ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣ ಬಿಡುಗಡೆ, ಕರ್ನಾಟಕಕ್ಕೆ ಎಷ್ಟು ಬಂತು?
ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣ ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?
ನವದೆಹಲಿ: ಕೇಂದ್ರ ಸರ್ಕಾರವು ದೇಶದ ವಿವಿಧ ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಇಂದು(ನವೆಂಬರ್ 25) ಬಿಡುಗಡೆ ಮಾಡಿದೆ. 2022ರ ಏಪ್ರಿಲ್‌ನಿಂದ ಜೂ.24ರ ಅವಧಿಯ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ GST ಬಾಕಿ ಹಣ ಒಟ್ಟ 75 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ 1,915 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಹಣ ಸಿಕ್ಕಿದೆ.
Centre releases Rs 17,000 cr as GST compensation to States, UTs
Read @ANI Story | https://t.co/aQEe6kispz#GST #states #GstCompensation pic.twitter.com/hsS82EfMHK
— ANI Digital (@ani_digital) November 25, 2022
ಕೇಂದ್ರ ಸರ್ಕಾರ 2022-23ರ ಸಾಲಿನಲ್ಲಿ ಈವರೆಗೆ ಕೇಂದ್ರ ಸರ್ಕಾರ 1,15,662 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ ಈ ಬಾರಿಯ ಜಿಎಸ್ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ 2081 ಕೋಟಿ ರೂ, ಸಿಕ್ಕಿದ್ದರೆ, ನಂತರ ಸ್ಥಾನದಲ್ಲಿರುವ ರ್ನಾಟಕಕ್ಕೆ 1,915 ಕೋಟಿ ರೂ. ನೀಡಿದೆ.
ಯಾವ ರಾಜ್ಯಕ್ಕೆ ಎಷ್ಟು ಜಿಎಸ್ಟಿ ಪರಿಹಾರ ಹಣ?
* ಆಂಧ್ರ ಪ್ರದೇಶಕ್ಕೆ 682 ಕೋಟಿ ರೂ. * ಅಸ್ಸಾಂ-192 ಕೋಟಿ ರೂ. * ಬಿಹಾರ್-91 ಕೋಟಿ ರೂ. * ಛತ್ತೀಸ್ಗಢ 500 ಕೋಟಿ ರೂ.. * ದೆಹಲಿ-1200 ಕೋಟಿ ರೂ., * ಗೋವಾ-119 ಕೋಟಿ ರೂ., * ಗುಜರಾತ್-856 ಕೋಟಿ ರೂ., * ಹರಿಯಾಣ 622 ಕೋಟಿ ರೂ.. * ಹಿಮಾಚಲ ಪ್ರದೇಶ-226 ಕೋಟಿ ರೂ,. * ಜಮ್ಮು ಮತ್ತು ಕಾಶ್ಮೀರ-208 ಕೋಟಿ ರೂ,. * ಜಾರ್ಖಂಡ್- 338 ಕೋಟಿ ರೂ.. * ಕರ್ನಾಟಕ-1915 ಕೋಟಿ ರೂ,. * ಕೇರಳ-713 ಕೋಟಿ ರೂ,. * ಮಧ್ಯಪ್ರದೇಶ- 722 ಕೋಟಿ ರೂ,. * ಮಹಾರಾಷ್ಟ್ರ- 2081 ಕೋಟಿ ರೂ.. * ಒಡಿಶಾ-524 ಕೋಟಿ ರೂ.. * ಪಾಂಡಿಚರಿ- 73 ಕೋಟಿ ರೂ.. * ಪಂಜಾಬ್-984 ಕೋಟಿ ರೂ.. * ರಾಜಸ್ಥಾನ-806 ಕೋಟಿ ರೂ.. * ತಮಿಳುನಾಡು-542 ಕೋಟಿ ರೂ.. * ಉತ್ತರ ಪ್ರದೇಶ-342 ಕೋಟಿ ರೂ.. * ಪಶ್ಚಿಮ ಬಂಗಾಳ-814 ಕೋಟಿ ರೂ,. ಎಲ್ಲಾ ರಾಜ್ಯಗಳಿಗೆ ಸೇರಿ ಒಟ್ಟು 17,000 ರೂ. ಬಿಡುಗಡೆ ಮಾಡಿದೆ
Published On - 7:39 pm, Fri, 25 November 22