Coronavirus India Update: ದೇಶದಲ್ಲಿ 3.68 ಲಕ್ಷ ಹೊಸ ಕೊವಿಡ್ ಪ್ರಕರಣ, 2 ಕೋಟಿ ಸನಿಹಕ್ಕೆ ಸೋಂಕಿತರ ಸಂಖ್ಯೆ

|

Updated on: May 03, 2021 | 11:10 AM

Covid 19 India: ಭಾರತದಲ್ಲಿ ಒಂದೇ ದಿನ 3,68,147 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,99,25,604 ಕ್ಕೆ ತಲುಪಿದೆ. 3, 417 ಮಂದಿ ಸಾವಿಗೀಡಾಗಿದ್ದು, ಮರಣ ಸಂಖ್ಯೆ 2,18,959ಕ್ಕೇರಿದೆ.

Coronavirus India Update: ದೇಶದಲ್ಲಿ 3.68 ಲಕ್ಷ ಹೊಸ ಕೊವಿಡ್ ಪ್ರಕರಣ, 2 ಕೋಟಿ ಸನಿಹಕ್ಕೆ ಸೋಂಕಿತರ ಸಂಖ್ಯೆ
ಅಜ್ಮೇರ್​ನಲ್ಲಿ ಕಂಡ ದೃಶ್ಯ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,68,147 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,99,25,604 ಕ್ಕೆ ತಲುಪಿದೆ. 3, 417 ಮಂದಿ ಸಾವಿಗೀಡಾಗಿದ್ದು, ಮರಣ ಸಂಖ್ಯೆ 2,18,959ಕ್ಕೇರಿದೆ. ಒಟ್ಟು 16,29,3003  ಮಂದಿ ಚೇತರಿಸಿಕೊಂಡಿದ್ದಾರೆ. 15,71,98,207 ಮಂದಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ  ಹೇಳಿದೆ.

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಆಕ್ಸಿಜನ್ ಸಿಗದೆ 12 ಮಂದಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ 2021 ಮೇ 3 ಮಧ್ಯರಾತ್ರಿಗಿಂತ ಮುಂಚೆ ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ. ಅದೇ ವೇಳೆ ಹೆಚ್ಚಿನ ಸಂಗ್ರಹ ಇರಿಸಿ ಮುಂದೆ ವೈದ್ಯಕೀಯ ಆಕ್ಸಿಜನ್​ಗೆ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಕೊವಿಡ್ ಎರಡನೇ ಅಲೆ ಅತೀ ತೀವ್ರವಾಗಿರುವುದರಿಂದ ಜನರ ಆರೋಗ್ಯದ ದೃಷ್ಟಿಯಲ್ಲಿ ಲಾಕ್​ಡೌನ್ ಹೇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಹೇಳಿದೆ. ಪಂಜಾಬ್, ಒಡಿಶಾ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳು ಕೊವಿಡ್ ನಿಯಂತ್ರಣಕ್ಕಾಗಿ ಲಾಕ್​ಡೌನ್ ಹೇರಿವೆ.


ತೆಲಂಗಾಣದಲ್ಲಿ 5, 695 ಹೊಸ ಕೊವಿಡ್ ಪ್ರಕರಣ
ಕಳೆದ 24 ಗಂಟೆಗಳಲ್ಲಿ ತೆಲಂಗಾಮದಲ್ಲಿ 5, 695 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 6,206 ಮಂದಿ ಚೇತರಿಸಿದ್ದಾರೆ. 49 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯಇಲಾಖೆ ಹೇಳಿದೆ


ಮಹಾರಾಷ್ಟ್ರದ ಥಾಣೆಯಲ್ಲಿ 2,774 ಹೊಸ ಕೊವಿಡ್ ಪ್ರಕರಣ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 2,774 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ 4,72,794ಕ್ಕೇರಿದೆ. 42 ಮಂದಿ ರೋಗಿಗಳು ಕೊವಿಡ್ ನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 7,685ಕ್ಕೇರಿದೆ
ಪಾಲ್ಗಾರ್ ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 88,625ಕ್ಕೇರಿದ್ದು ಸಾವಿನ ಸಂಖ್ಯೆ 1,593ಕ್ಕೆ ತಲುಪಿದೆ


ಒಡಿಶಾದಲ್ಲಿ 9,000 ಹೊಸ ಪ್ರಕರಣ
ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 8,914 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 5 ಮಂದಿಸಾವಿಗೀಡಾಗಿದ್ದಾರೆ. 6,527 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 71,835ಕ್ಕೇರಿದೆ

(Coronavirus India reports 3.68 lakh new Covid19 cases 3417 deaths in last 24 hours)

ಇದನ್ನೂ ಓದಿ:  Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು

Published On - 10:40 am, Mon, 3 May 21