AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾಗೆ ಫಾಕ್ಸ್​​ಕಾನ್ ಅಧ್ಯಕ್ಷ ಯಾಂಗ್ ಲಿಯು ಬೆಂಬಲ

Young Liu; ಫಾಕ್ಸ್‌ಕಾನ್ ಶೀಘ್ರದಲ್ಲೇ ಭಾರತದಲ್ಲಿ ಇವಿ ಘಟಕವನ್ನು ಹೊಂದಲಿದೆ. ಭಾರತವು ‘ವಿಶ್ವದ ಹೊಸ ಉತ್ಪಾದನಾ ಕೇಂದ್ರ'ವಾಗಿ ಹೊರಹೊಮ್ಮಲು ಸಿದ್ಧವಾಗಿದೆ ಎಂದು ಲಿಯು ಬಣ್ಣಿಸಿದ್ದಾರೆ. ಪೂರೈಕೆ ಪರಿಸರ ವ್ಯವಸ್ಥೆಯು ಚೀನಾದಲ್ಲಿ ತೆಗೆದುಕೊಂಡ ಸಮಯಕ್ಕಿಂತ ವೇಗವಾಗಿ ಭಾರತದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾಗೆ ಫಾಕ್ಸ್​​ಕಾನ್ ಅಧ್ಯಕ್ಷ ಯಾಂಗ್ ಲಿಯು ಬೆಂಬಲ
ಯಾಂಗ್ ಲಿಯು & ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಗಣಪತಿ ಶರ್ಮಾ
|

Updated on: Sep 07, 2023 | 10:49 PM

Share

ನವದೆಹಲಿ, ಸೆಪ್ಟೆಂಬರ್ 7: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಮೇಕ್ ಇನ್ ಇಂಡಿಯಾ (Make In India)’ ಪರಿಕಲ್ಪನೆಯನ್ನು ಫಾಕ್ಸ್‌ಕಾನ್ ಅಧ್ಯಕ್ಷ (Foxconn Chairman) ಯಾಂಗ್ ಲಿಯು (Young Liu) ಬೆಂಬಲಿಸಿದ್ದಾರೆ. ಇತ್ತೀಚೆಗೆ, ಮಾಧ್ಯಮ ಸಂವಾದವೊಂದರ ಸಂದರ್ಭದಲ್ಲಿ ಅವರು, ಭಾರತದಲ್ಲಿನ ಸುಧಾರಣೆಗಳು ಮತ್ತು ನೀತಿಗಳು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಲಿಯು ಅವರು ಹಾಂಘೈ ಗ್ರೂಪ್‌ನ ಝೊಂಗ್ಯುವಾನ್ ಪುದು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಭವಿಷ್ಯದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲದಿದ್ದರೆ, ಭಾರತವು ವಿಶ್ವದಲ್ಲೇ ಹೊಸ ಉತ್ಪಾದನಾ ಕೇಂದ್ರವಾಗಲಿದೆ. ಚೀನಾದಲ್ಲಿ ಪೂರೈಕೆ ಸರಪಳಿ ನಿರ್ಮಿಸಲು 30 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರ ಇದೀಗ ಆ ವ್ಯವಸ್ಥೆಯು ಭಾರತಕ್ಕೆ ವರ್ಗಾಯಿಸಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅದೃಷ್ಟವಶಾತ್, ನಾವು ಈಗಾಗಲೇ ಈ ಪ್ರದೇಶದಲ್ಲಿ ಅನುಭವವನ್ನು ಹೊಂದಿರುವುದರಿಂದ ಸಮಯವು ತುಲನಾತ್ಮಕವಾಗಿ ಕಡಿಮೆ ಸಾಕಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಅಭಿವೃದ್ಧಿಪಡಿಸಲು ದೊಡ್ಡ ಅವಕಾಶಗಳಿವೆ ಎಂದು ಯಾಂಗ್ ಲಿಯು ಹೇಳಿದ್ದಾರೆ.

ಗ್ರಾಹಕರ ಅಗತ್ಯಗಳಿಗೆ ಪೂರಕವಾಗಿ ಫಾಕ್ಸ್‌ಕಾನ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣಾ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಲಿಯು ಹೇಳಿದ್ದಾರೆ.

ಭಾರತದಲ್ಲಿ ಇವಿ ಉತ್ಪಾದನಾ ಘಟಕ; ಲಿಯು

ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಯಾಂಗ್ ಲಿಯು ತಿಳಿಸಿದ್ದಾರೆ. ಘಟಕವು ತಮಿಳುನಾಡಿನಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳೂ ತಿಳಿಸಿವೆ.

ಇದನ್ನೂ ಓದಿ: ಆಸಿಯಾನ್-ಭಾರತ ಸಹಕಾರವನ್ನು ಬಲಪಡಿಸಲು 12 ಅಂಶಗಳ ಯೋಜನೆ ಪ್ರಸ್ತಾಪಿಸಿದ ಮೋದಿ

ಫಾಕ್ಸ್‌ಕಾನ್ ಶೀಘ್ರದಲ್ಲೇ ಭಾರತದಲ್ಲಿ ಇವಿ ಘಟಕವನ್ನು ಹೊಂದಲಿದೆ. ಇಷ್ಟೇ ಅಲ್ಲದೆ, ಓಹಿಯೋ ಮತ್ತು ಥಾಯ್ಲೆಂಡ್‌ನಲ್ಲಿ ಇವಿ ಘಟಕಗಳನ್ನು ನಿರ್ಮಿಸಲು ಕಂಪನಿಯು ಯೋಜಿಸಿದೆ ಎಂದು ಲಿಯು ಹೇಳಿದ್ದಾರೆ. ಲಿಯು ಇತ್ತೀಚೆಗೆ ಗುಜರಾತ್‌ನಲ್ಲಿ ‘ಸೆಮಿಕಾನ್ ಇಂಡಿಯಾ 2023’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಭಾರತ ವಿಶ್ವದ ಹೊಸ ಉತ್ಪಾದನಾ ಕೇಂದ್ರ; ಲಿಯು ಬಣ್ಣನೆ

ಭಾರತವು ‘ವಿಶ್ವದ ಹೊಸ ಉತ್ಪಾದನಾ ಕೇಂದ್ರ’ವಾಗಿ ಹೊರಹೊಮ್ಮಲು ಸಿದ್ಧವಾಗಿದೆ ಎಂದು ಲಿಯು ಬಣ್ಣಿಸಿದ್ದಾರೆ. ಪೂರೈಕೆ ಪರಿಸರ ವ್ಯವಸ್ಥೆಯು ಚೀನಾದಲ್ಲಿ ತೆಗೆದುಕೊಂಡ ಸಮಯಕ್ಕಿಂತ ವೇಗವಾಗಿ ಭಾರತದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು