ಹೆಚ್ಚುತ್ತಿರುವ ಕೊರೊನಾವೈರಸ್ (Coronavirus) ಪ್ರಕರಣಗಳ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಶುಕ್ರವಾರ ಪರಿಶೀಲನಾ ಸಭೆ ನಡೆಸಿದ್ದು, ರಾಜ್ಯಗಳು ಜಾಗರೂಕರಾಗಿರಿ ಮತ್ತು ಕೋವಿಡ್-19 (COVID-19) ನಿರ್ವಹಣೆಗೆ ಸಿದ್ಧರಾಗಿರಿ ಎಂದು ಸಲಹೆ ನೀಡಿದ್ದಾರೆ. ಆನ್ಲೈನ್ ಮೂಲಕ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆಸಿ ಸಭೆಯಲ್ಲಿ, ಮಾಂಡವಿಯಾ ಅವರು ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ಐಎಲ್‌ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕಿನ (ಎಸ್‌ಎಆರ್‌ಐ) ಪ್ರಕರಣಗಳ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ತುರ್ತು ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು, ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಬೇಕು. ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಾತ್ರಿಪಡಿಸಬೇಕು ಎಂದಿದ್ದಾರೆ.
ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದರ ಜೊತೆಗೆ ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದು, ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ಅವರು ಒತ್ತು ನೀಡಿದರು.
Union Health Minister Dr Mansukh Mandaviya virtually interacted with State Health Ministers and Principal Secretaries/ Additional Chief Secretaries, today.
Union Health Minister advised States to be on the alert and keep all preparedness for COVID-19 management. He urged the… pic.twitter.com/CS7QRihcDm
— ANI (@ANI) April 7, 2023
ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಹಿಂದಿನ ಉಲ್ಬಣಗಳ ಸಮಯದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಕಾರ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಮಾಂಡವಿಯಾ ಹೇಳಿದರು.
ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಡ್ರಿಲ್‌ಗಳನ್ನು ನಡೆಸಬೇಕು. ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಆರೋಗ್ಯ ಸಿದ್ಧತೆಯನ್ನು ಪರಿಶೀಲಿಸಬೇಕು ಎಂದು ಅವರು ರಾಜ್ಯ ಆರೋಗ್ಯ ಮಂತ್ರಿಗಳನ್ನು ಒತ್ತಾಯಿಸಿದರು.
ಭಾರತದಲ್ಲಿ ಒಂದೇ ದಿನದಲ್ಲಿ 6,050 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 28,303 ಸಕ್ರಿಯ ಪ್ರಕರಣಗಳಿವೆ. ಒಂದು ದಿನದ ಹಿಂದೆ 5,300 ಪ್ರಕರಣಗಳು ಪತ್ತೆಯಾಗಿದ್ದವು.ಕೋವಿಡ್ ಪ್ರಕರಣಗಳ ಪ್ರವೃತ್ತಿಯಲ್ಲಿ ಹೆಚ್ಚಳದೊಂದಿಗೆ, ವಿಜ್ಞಾನಿಗಳು XBB.1.16 ಪ್ರಸ್ತುತ ಉಲ್ಬಣಕ್ಕೆ ಕಾರಣವಾಗಿರುವ Covid-19 ರೂಪಾಂತರವಾಗಿದೆ ಎಂದು ಹೇಳಿದರು.
ಜನರು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಅಂತರವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇತ್ತೀಚಿನ INSACOG ಬುಲೆಟಿನ್ ಪ್ರಕಾರ, ಹೊಸದಾಗಿ ಹೊರಹೊಮ್ಮಿದ ಮರುಸಂಯೋಜಿತ ಕೊರೊನಾವೈರಸ್ ರೂಪಾಂತರ XBB.1.16 ಅನ್ನು ದೇಶದ ವಿವಿಧ ಭಾಗಗಳಲ್ಲಿ ಗಮನಿಸಲಾಗಿದೆ, ಇದು ಇಲ್ಲಿಯವರೆಗೆ 38.2 ಪ್ರತಿಶತದಷ್ಟು ಸೋಂಕನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ