Coronavirus: ಭಾರತದಲ್ಲಿ ಕೋವಿಡ್-19, ಇನ್‌ಫ್ಲುಯೆನ್ಜಾ ವೈರಸ್ ಹೆಚ್ಚಳ: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಮಾ.28) ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜತೆಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು. ಆರೋಗ್ಯ ಇಲಾಖೆಯ ಮೂಲಸೌಕರ್ಯ ಮತ್ತು ಕೋವಿಡ್ ಸನ್ನದ್ಧತೆ, ಲಸಿಕೆ ಅಭಿಯಾನದ ಸ್ಥಿತಿ, ಹೊಸ ಕೋವಿಡ್ -19 ಪ್ರಕರಣಗಳ, ಇನ್‌ಫ್ಲುಯೆನ್ಜಾ ವೈರಸ್ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.
ದೆಹಲಿ: ಭಾರತದಲ್ಲಿ ಒಂದೇ ದಿನ 2,151 ಹೊಸ ಕೊರೊನಾ (Coronavirus) ಪ್ರಕರಣಗಳು ಪತ್ತೆಯಾಗಿದ್ದು, ಜೊತೆಗೆ ಇನ್‌ಫ್ಲುಯೆನ್ಜಾ ವೈರಸ್ ಹೆಚ್ಚಾಗುತ್ತಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಮಾ.28) ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜತೆಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು. ಆರೋಗ್ಯ ಇಲಾಖೆಯ ಮೂಲಸೌಕರ್ಯ ಮತ್ತು ಕೋವಿಡ್ ಸನ್ನದ್ಧತೆ, ಲಸಿಕೆ ಅಭಿಯಾನದ ಸ್ಥಿತಿ, ಹೊಸ ಕೋವಿಡ್ -19 ಪ್ರಕರಣಗಳ, ಇನ್‌ಫ್ಲುಯೆನ್ಜಾ ವೈರಸ್ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ದೇಶದಲ್ಲಿ ಕೋವಿಡ್ -19 ಮತ್ತು ಇನ್‌ಫ್ಲುಯೆನ್ಜಾ ವೈರಸ್ಗಳ ಪರಿಸ್ಥಿತಿಯ ಬಗ್ಗೆ ನಿರ್ಣಯಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು. ದೇಶದ ಸಾರ್ವಜನಿಕ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದೇಶದಲ್ಲಿ ಇನ್‌ಫ್ಲುಯೆನ್ಜಾ ಪ್ರಕರಣಗಳ ಹೆಚ್ಚಳ ಮತ್ತು ಕಳೆದ 2 ವಾರಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಈ ಸಭೆಯನ್ನು ನಡೆಸಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಸೇರಿದಂತೆ ಜಾಗತಿಕ ಕೋವಿಡ್-19 ಪರಿಸ್ಥಿತಿಯ ಬಗ್ಗಿನ ಸಮಗ್ರ ದಾಖಲೆಗಳನ್ನು ಆರೋಗ್ಯ ಕಾರ್ಯದರ್ಶಿ ಮೋದಿ ಮುಂದೆ ಪ್ರಸ್ತುತಪಡಿಸಿದ್ದಾರೆ. 2023ರ ಮಾರ್ಚ್ 22ರಿಂದ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 888 ಮತ್ತು ವಾರದ ಪಾಸಿಟಿವ್ ದರ 0.98%ರಷ್ಟು ವರದಿಯಾಗಿದೆ. ಈಗ ಹೊಸ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯಾಗುತ್ತಿದೆ ಎಂದು ಪ್ರಧಾನ ಮಂತ್ರಿಗೆ ವಿವರಿಸಲಾಯಿತು. 1.08 ಲಕ್ಷ ದೈನಂದಿನ ಸರಾಸರಿ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.
ಡಿಸೆಂಬರ್ 22 2022ರಂದು ನಡೆದ ಕೊನೆಯ ಕೋವಿಡ್-19 ಪರಿಶೀಲನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೀಡಿದ ನಿರ್ದೇಶನಗಳ ಮೇಲೆ ಕೈಗೊಂಡ ಕ್ರಮಗಳನ್ನು ಸಹ ವಿವರಿಸಲಾಗಿದೆ. 20 ಮುಖ್ಯ ಕೋವಿಡ್ ಔಷಧಗಳು, 12 ಇತರ ಔಷಧಗಳು, 8 ಬಫರ್ ಔಷಧಗಳು ಮತ್ತು 1 ಇನ್ಫ್ಲುಯೆನ್ಸ ಔಷಧಗಳ ಲಭ್ಯತೆ ಮತ್ತು ಬೆಲೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮೋದಿಗೆ ಮಾಹಿತಿ ನೀಡಿದರು. 27 ಡಿಸೆಂಬರ್ 2022 ರಂದು 22,000 ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ ಅನ್ನು ಸಹ ನಡೆಸಲಾಯಿತು ಮತ್ತು ನಂತರ ಆಸ್ಪತ್ರೆಗಳು ಅನೇಕ ಪರಿಹಾರ ಕ್ರಮಗಳನ್ನು ತೆಗೆದುಕೊಂಡವು ಎಂದು ಹೇಳಲಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ H1N1 ಮತ್ತು H3N2 ಪ್ರಕರಣಗಳು ಹೆಚ್ಚಾಗಿದೆ. ಜತೆಗೆ ವಿಶೇಷವಾಗಿ ದೇಶದಲ್ಲಿ ಇನ್‌ಫ್ಲುಯೆನ್ಜಾ ವೈರಸ್ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರು ವಿವರಿಸಿದರು. INSACOG ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳೊಂದಿಗೆ ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದು ಹೊಸ ರೂಪಾಂತರಗಳ ಟ್ರ್ಯಾಕಿಂಗ್ನ್ನು ಹೆಚ್ಚಿಸುತ್ತದೆ. ಅಂತಹ ಯಾವುದಾದರೂ ಪ್ರಕರಣಗಳು ಇದ್ದರೆ ಮತ್ತು ಆ ಬಗ್ಗೆ ಸಮಯೋಚಿತ ಪ್ರತಿಕ್ರಿಯೆ ನೀಡಲು ಈ ಸಭೆಯಲ್ಲಿ ತಿಳಿಸಿದ್ದಾರೆ.
ರೋಗಿಗಳು, ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಸೂಕ್ತ ಕ್ರಮಗಳನ್ನು ಪಾಲಿಸುವಂತೆ ಪ್ರಧಾನಿ ಹೆಚ್ಚು ಒತ್ತು ನೀಡಿ ಹೇಳಿದರು. ಹಿರಿಯ ನಾಗರಿಕರು ಮತ್ತು ಅನಾರೋಗ್ಯದಿಂದ ಇರುವವರು ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಇದನ್ನೂ ಓದಿ: Coronavirus: 945 ದಿನಗಳ ಬಳಿಕ ಮಾಸ್ಕ್ ಕಡ್ಡಾಯ ನಿಯಮವನ್ನು ಹಿಂಪಡೆದ ಹಾಂಗ್ಕಾಂಗ್
IRI/SARI ಪ್ರಕರಣಗಳ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಇನ್‌ಫ್ಲುಯೆನ್ಜಾ, SARS-CoV-2 ಮತ್ತು ಅಡೆನೊವೈರಸ್ ಪರೀಕ್ಷೆಗಳನ್ನು ಮಾಡುವಂತೆ ರಾಜ್ಯಗಳಿಗೆ ಸೂಚನೆ ನೀಡುವಂತೆ ನಿರ್ದೇಶಿಸಿದರು. ಇದಲ್ಲದೆ, ಸಾಕಷ್ಟು ಆಸ್ಪತ್ರೆ ಬೆಡ್ ಮತ್ತು ಆರೋಗ್ಯ ಮಾನವ ಸಂಪನ್ಮೂಲಗಳ ಲಭ್ಯತೆಯ ಜೊತೆಗೆ ಆರೋಗ್ಯ ಸೌಲಭ್ಯಗಳಾದ್ಯಂತ ಇನ್‌ಫ್ಲುಯೆನ್ಜಾ ಮತ್ತು ಕೋವಿಡ್-19 ಗೆ ಅಗತ್ಯವಿರುವ ಔಷಧಗಳು ಮತ್ತು ಲಾಜಿಸ್ಟಿಕ್ಸ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸದಸ್ಯ (ಆರೋಗ್ಯ) NITI ಆಯೋಗ ಡಾ. ವಿ.ಕೆ.ಪಾಲ್, ರಾಜೀವ್ ಗೌಬಾ, ಕ್ಯಾಬಿನೆಟ್ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ, ಫಾರ್ಮಾಸ್ಯುಟಿಕಲ್ಸ್ ಮತ್ತು ಅದರ ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ DG, ICMR, ಅಮಿತ್ ಖರೆ, ಸಲಹೆಗಾರ ಹಾಗೂ ಇತರ ಅಧಿಕಾರಿಗಳು ಮೋದಿ ಸಭೆಯಲ್ಲಿ ಭಾಗಿಯಾಗಿದ್ದರು.
Published On - 2:53 pm, Wed, 29 March 23