ಕೊರೊನಾ ಕ್ರಿಮಿಯನ್ನ ಕಟ್ಟಿಹಾಕಿದ ಧಾರಾವಿ ಸ್ಲಂ, ಶಹಬ್ಬಾಸ್ ಅಂದಿದ್ದು WHO

| Updated By:

Updated on: Jul 11, 2020 | 4:53 PM

ಭಾರತದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಏರುತ್ತಲೆ ಇದ್ದು ದೇಶ ವ್ಯಾಪಿ ತನ್ನ ಕಬಂದ ಬಾಹುಗಳನ್ನ ಚಾಚುತ್ತಲೆ ಇದೆ. ದೇಶದ ಮಹಾನ್ ನಗರಗಳಾದ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಇನ್ನಿತರ ರಾಜ್ಯಗಳಲ್ಲಿ ರೋಗಕ್ಕೆ ತುತ್ತಾಗುವವರ ಸಂಖ್ಯೆ ವಿಪರೀತ ಹೆಚ್ಚಾಗುತ್ತಲೆ ಇದ್ದು ಆಡಳಿತ ವರ್ಗದ ನಿದ್ದೆಗೆಡಿಸಿದೆ. ಆದರೆ ಸಮಧಾನಕರ ಸಂಗತಿಯೆಂದರೆ ದೇಶದ ಅತಿ ದೊಡ್ಡ ಕೊಳೆಗೇರಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವುದು. ದೇಶದ ಬೇರೆ ಕಡೆಗಳಲ್ಲಿ  ಕೊರೊನಾ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಹರಡುತ್ತಿದ್ದರೆ ಮುಂಬೈ ನ ಧಾರಾವಿ ಸ್ಲಂ ನಲ್ಲಿ […]

ಕೊರೊನಾ ಕ್ರಿಮಿಯನ್ನ ಕಟ್ಟಿಹಾಕಿದ ಧಾರಾವಿ ಸ್ಲಂ, ಶಹಬ್ಬಾಸ್ ಅಂದಿದ್ದು WHO
Follow us on

ಭಾರತದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಏರುತ್ತಲೆ ಇದ್ದು ದೇಶ ವ್ಯಾಪಿ ತನ್ನ ಕಬಂದ ಬಾಹುಗಳನ್ನ ಚಾಚುತ್ತಲೆ ಇದೆ. ದೇಶದ ಮಹಾನ್ ನಗರಗಳಾದ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಇನ್ನಿತರ ರಾಜ್ಯಗಳಲ್ಲಿ ರೋಗಕ್ಕೆ ತುತ್ತಾಗುವವರ ಸಂಖ್ಯೆ ವಿಪರೀತ ಹೆಚ್ಚಾಗುತ್ತಲೆ ಇದ್ದು ಆಡಳಿತ ವರ್ಗದ ನಿದ್ದೆಗೆಡಿಸಿದೆ.

ಆದರೆ ಸಮಧಾನಕರ ಸಂಗತಿಯೆಂದರೆ ದೇಶದ ಅತಿ ದೊಡ್ಡ ಕೊಳೆಗೇರಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವುದು. ದೇಶದ ಬೇರೆ ಕಡೆಗಳಲ್ಲಿ  ಕೊರೊನಾ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಹರಡುತ್ತಿದ್ದರೆ ಮುಂಬೈ ನ ಧಾರಾವಿ ಸ್ಲಂ ನಲ್ಲಿ ಮಾತ್ರ  ಆ ಕ್ರಿಮಿ ಸಂಪೂರ್ಣ ಹತೋಟಿಗೆ ಬಂದಿದೆ.

ಹೌದು, ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಸುಮಾರು 6.5 ಲಕ್ಷ ಮಂದಿ ವಾಸವಿದ್ದು ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಪ್ರದೇಶಗಳಲ್ಲಿ ಧಾರಾವಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತದೆ. ಆದರೆ ಈಗ ಕೊರೊನಾವನ್ನು ನಿಯಂತ್ರಣಕ್ಕೆ ತಂದ ವಿಚಾರದಲ್ಲಿಯೂ ಸಹ ಇದೀಗ ಧಾರಾವಿ ಮೊದಲ ಪಂಕ್ತಿಯಲ್ಲಿದೆ.

ಸ್ವತಃ ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) ಬಹಿರಂಗ ಪಡಿಸುವುದರ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಸಹಕರಿಸಿದ ಧಾರಾವಿಯ ನಿವಾಸಿಗಳು ಹಾಗು ಮುಂಬೈ ಸ್ಥಳೀಯ ಆಡಳಿತದ ಕಾರ್ಯ ವೈಖರಿಯನ್ನು ಶ್ಲಾಘಿಸಿದೆ.

ಜೊತೆಗೆ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವಾರದ ಆದಿತ್ಯ ಠಾಕ್ರೆ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಈ ಯಶಸ್ಸಿಗೆ ಕಾರಣರಾದ ಮಹಾರಾಷ್ಟ್ರದ ಚುನಾಯಿತ ಪ್ರತಿನಿಧಿಗಳು, ವಿವಿಧ ಸರ್ಕಾರೇತರ ಸಂಸ್ಥೆಗಳು (NGO) ಹಾಗೂ ಧಾರಾವಿಯ ನಿವಾಸಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Published On - 4:23 pm, Sat, 11 July 20