ಭಾರತದ ಮೊದಲ ಕೇಬಲ್ ರೈಲು ಸೇತುವೆ ನಿರ್ಮಾಣ, ಇಲ್ಲಿದೆ ಕೆಲವೊಂದು ಫೋಟೋಗಳು
ಭಾರತದ ಮೊದಲ ಕೇಬಲ್ ರೈಲು ಸೇತುವೆಯನ್ನು ಜಮ್ಮು ಕಾಶ್ಮೀರದ ಅಂಜಿ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಕತ್ರಾವನ್ನು ರಿಯಾಸಿಯೊಂದಿಗೆ ಸಂಪರ್ಕಿಸುವ ಈ ಸೇತುವೆಯ ಕೆಲವೊಂದು ಫೋಟೋಗಳು ಇಲ್ಲಿವೆ.
Updated on: Jul 08, 2022 | 6:41 PM

Construction of India's first cable railway bridge Here are some photos

Construction of India's first cable railway bridge Here are some photos

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸೇತುವೆಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಸುಂದರವಾದ ನೋಟವನ್ನು ಬೀರುವ ಸೇತುವೆಗಳನ್ನು ಕಾಣಬಹುದು. ಕಾಶ್ಮೀರವನ್ನು ಸಂಪರ್ಕಿಸುವ ದೇಶದ ಮೊದಲ ಕೇಬಲ್ ತಂಗುವ ರೈಲು ಸೇರುವೆ, ಅಂಜಿ ಖಾಡ್ ಸೇತುವೆ ಭವಿಷ್ಯಕ್ಕಾಗಿ ಸಿದ್ಧವಾಗಿದೆ ಎಂದು ಅಶ್ವಿನಿ ವೈಷ್ಣವ್ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.

ಈ ಸೇತುವೆಯು 473.25 ಮೀಟರ್ ಉದ್ದ ಇದ್ದು, ನದಿಯ ಮಟ್ಟದಿಂದ 331 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲದೆ 96 ಕೇಬಲ್ಗಳ ಬೆಂಬಲದೊಂದಿಗೆ ನಿರ್ಮಾಣವಾಗುತ್ತಿದೆ. ಈ ಸೇತುವೆಯು ಭಾರಿ ಬಿರುಗಾಳಿಗಳನ್ನು ಎದುರಿಸಬಲ್ಲದು. ಸೇತುವೆ ನಿರ್ಮಾಣ ಕಾಮಗಾರಿಯು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇಳಿಜಾರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿರುವ ಈ ಸೇತುವೆ ನಿರ್ಮಾಣಕ್ಕೆ ವಿಶಿಷ್ಟ ಹಾಗೂ ಸುಧಾರಿತ ತಂತ್ರಜ್ಞಾನ ಮತ್ತು ಸಲಕರಣೆಗಳ ಸಹಾಯ ತೆಗೆದುಕೊಳ್ಳಲಾಗಿದೆ. ಕೊಂಕಣ ರೈಲ್ವೇ ಕಾರ್ಪೋರೇಷನ್ ಲಿ. ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.



















