಿ ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಈ ಎರಡು ಲಸಿಕೆಗಳ ತುರ್ತು ಬಳಕೆಗೆ ಮಾತ್ರ ಅನುಮತಿ ಸಿಕ್ಕಿದೆ. ಆದರೆ, ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ 3 ನೇ ಹಂತದ ಪ್ರಯೋಗವನ್ನು ಇನ್ನಷ್ಟೇ ಮುಗಿಸಬೇಕಿದೆ ಎನ್ನುವುದು ಗಮನಾರ್ಹ.
ಪೂರ್ಣ ಪ್ರಮಾಣದ ಪರೀಕ್ಷೆ ಮುಗಿಸಿರುವ ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯನ್ನೇ ನಮಗೆ ಕೊಡಿ ಇದೆಲ್ಲವನ್ನೂ ಗಮನಿಸಿರುವ ಕಾಂಗ್ರೆಸ್ ಆಡಳಿತ ರಾಜ್ಯಗಳು ಕೊರೊನಾ ಲಸಿಕೆ ಸುರಕ್ಷತೆ ಕುರಿತು ಇದೀಗ ಕಳವಳ ವ್ಯಕ್ತಪಡಿಸಿದ್ದು, ನಮಗೆ ‘ಕೊವ್ಯಾಕ್ಸಿನ್’ ಬೇಡ ಎಂದಿವೆ. ಪೂರ್ಣ ಪ್ರಮಾಣದ ಪರೀಕ್ಷೆ ಮುಗಿಸಿರುವ ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯನ್ನೇ ನಮಗೆ ಕೊಡಿ ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಆಡಳಿತ ರಾಜ್ಯಗಳು, ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪರಿಣಾಮದ ಬಗ್ಗೆ ಅಂಕಿ ಅಂಶ ನೀಡುವ ತನಕ ಲಸಿಕೆ ಸ್ವೀಕರಿಸುವುದಿಲ್ಲ ಎಂದು ಹೇಳಿಕೆ ನೀಡಿವೆ. ಇತ್ತ ಜಾರ್ಖಂಡ್ ರಾಜ್ಯ ಕೊರೊನಾ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದೆ.
ಸರ್ಕಾರ -ಸೆರಮ್ ನಡುವೆ ಲಸಿಕೆ ಬೆಲೆ ಒಪ್ಪಂದದಲ್ಲಿ ಯಾವುದೇ ಬಿರುಕು ಇಲ್ಲ; ಚೌಕಾಸಿ ನಡೆದಿಲ್ಲ: ಪೂನಾವಾಲಾ
Published On - 12:32 pm, Sat, 9 January 21