ದೆಹಲಿ ಅಬಕಾರಿ ನೀತಿ ಹಗರಣ: 7 ಆರೋಪಿಗಳ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಿದ ಸಿಬಿಐ

ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾದವರಲ್ಲಿ ಇಬ್ಬರು ಬಂಧಿತ ಉದ್ಯಮಿಗಳು, ಸುದ್ದಿ ವಾಹಿನಿಯ ಮುಖ್ಯಸ್ಥರು, ಹೈದರಾಬಾದ್ ಮೂಲದ ಮದ್ಯ ಉದ್ಯಮಿ, ದೆಹಲಿ ಮೂಲದ ಮದ್ಯ ವಿತರಕರು ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣ: 7 ಆರೋಪಿಗಳ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಿದ ಸಿಬಿಐ
ಸಿಬಿಐ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 25, 2022 | 9:46 PM

ದೆಹಲಿ ಅಬಕಾರಿ ನೀತಿ ಹಗರಣ (Delhi Excise policy )ಪ್ರಕರಣದಲ್ಲಿ ಏಳು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾದವರಲ್ಲಿ ಇಬ್ಬರು ಬಂಧಿತ ಉದ್ಯಮಿಗಳು, ಸುದ್ದಿ ವಾಹಿನಿಯ ಮುಖ್ಯಸ್ಥರು, ಹೈದರಾಬಾದ್ ಮೂಲದ ಮದ್ಯ ಉದ್ಯಮಿ, ದೆಹಲಿ ಮೂಲದ ಮದ್ಯ ವಿತರಕರು ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಹೆಸರುಗಳಲ್ಲಿ ಎಎಪಿ ಸಂವಹನ ತಂತ್ರಜ್ಞ ವಿಜಯ್ ನಾಯರ್, “ಸೌತ್ ಲಾಬಿ” ವ್ಯಕ್ತಿ ಅಭಿಷೇಕ್ ಬೋಯಿನ್ಪಲ್ಲಿ, ಮೂತ ಗೌತಮ್ (ಇಂಡಿಯಾ ಅಹೆಡ್ ನ್ಯೂಸ್ ಎಂಡಿ), ಸಮೀರ್ ಮಹೇಂದ್ರು, ಅರುಣ್ ಪಿಳ್ಳೈ ಮತ್ತು ಇಬ್ಬರು ಮಾಜಿ ಅಬಕಾರಿ ಅಧಿಕಾರಿಗಳಾದ ಕುಲದೀಪ್ ಮತ್ತು ನರೇಂದ್ರ ಸಿಂಗ್ ಸೇರಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸಂಬಂಧಿತ ವಿಚಾರಣಾ ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಸಿಬಿಐ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

ದೆಹಲಿ ಮದ್ಯ ನೀತಿ ಪ್ರಕರಣದ ಮೊದಲ ಚಾರ್ಜ್‌ಶೀಟ್‌ನಲ್ಲಿ ಮನೀಶ್ ಸಿಸೋಡಿಯಾ ಹೆಸರು  ಇಲ್ಲ

ಇಂದು ಸಲ್ಲಿಸಲಾದ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐನ ಮೊದಲ ಆರೋಪಪಟ್ಟಿಯಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರಿಲ್ಲ. ತನಿಖಾ ಸಂಸ್ಥೆ ಸುಳ್ಳು ಆರೋಪಗಳಿಂದ ನಮ್ಮನ್ನು ಮುಕ್ತಗೊಳಿಸಿದೆ ಎಂದು ಇದರರ್ಥ ಎಂದು ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಚಾರ್ಜ್‌ಶೀಟ್‌ನಲ್ಲಿ ಎಎಪಿಯ ಸಂವಹನ ಮುಖ್ಯಸ್ಥ ಮತ್ತು ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋಯಿನ್ಪಲ್ಲಿ ಸೇರಿದಂತೆ ಏಳು ಆರೋಪಿಗಳನ್ನು ಹೆಸರಿಸಲಾಗಿದೆ. ಆಗಸ್ಟ್‌ನಲ್ಲಿ ಸಲ್ಲಿಸಲಾದ ಸಿಬಿಐನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) “ಆರೋಪಿ ನಂಬರ್ 1” ಎಂದು ಪಟ್ಟಿ ಮಾಡಲಾದ ಮನೀಶ್ ಸಿಸೋಡಿಯಾ ಅವರ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ.

ಬಿಜೆಪಿಯವರು ಮದ್ಯ ಹಗರಣದ ಕಥೆ ಕಟ್ಟಿಕೊಂಡು ನನ್ನ ಮನೆ ಮೇಲೆ ದಾಳಿ ನಡೆಸಿದ್ದರು. ಸಿಬಿಐ ಆರೋಪಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮಾನಹಾನಿ ಮಾಡಿರುವುದು ಸ್ಪಷ್ಟವಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಮೂಲಕ ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ವರದಿ ಮಾಡಿದೆ. ಸಿಬಿಐ  ಮನೀಶ್ ಸಿಸೋಡಿಯಾಗೆ ಕ್ಲೀನ್ ಚಿಟ್ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆ ನೀಡಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ ಹೇಳಿದ್ದಾರೆ.

ಸಿಸೋಡಿಯಾ ಅವರು ನಿರಪರಾಧಿ ಎಂಬುದಕ್ಕೆ ಸಿಬಿಐ ಚಾರ್ಜ್‌ಶೀಟ್ ಪುರಾವೆ ಎಂದು ಎಎಪಿ ಹೇಳಿದೆ.

ಎಲ್ಲ ಆರೋಪಗಳು ದೆಹಲಿ ನಾಗರಿಕ ಚುನಾವಣೆ ಮತ್ತು ಗುಜರಾತ್ ಚುನಾವಣೆಗೆ ಮುನ್ನ ನಮ್ಮ ನಾಯಕರನ್ನು ಗುರಿಯಾಗಿಸುವ ಪ್ರಯತ್ನವಾಗಿದೆ ಎಂದು ಸಾಬೀತುಪಡಿಸುತ್ತದೆ. ಬಿಜೆಪಿ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಆರೋಪಪಟ್ಟಿಯಲ್ಲಿ ‘ಆರೋಪಿ ನಂಬರ್ 1’ ಕೂಡ ಇಲ್ಲದಿರುವುದು ಇತಿಹಾಸದಲ್ಲಿ ಇದೇ ಮೊದಲು. ಇದಕ್ಕಿಂತ ದೊಡ್ಡ ಸಮರ್ಥನೆ ಬೇರೊಂದಿಲ್ಲ ಎಂದು ಅವರು ಹೇಳಿದರು. ದೆಹಲಿಯ ಎಎಪಿ ಸರ್ಕಾರದ ಹೊಸ ಮದ್ಯ ನೀತಿಯಲ್ಲಿನ ಗಂಭೀರ ಉಲ್ಲಂಘನೆಯ ಆರೋಪಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ.ದೆಹಲಿ ಸರ್ಕಾರ ಈ ನೀತಿಯನ್ನುಆರು ತಿಂಗಳೊಳಗೆ ಹಿಂತೆಗೆದುಕೊಂಡಿತ್ತು.

Published On - 9:45 pm, Fri, 25 November 22

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ