ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಜಿ20 ಶೃಂಗಸಭೆ(G20 Summit) ನಡೆಯಲಿದೆ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿ20 ಹೋರ್ಡಿಂಗ್ಸ್ ಕುರಿತು ಕಾಂಗ್ರೆಸ್ ನಾಯಕ ಪವನ್ ಖೇಡಾ(Pawan Khera) ಟ್ವೀಟ್ ಮಾಡಿ ಜನಪ್ರಿಯತೆ ಶ್ರೇಯಾಂಕದ ಆಧಾರದ ಮೇಲೆ ದೆಹಲಿಯಲ್ಲಿ ನರೇಂದ್ರ ಮೋದಿ ಹಾಗೂ ಇತರೆ ಜಾಗತಿಕ ನಾಯಕರ ಪೋಸ್ಟರ್ಗಳನ್ನು ಹಾಕಲಾಗಿದೆ ಎಂದು ಆರೋಪಿಸಿದ್ದರು.
ಪವನ್ಖೇಡಾ ಅವರ ಪೋಸ್ಟ್ಗೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಹೇಳಿದೆ, ಅಷ್ಟೇ ಅಲ್ಲದೆ ಬಿಜೆಪಿ ನಾಯಕ ವಿಜಯ್ ಗೋಯೆಲ್ ಟ್ವೀಟ್ ಮಾಡಿದ್ದು, ಅಂತಹ ಯಾವುದೇ ಹೋರ್ಡಿಂಗ್ಸ್ ನಾವು ಹಾಕಿಲ್ಲ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಭಾರತ ವಿಶ್ವಕ್ಕೆ ಆತಿಥ್ಯ ವಹಿಸಲು ಹೊರಟಿರುವಾಗ ಕಾಂಗ್ರೆಸ್ ಇಂತಹ ಹೊಲಸು ರಾಜಕಾರಣ ಮಾಡಬಾರದು ಎಂದರು.
ನಮ್ಮ ಅತಿಥಿಗಳನ್ನು ನಾವು ಹೀಗೆಯೇ ಸ್ವಾಗತಿಸುತ್ತೇವೆಯೇ?
ಮಾಧ್ಯಮಗಳ ವರದಿ ಪ್ರಕಾರ, ಪೋಸ್ಟರ್ ಜತೆಗೆ ತಮ್ಮ ಪೋಸ್ಟ್ನಲ್ಲಿ ಪವನ್ ಖೇಡಾರನ್ನು ವಿಜಯ್ ಗೋಯಲ್ ಅವರನ್ನು ಟೀಕಿಸಿದ್ದಾರೆ ಮತ್ತು ಪಿಎಂ ಮೋದಿಯನ್ನು ವಿಶ್ವದ ಜನಪ್ರಿಯ ನಾಯಕ ಎಂದು ಅಭಿನಂದಿಸಲಾಗಿದೆ. ಈ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿಯವರಲ್ಲದೆ, ಹಲವು ದೇಶಗಳ ನಾಯಕರ ಚಿತ್ರಗಳನ್ನು ಸಹ ಸೇರಿಸಲಾಗಿದೆ ಎಂದುದ್ದಾರೆ.
This is fake news. No such hoarding has been put. Congress should desist from such petty politics at a time when India is hosting the world. https://t.co/okbWbz9eQY
— Vijay Goel (@VijayGoelBJP) September 7, 2023
ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ
ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್ ಮಾರ್ನಿಂಗ್ ಕನ್ಸಲ್ಟ್ ತನ್ನ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಹೇಳಿದೆ. ಈ ಸಂಶೋಧನಾ ಸಂಸ್ಥೆಯು 22 ನಾಯಕರ ಮೇಲೆ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಓದಿ: ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾಗೆ ಫಾಕ್ಸ್ಕಾನ್ ಅಧ್ಯಕ್ಷ ಯಾಂಗ್ ಲಿಯು ಬೆಂಬಲ
ಕಾಂಗ್ರೆಸ್ನ ಈ ರಾಜಕಾರಣ ನಾಚಿಕೆಗೇಡಿನದ್ದು: ಅಮಿತ್ ಮಾಳವೀಯ
ಪವನ್ ಖೇಡಾ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ವಿಜಯ್ ಗೋಯೆಲ್ ಟ್ವೀಟ್ ಮಾಡಿದ ಬಳಿಕ ಪವನ್ ತಮ್ಮ ಪೋಸ್ಟ್ನ್ನು ಡಿಲೀಟ್ ಮಾಡಿದ್ದಾರೆ. ಇದೇ ವೇಳೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ಹೋರ್ಡಿಂಗ್ ಹೊಸದಲ್ಲ ಎಂದು ಹೇಳಿದ್ದಾರೆ. ಈ ಚಿತ್ರ ಹಳೆಯದಾಗಿದ್ದು, ಇಂತಹ ರಾಜಕಾರಣ ಮಾಡಲು ಕಾಂಗ್ರೆಸ್ ನಾಚಿಕೆಯಾಗಬೇಕು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ