Constitution Day 2022: ನವೆಂಬರ್​ 26 ಸಂವಿಧಾನ ದಿನವೆಂದು ಏಕೆ ಆಚರಿಸುತ್ತಾರೆ? ಇದರ ಇತಿಹಾಸ, ಇಲ್ಲಿದೆ ಮಾಹಿತಿ

| Updated By: ವಿವೇಕ ಬಿರಾದಾರ

Updated on: Nov 26, 2022 | 7:31 AM

ಪ್ರತಿವರ್ಷ ನವೆಂಬರ್​ 26 ರಂದು ದೇಶದಲ್ಲಿ ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ.

Constitution Day 2022: ನವೆಂಬರ್​ 26 ಸಂವಿಧಾನ ದಿನವೆಂದು ಏಕೆ ಆಚರಿಸುತ್ತಾರೆ? ಇದರ ಇತಿಹಾಸ, ಇಲ್ಲಿದೆ ಮಾಹಿತಿ
ಭಾರತದ ಸಂವಿಧಾನ
Follow us on

ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಭಾರತೀಯ ಸಂವಿಧಾನ. ಪ್ರತಿವರ್ಷ ನವೆಂಬರ್​ 26 ರಂದು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ದೇಶದ ಎಲ್ಲ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನಿಕ ದಿನವನ್ನು ಆಚರಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಸಂವಿಧಾನದ ಅರಿವು ಮೂಡುತ್ತದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 26 ನವೆಂಬರ್ 1949 ಬಹಳ ಮಹತ್ವದ ದಿನವಾಗಿದೆ. ನವೆಂಬರ್​ 26 ರಂದು ಸಂವಿಧಾನ ಅಂಗಿಕಾರವಾಯಿತು. ಹೀಗಾಗಿ ಈ ದಿನವನ್ನು ಸಂವಿಧಾನ ದಿನ ಹಾಗೂ ರಾಷ್ಟ್ರೀಯ ಕಾನೂನು ದಿನ ಎಂತಲೂ ಕರೆಯುತ್ತಾರೆ. ಸಂವಿಧಾನ ಜಾರಿಗೆ ಬಂದಿದ್ದು, 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಲಸಲಾಗುತ್ತದೆ.

ಭಾರತದ ಸಂವಿಧಾನದ ಇತಿಹಾಸ

1946 ರಲ್ಲಿ ಕ್ಯಾಬಿನೆಟ್‌ ಮಿಷನ್‌ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು. ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು 389 ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ ಆಳ್ವಿಕೆಯ 93 ಸದಸ್ಯರೂ ಸೇರಿದ್ದರು. ಇದರ ಮೊದಲ ಸಭೆ 1946 ರ ಡಿ. 9 ರಂದು ನವದೆಹಲಿಯಲ್ಲಿ ನಡೆಯಿತು. ಈ ಸಭೆಗೆ ಡಾ. ಬಾಬು ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. ಡಾ. ಬಾಬಾಸಾಹೇಬ್​ ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು.

ಭಾರತದ ಸಂವಿಧಾನವನ್ನು 1949 ಜನವರಿ 26ರಂದು ಅಂಗೀಕರಿಸಲಾಯಿತು. 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂತು. ಭಾರತದ ಸಂವಿಧಾನವು 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್‌, 5 ಅನುಬಂಧಗಳು, 98 ತಿದ್ದುಪಡಿಗಳನ್ನು ಹೊಂದಿದೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರಿದ್ದರು.

2015ರಿಂದ ಸಂವಿಧಾನ ದಿನ ಎಂದು ಆಚರಿಸಲು ಪ್ರಾರಂಭಿಸಲಾಯಿತು. ಇದಕ್ಕಿಂತ ಮೊದಲು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಲು ಸಂವಿಧಾನ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 am, Sat, 26 November 22