ಸೋಂಕಿತನ ಮೃತ ದೇಹವನ್ನ ಆಟೋದಲ್ಲೇ ತೆಗೆದುಕೊಂಡು ಹೋದರು

| Updated By:

Updated on: Jul 12, 2020 | 1:03 PM

ತೆಲಂಗಾಣ: ಕಿಲ್ಲರ್ ಕೊರೊನಾ ವಿಶ್ವದೆಲ್ಲೆಡೆ ಹಬ್ಬಿ ಮರಣ ಮೃದಂಗ ಬಾರಿಸುತ್ತಿದೆ. ಇದರ ಜೊತೆಗೆ ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಮನಮಿಡಿಯುವ ದೃಶ್ಯ ಕಂಡು ಬಂದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ನಿಜಾಮಾಬಾದ್ ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕರೆದೊಯ್ಯದ ಘಟನೆ ನಡೆದಿದೆ. ನಿಜಾಮಾಬಾದ್ ಆಸ್ಪತ್ರೆ ಕೊರೊನಾದಿಂದ ಬಲಿಯಾದ 50 ವರ್ಷದ ವ್ಯಕ್ತಿಯ ಶವವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಹಾಗೂ ಯಾವುದೇ ಆಂಬುಲೆನ್ಸ್ ವ್ಯವಸ್ಥೆಯಾಗಲಿ ಅಥವಾ ಸಿಬ್ಬಂದಿಯ ವ್ಯವಸ್ಥೆಯನ್ನು ಆಸ್ಪತ್ರೆ ಮಂಡಳಿ […]

ಸೋಂಕಿತನ ಮೃತ ದೇಹವನ್ನ ಆಟೋದಲ್ಲೇ ತೆಗೆದುಕೊಂಡು ಹೋದರು
Follow us on

ತೆಲಂಗಾಣ: ಕಿಲ್ಲರ್ ಕೊರೊನಾ ವಿಶ್ವದೆಲ್ಲೆಡೆ ಹಬ್ಬಿ ಮರಣ ಮೃದಂಗ ಬಾರಿಸುತ್ತಿದೆ. ಇದರ ಜೊತೆಗೆ ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಮನಮಿಡಿಯುವ ದೃಶ್ಯ ಕಂಡು ಬಂದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ನಿಜಾಮಾಬಾದ್ ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕರೆದೊಯ್ಯದ ಘಟನೆ ನಡೆದಿದೆ.

ನಿಜಾಮಾಬಾದ್ ಆಸ್ಪತ್ರೆ ಕೊರೊನಾದಿಂದ ಬಲಿಯಾದ 50 ವರ್ಷದ ವ್ಯಕ್ತಿಯ ಶವವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಹಾಗೂ ಯಾವುದೇ ಆಂಬುಲೆನ್ಸ್ ವ್ಯವಸ್ಥೆಯಾಗಲಿ ಅಥವಾ ಸಿಬ್ಬಂದಿಯ ವ್ಯವಸ್ಥೆಯನ್ನು ಆಸ್ಪತ್ರೆ ಮಂಡಳಿ ಮಾಡಿಲ್ಲ. ಈ ಬಗ್ಗೆ ಮಂಡಳಿಗೆ ಪ್ರಶ್ನಿಸಿದಾಗ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ನಮ್ಮ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದವರು.

ಅವರು ತುಂಬಾ ಬೇಡಿಕೊಂಡಿದ್ದರಿಂದ ದೇಹವನ್ನು ಹಸ್ತಾಂತರಿಸಲಾಯಿತು. ನಂತರ ಅವರು ಆಂಬುಲೆನ್ಸ್​ಗೆ ಕಾಯದೆ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಜೊತೆ ಮೃತದೇಹವನ್ನು ಆಟೋ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆ ವ್ಯವಸ್ಥಾಪಕ ಡಾ.ನಾಗೇಶ್ವರರಾವ್ ಹೇಳಿದ್ರು. ಮೃತ ಕೊರೊನಾ ಸೋಂಕಿತ ವ್ಯಕ್ತಿ ಜೂನ್ 27ರಂದು ನಿಜಾಮಾಬಾದ್ ಆಸ್ಪತ್ರೆಗೆ ದಾಖಲಾಗಿದ್ದ.

Published On - 7:55 am, Sun, 12 July 20