ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿಗೆ ಕಾಂಗ್ರೆಸ್ ಬೆಂಬಲ

|

Updated on: May 22, 2023 | 8:20 PM

ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುವುದು ಮತ್ತುಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಬಿಜೆಪಿ ಸರ್ಕಾರದ ಪ್ರಯತ್ನಗಳ ಬಗ್ಗೆ ಪಕ್ಷದ ಕೇಂದ್ರ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ

ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿಗೆ ಕಾಂಗ್ರೆಸ್ ಬೆಂಬಲ
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​​ಗೆ (Arvind Kejriwal) ಕಾಂಗ್ರೆಸ್ (Congress) ಬೆಂಬಲ ನೀಡಲಿದ್ದು, ಜುಲೈನಲ್ಲಿ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೆಹಲಿಯಲ್ಲಿ(Delhi) ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಕೇಂದ್ರದ ಕಾರ್ಯಕಾರಿ ಆದೇಶವನ್ನು ವಿರೋಧಿಸಲಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಸಂಜೆ ಸುಗ್ರೀವಾಜ್ಞೆ ಅಂಗೀಕರಿಸಲ್ಪಟ್ಟಿದ್ದು ಇದು ಸುಪ್ರೀ ಕೋರ್ಟ್‌ನ ಇತ್ತೀಚಿನ ಆದೇಶವನ್ನು ಉಲ್ಲಂಘಿಸಿದೆ. ಸಂಸತ್ತಿನಲ್ಲಿ ಹೊರಡಿಸಲಾದ ಕೇಂದ್ರದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಕಾಂಗ್ರೆಸ್ ಮತ್ತು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಉತ್ತಮ ಸ್ನೇಹಿತರಾಗಿರಲಿಲ್ಲ. ಅಂದ ಹಾಗೆ ಕೇಂದ್ರ ನಾಯಕರ ಹೇಳಿಕೆಯು ಅದರ ಹಿರಿಯ ನಾಯಕ ಅಜಯ್ ಮಾಕೆನ್ ಅವರ ಸಲಹೆಯ ಒಂದು ದಿನದ ನಂತರ ಬಂದಿದೆ. ಅಧಿಕಾರಿಗಳ ಜತೆ ಸಿಟ್ಟಾಗುವ ಬದಲು ಗೌರವಯುತವಾಗಿ ತೊಡಗಿಸಿಕೊಳ್ಳುವ “ಶೀಲಾ ದೀಕ್ಷಿತ್ ಮಾದರಿ” ಅನ್ನು ಅನುಸರಿಸಿ ಎಂದು ಮಾಕೆನ್, ಕೇಜ್ರಿವಾಲ್​​​ಗೆ ಸಲಹೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುವುದು ಮತ್ತುಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಬಿಜೆಪಿ ಸರ್ಕಾರದ ಪ್ರಯತ್ನಗಳ ಬಗ್ಗೆ ಪಕ್ಷದ ಕೇಂದ್ರ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.ಈ ಹಿಂದೆ ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿತ್ತು, ಇದು ಪ್ರಜಾಪ್ರಭುತ್ವದ ಆಡಳಿತದಲ್ಲಿ ಆಡಳಿತದ ಅಧಿಕಾರವು ಚುನಾಯಿತರಿಗಿರಬೇಕು ಎಂದು ಹೇಳಿದೆ. ಅಧಿಕಾರಿಗಳು ಸಚಿವರಿಗೆ ವರದಿ ಮಾಡುವುದನ್ನು ನಿಲ್ಲಿಸಿದರೆ ಅಥವಾ ಅವರ ನಿರ್ದೇಶನಗಳನ್ನು ಪಾಲಿಸದಿದ್ದರೆ ಸಾಮೂಹಿಕ ಜವಾಬ್ದಾರಿಯ ತತ್ವವು ಪರಿಣಾಮ ಬೀರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ಇದನ್ನೂ ಓದಿ: ಖರ್ಗೆ, ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಿತೀಶ್ ಕುಮಾರ್; ವಿಪಕ್ಷಗಳನ್ನು ಒಗ್ಗೂಡಿಸುವುದೇ ಅಜೆಂಡಾ

2015 ರಲ್ಲಿ ಸೇವಾ ಇಲಾಖೆಯನ್ನು ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣದಲ್ಲಿ ಇರಿಸಲು ಕೇಂದ್ರದ ನಿರ್ಧಾರದ ನಂತರ ಕೇಂದ್ರ ಮತ್ತು ಅರವಿಂದ ಕೇಜ್ರಿವಾಲ್ ಸರ್ಕಾರದ ನಡುವಿನ ಎಂಟು ವರ್ಷಗಳ ಜಗಳದ ನಂತರ ಈ ತೀರ್ಪು ಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ