ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೆ ಶಿಕ್ಷೆ: ವಿವಾದ ಶಮನ ಮಾಡಲು ಯತ್ನಿಸಿದ ಬಿಹಾರ ಸಿಎಂ

‘ರಚನಾತ್ಮಕ ಟೀಕೆಯನ್ನು ಸ್ವಾಗತಿಸುತ್ತೇವೆ. ಸುಳ್ಳುಸುದ್ದಿ ಹಬ್ಬಿಸುವ, ಅವಮಾನ ಉಂಟುಮಾಡುವಂತಹ ಪೋಸ್ಟ್​ಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೆ ಶಿಕ್ಷೆ: ವಿವಾದ ಶಮನ ಮಾಡಲು ಯತ್ನಿಸಿದ ಬಿಹಾರ ಸಿಎಂ
ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on:Jan 22, 2021 | 10:07 PM

ಪಾಟ್ನಾ: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಪೋಸ್ಟ್​ಗಳನ್ನು ಸೈಬರ್ ಕ್ರೈಮ್​ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ಹೂಡುವ ಯೋಚನೆ ವಿವಾದಕ್ಕೀಡಾಗಿದೆ. ಈ ವಿವಾದವನ್ನು ಶಮನಗೊಳಿಸಲು ಪ್ರಯತ್ನಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ರಚನಾತ್ಮಕ ಟೀಕೆಯನ್ನು ಸ್ವಾಗತಿಸುತ್ತೇವೆ. ಸುಳ್ಳುಸುದ್ದಿ ಹಬ್ಬಿಸುವ, ಅವಮಾನ ಉಂಟುಮಾಡುವಂತಹ ಪೋಸ್ಟ್​ಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಅವಶ್ಯ. ಆದರೆ, ರಚನಾತ್ಮಕ ಮತ್ತು ಗುಣಮಟ್ಟದ ಭಾಷೆಯಲ್ಲಿದ್ದರೆ ಮಾತ್ರ ಅವುಗಳು ಸ್ವೀಕಾರಾರ್ಹ. ವದಂತಿಗಳನ್ನು ಹಬ್ಬಿಸುವ, ಕೆಟ್ಟ ಭಾಷೆಯಲ್ಲಿ ತೆಗಳುವ ಪೋಸ್ಟ್​ಗಳನ್ನು ಐಟಿ ಆ್ಯಕ್ಟ್​ನಡಿ ಶಿಕ್ಷೆಗೆ ಒಳಪಡಿಸಬಹುದು ಎಂದು ಬಿಹಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಪೋಸ್ಟ್​ಗಳನ್ನು ಹಾಕುವವರನ್ನು ಶಿಕ್ಷಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈ ನಿರ್ಣಯ ವಿವಾದಕ್ಕೀಡಾಗುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.

Published On - 10:06 pm, Fri, 22 January 21