ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ (Murshidabad) ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದಲ್ಲಿ ಹಳೆಯ ನೀರಿನ ಟ್ಯಾಂಕ್ ಕೆಡವುವ ಸಂದರ್ಭದಲ್ಲಿ ಕ್ಲೋರಿನ್ ಅನಿಲದ (chlorine gas) ಕಂಟೇನರ್ ಸೋರಿಕೆಯಾಗಿದ್ದು,15 ಜನರು ಅಸ್ವಸ್ಥರಾಗಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜನರು ಉಸಿರುಗಟ್ಟಿ ಅಸ್ವಸ್ಥರಾಗಿದ್ದು ಅವರನ್ನು ಲಾಲ್ಬಾಗ್ ಉಪವಿಭಾಗ ಆಸ್ಪತ್ರೆಗೆ ಸಾಗಿಸಲಾಯಿತು. ಜೆಸಿಬಿಗಳು ಕೆಡವುವ ಕಾರ್ಯ ಮಾಡುತ್ತಿದ್ದ ವೇಳೆ ಅರಿವಿಲ್ಲದೆ ಹಳೆಯ ನೀರಿನ ಟ್ಯಾಂಕ್ ಅನ್ನು ಒಡೆದಿವೆ. ಸ್ಥಳದಲ್ಲಿ ಅನಿಲವನ್ನು ಹೊರಹಾಕಲು ಅಗ್ನಿಶಾಮಕ ಇಂಜಿನ್‌ಗಳು ನೀರು ಬಳಸುತ್ತಿವೆ ತೀವ್ರವಾಗಿ ಅಸ್ವಸ್ಥರಾದ 2 ಮಂದಿಯನ್ನು ಬಹರಂಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ” ಎಂದು ಲಾಲ್‌ಬಾಗ್ ಅಗ್ನಿಶಾಮಕ ಠಾಣೆಯ ಪ್ರಭಾರಿ ಜಿತೇನ್ ಪಾಲ್ ಹೇಳಿದ್ದಾರೆ.
West Bengal| JCBs at work broke it by mistake. People complained of suffocation, were rushed to Lalbagh Subdivision Hospital. Water used from fire engines to douse out gas at location. 2 seriously ill shifted to Baharampur Medical College: Jiten Pal, Incharge Lalbagh Fire station pic.twitter.com/POPccKgNJU
— ANI (@ANI) May 16, 2022
ಈ ವರ್ಷದ ಫೆಬ್ರವರಿಯಲ್ಲಿ, ರಾಜ್ಯದ ದುರ್ಗಾಪುರದ ಸ್ಟೀಲ್ ಪ್ಲಾಂಟ್‌ನಲ್ಲಿ ನಿರ್ವಹಣೆ ಕೆಲಸದ ವೇಳೆ ಅಪಘಾತ ಸಂಭವಿಸಿ ಮೂವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿದ್ದರು. ಬೇಸಿಕ್ ಆಕ್ಸಿಜನ್ ಫರ್ನೇಸ್ (ಬಿಒಎಫ್) ಪರಿವರ್ತಕದಲ್ಲಿ ಕೆಲಸ ಮಾಡುವಾಗ ಪ್ರಜ್ಞಾಹೀನರಾಗಿ ಬಿದ್ದಿದ್ದರಿಂದ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಯೂನಿಯನ್ ನಾಯಕ ಆರೋಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅವರಲ್ಲಿ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ ಇಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:35 pm, Mon, 16 May 22