ಜಿ20 ಬ್ಯಾನರ್​ ಹಿಡಿದು 10 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ಐಎಎಫ್ ವಿಂಗ್ ಕಮಾಂಡರ್ ಗಜಾನಂದ್

ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ, ಇನ್ನು ಒಂದೇ ಒಂದು ದಿನ ಬಾಕಿ ಉಳಿದಿದೆ. ವಿಶ್ವದ ನಾಯಕರನ್ನು ಬರಮಾಡಿಕೊಳ್ಳಲು ದೇಶ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಗಜಾನಂದ 10 ಸಾವಿರ ಅಡಿ ಎತ್ತರದಿಂದ ಜಿ20 ಬ್ಯಾನರ್​ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ.

ಜಿ20 ಬ್ಯಾನರ್​ ಹಿಡಿದು 10 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ಐಎಎಫ್ ವಿಂಗ್ ಕಮಾಂಡರ್ ಗಜಾನಂದ್
ಗಜಾನಂದ್
Follow us
ನಯನಾ ರಾಜೀವ್
|

Updated on:Sep 08, 2023 | 1:43 PM

ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ, ಇನ್ನು ಒಂದೇ ಒಂದು ದಿನ ಬಾಕಿ ಉಳಿದಿದೆ. ವಿಶ್ವದ ನಾಯಕರನ್ನು ಬರಮಾಡಿಕೊಳ್ಳಲು ದೇಶ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಗಜಾನಂದ 10 ಸಾವಿರ ಅಡಿ ಎತ್ತರದಿಂದ ಜಿ20 ಬ್ಯಾನರ್​ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ.

ಸೌತ್ ವೆಸ್ಟರ್ನ್ ಏರ್ ಕಮಾಂಡ್ ಪ್ರಕಾರ, ವಿಂಗ್ ಕಮಾಂಡರ್ ಗಜಾನಂದ್ ಯಾದವ ಅವರು 10,000 ಅಡಿ ಎತ್ತರದಿಂದ ಜಿ20 ಧ್ವಜದೊಂದಿಗೆ ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್‌ನೊಂದಿಗೆ 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದರು.

ವಿಂಗ್ ಕಮಾಂಡರ್ ಯಾದವ ಅವರು ಏರ್ ಫೋರ್ಸ್ ಸ್ಟೇಷನ್ ಮಾಧ್ ಐಲ್ಯಾಂಡ್‌ನಲ್ಲಿ ನೇಮಕಗೊಂಡಿದ್ದಾರೆ. ಸ್ಕೈಡೈವಿಂಗ್ ಮಾರ್ಚ್​ನಲ್ಲೇ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ಓದಿ: G 20 Summit; ಶೃಂಗಸಭೆಗೂ ಮುನ್ನ ಜಿ 20 ಅಧ್ಯಕ್ಷತೆಯಲ್ಲಿ ಭಾರತದ ಸಾಧನೆಗಳಿವು

ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ 40 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಸರ್ಕಾರಗಳು ಮತ್ತು ಸಂಸ್ಥೆಗಳು ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪಂ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿಳಿಯಲಿದ್ದಾರೆ. ತಿಥಿಗಳ ಆಗಮನವು ಸೆಪ್ಟೆಂಬರ್ 7 ರ ಸಂಜೆಯಿಂದ ಪ್ರಾರಂಭವಾಗಿದ್ದು ಮತ್ತು ಸೆಪ್ಟೆಂಬರ್ 8 ರಂದು ಸಂಜೆ ಮುಕ್ತಾಯಗೊಳ್ಳಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಸಂಜೆ 8 ಗಂಟೆಗೆ ದೆಹಲಿಗೆ ಬಂದಿಳಿಯಲಿದ್ದಾರೆ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ, ಜರ್ಮನ್ ಚಾನ್ಸಲರ್ ಓಲಾಫಾ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಸೇರಿದಂತೆ ವಿಶ್ವದ ಹಲವು ಗಣ್ಯರು ಆಗಮಿಸಲಿದ್ದಾರೆ.

ಆಗಮಿಸಲಿರುವ ಅತಿಥಿಗಳು ಟರ್ಕಿ – ಆರ್ಸಿ ಎರ್ಡೋಗನ್ ಯುನೈಟೆಡ್ ಕಿಂಗ್‌ಡಮ್ – ರಿಷಿ ಸುನಕ್ ಯುನೈಟೆಡ್ ಸ್ಟೇಟ್ಸ್ – ಜೋ ಬೈಡನ್ ಯುರೋಪಿಯನ್ ಯೂನಿಯನ್-ಚಾರ್ಲ್ಸ್ ಮೈಕೆಲ್ ಅರ್ಜೆಂಟೀನಾ – ಆಲ್ಬರ್ಟೊ ಫೆರ್ನಾಂಡಿಸ್ ಆಸ್ಟ್ರೇಲಿಯಾ – ಆಂಥೋನಿ ಅಲ್ಬನೀಸ್ ಬ್ರೆಜಿಲ್ – ಲೂಯಿಜ್ ಇನಾಸಿಯೊ ಕೆನಡಾ – ಜಸ್ಟಿನ್ ಟ್ರುಡೊ ಚೀನಾ–ಲಿ ಚಿಯಾಂಗ್ ಫ್ರಾನ್ಸ್ – ಎಮ್ಯಾನುಯೆಲ್ ಮ್ಯಾಕ್ರನ್ ಜರ್ಮನಿ–ಓಲಾಫ್ ಸ್ಕೋಲ್ಜ್ ಭಾರತ – ನರೇಂದ್ರ ಮೋದಿ ಇಂಡೋನೇಷ್ಯಾ – ಜೋಕೊ ವಿಡೋಡೋ ಇಟಲಿ –ಜಾರ್ಜಿಯಾ ಮೆಲೋನಿ ಜಪಾನ್ — ಫ್ಯೂಮಿಯೋ ಕಿಶಿಡಾ ಮೆಕ್ಸಿಕೋ — ಆಂಡ್ರೆಸ್ ಮ್ಯಾನುಯೆಲ್ ದಕ್ಷಿಣ ಕೊರಿಯಾ – ಯೂನ್ ಸುಕ್ ಯೆಯೋಲ್ ರಷ್ಯಾ – ಸೆರ್ಗೆ ಲಾವ್ರೊವ್ ಸೌದಿ ಅರೇಬಿಯಾ – ಮುಹಮ್ಮದ್ ಬಿನ್ ಸಲ್ಮಾನ್ ದಕ್ಷಿಣ ಆಫ್ರಿಕಾ – ಸಿರಿಲ್ ರಾಮಫೋಸಾ

ಯುಪಿಐ ವಹಿವಾಟುಗಳನ್ನು ಮಾಡಲು ಬಯಸುವ ವಿದೇಶಿ ಪ್ರತಿನಿಧಿಗಳಿಗೆ ಅವರ ಯುಪಿಐ ವ್ಯಾಲೆಟ್‍ಗಳಲ್ಲಿ 500-1,000 ರೂ. ನೀಡಲಾಗುತ್ತದೆ, ಹಾಗೆಯೇ ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬಳಕೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ, ಇದಕ್ಕಾಗಿ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:37 am, Fri, 8 September 23

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್