ದೆಹಲಿ: ಕಳೆದ ವಾರ ಒಡಿಶಾದ (Odisha Train Accident) ಬಾಲಸೋರ್‌ನಲ್ಲಿ (Balasore) ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ (Coromandel Express), ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು- ಈ ಮೂರು ರೈಲುಗಳು ಡಿಕ್ಕಿ ಹೊಡೆದು ಸಂಭವಿಸಿದ ಈ ಅಪಘಾತ ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದ ನಿಖರವಾದ ಕ್ಷಣವನ್ನು ಸೆರೆಹಿಡಿಯುವ ಹೊಸ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ದಿಲೀಪ್ ರಾವ್ ಜಿ ಶೆಟ್ಟಿ ಎಂಬವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊದಲ್ಲಿನ ದೃಶ್ಯಗಳನ್ನು ನೋಡಿದರೆ ಬೋಗಿಯೊಳಗೆ ಒಬ್ಬರು ಕ್ಲೀನಿಂಗ್ ಸಿಬ್ಬಂದಿ ನೆಲವನ್ನು ಒರೆಸುತ್ತಿರುವುದು ಕಾಣುತ್ತದೆ. ಪ್ರಯಾಣಿಕರು ತಮ್ಮ ಬರ್ತ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದೂ ಕಾಣುತ್ತದೆ. ನಂತರ ಬೋಗಿ ಅಲುಗಾಡುತ್ತಿದ್ದು, ಜೋರಾಗಿ ಕಿರುಚಾಟದ ನಡುವೆ ಕ್ಯಾಮೆರಾ ಕೂಡಾ ಅಲುಗಾಡಲು ಪ್ರಾರಂಭಿಸುತ್ತದೆ. ಕಿರುಚಾಟ, ಅರಚಾಟಗಳು ಕೇಳಿಬರುತ್ತವೆ, ಸುತ್ತಲೂ ಕತ್ತಲೆ. ಇದಿಷ್ಟು ವಿಡಿಯೊದಲ್ಲಿ ಸೆರೆಯಾಗಿದೆ.
विचलित करने वाला
Disturbing Video ALERT!!!#ओडिशा के #बालासोर में #ट्रेन_हादसे का विचलित करने वाला #वीडियो सामने आया है जो उस वक़्त इस घटना को एसी डिब्बे के अंदर कोई कैद कर रहा था?#news #TrainAccident #Balasore #OdishaTrainAccident #BalasoreTrainAccident #OdishaTrainTragedy pic.twitter.com/90WiAm5nAV
— Dilip Rao G Shetty ✪ (@DilipRaoG) June 8, 2023
ಈ ವಿಡಿಯೊವನ್ನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗಿದ್ದು ಟಿವಿ9 ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
ಭೀಕರ 3 ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಿಗ್ನಲ್ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಹೇಳಿದೆ.
ಇದನ್ನೂ ಓದಿ: Odisha: ಒಡಿಶಾದ ಜಾಜ್‌ಪುರ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲಿನಡಿ ಸಿಲುಕಿ 6 ಮಂದಿ ಕಾರ್ಮಿಕರು ಸಾವು
ಒಡಿಶಾ ಪೊಲೀಸರು ರೈಲು ಅಪಘಾತವನ್ನುನಿರ್ಲಕ್ಷ್ಯದಿಂದ ಸಾವು ಮತ್ತು ಜೀವಕ್ಕೆ ಅಪಾಯ ಆರೋಪದೊಂದಿಗೆ ಪ್ರಕರಣ ದಾಖಲಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ