ಚೆನ್ನೈ: ದೇಶಾದ್ಯಂತ ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆ ಆರಂಭವಾಗಿದೆ. ತಮಿಳುನಾಡಿನ ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಹರ್ಷವರ್ಧನ್ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜನವರಿ 2ರಂದು ಸುಮಾರು 125 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ತಾಲೀಮು ನಡೆಸಿದ್ದೇವೆ. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನೂ ದೊಡ್ಡಮಟ್ಟದ ತಾಲೀಮು ನಡೆಸಲಾಗುತ್ತಿದೆ. ಕೊರೊನಾ ಲಸಿಕೆ ವಿತರಣೆಗೆ ಬೇಕಾದ ಎಲ್ಲಾ ತಯಾರಿಯೂ ಆಗಲಿ ಎಂಬ ಉದ್ದೇಶದಿಂದ ಇದನ್ನು ನಡೆಸುತ್ತಿದ್ದೇವೆ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ.
On January 2nd, we did dry run in almost 125 districts in the country and today, we are doing it across the country expect the three states who did it earlier: Union Health Minister Dr Harsh Vardhan #Chennai pic.twitter.com/XoMyotriKm
— ANI (@ANI) January 8, 2021
ಲಸಿಕೆ ವಿತರಣೆಗೆ ಮೊದಲು ಇನ್ನೊಮ್ಮೆ ತಾಲೀಮು.. ಇಂದೇ ನಡೆಯಲಿದೆ ಕೊವಿನ್ ಸಾಫ್ಟ್ವೇರ್ ಪರಿಶೀಲನೆ