ದೆಹಲಿ: ಈ ಬಾರಿ ಗಣರಾಜ್ಯೋತ್ಸವ ಸಮಾರಂಭದ ಆಚರಣೆಯನ್ನು ಮೊಟಕುಗೊಳಿಸುವಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸಲಹೆ ನೀಡಿದ್ದಾರೆ. ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾ 2ನೇ ಅಲೆ ಭೀತಿಯಿಂದ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಮುಖ್ಯ ಅತಿಥಿಯೇ ಇಲ್ಲದ ಮೇಲೆ ಎಂದಿನಂತೆ ಗಣರಾಜ್ಯೋತ್ಸವ ಆಚರಿಸುವ ಅವಶ್ಯಕತೆ ಏನಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಪಥಸಂಚಲನ ಕಾರ್ಯಕ್ರಮಕ್ಕಾಗಿ ಜನರನ್ನು ಸೇರಿಸುವುದು ಬೇಜವಾಬ್ದಾರಿತನವಾಗಲಿದೆ. ಸುರಕ್ಷತೆ ದೃಷ್ಟಿಯಿಂದ ಗಣರಾಜ್ಯೋತ್ಸವ ಸಮಾರಂಭವನ್ನು ನಿಲ್ಲಿಸುವುದು ಒಳಿತು ಎಂದು ಶಶಿತರೂರ್ ಟ್ವೀಟ್ ಮಾಡಿದ್ದಾರೆ.
Now that @BorisJohnson’s visit to India this month has been cancelled due to the #COVIDSecondWave, & we don’t have a Chief Guest on #RepublicDay, why not go one step farther & cancel the festivities altogether? Getting crowds to cheer the parade as usual would be irresponsible.
— Shashi Tharoor (@ShashiTharoor) January 5, 2021
ಗಣರಾಜ್ಯೋತ್ಸದ ಗಣ್ಯ ಆತಿಥ್ಯ: ಪ್ರಧಾನಿ ಮೋದಿಗೆ ಕರೆ ಮಾಡಿ ಬರಲ್ಲ ಎಂದ ಬ್ರಿಟನ್ ಪ್ರಧಾನಿ
Published On - 1:50 pm, Wed, 6 January 21