ಸಾವಿರದ ಗಡಿ ದಾಟಿಯೇ ಬಿಟ್ಟಿತು ಕೊರೊನಾ ಅಟ್ಟಹಾಸ

ಸಾವಿರದ ಗಡಿ ದಾಟಿಯೇ ಬಿಟ್ಟಿತು ಕೊರೊನಾ ಅಟ್ಟಹಾಸ

ನವದೆಹಲಿ: ಭಾರತದಲ್ಲಿ ಕೊರೊನಾ ರೌದ್ರಾವತಾರ ಮುಂದುವರೆದಿದೆ. ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಭಾರತದಲ್ಲಿ ಈವರೆಗೆ ಕೊರೊನಾಗೆ 1,007 ಜನರು ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 73 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಂದೇ ದಿನ ಭಾರತದಲ್ಲಿ ಅತಿಹೆಚ್ಚು ಜನರು ಬಲಿಯಾಗಿದ್ದಾರೆ.

ಕೊರೊನಾ ವೈರಸ್ ಪೀಡಿತರ ಸಂಖ್ಯೆ 31,332ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,897 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 7,696 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 22,629 ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 9,318 ಕ್ಕೆ ಏರಿಕೆಯಾಗಿದೆ. ಗುಜರಾತ್​​ 3,744, ದೆಹಲಿ 3314, ಮಧ್ಯಪ್ರದೇಶ 2387, ರಾಜಸ್ಥಾನ 2364, ತಮಿಳುನಾಡು 2058 ಜನರಿಗೆ ಸೋಂಕು ತಗುಲಿದೆ.

Published On - 10:30 am, Wed, 29 April 20

Click on your DTH Provider to Add TV9 Kannada