Coronavirus: 945 ದಿನಗಳ ಬಳಿಕ ಮಾಸ್ಕ್ ಕಡ್ಡಾಯ ನಿಯಮವನ್ನು ಹಿಂಪಡೆದ ಹಾಂಗ್ಕಾಂಗ್
ಕೊರೊನಾ ಆರಂಭವಾದಾಗಿನಿಂದ ಹಾಂಗ್ಕಾಂಗ್ನಲ್ಲಿ ಆರಂಭವಾಗಿದ್ದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮವು ಬರೋಬ್ಬರಿ 945 ದಿನಗಳ ಬಳಿಕ ಅಂತ್ಯಗೊಂಡಿದೆ.
ಕೊರೊನಾ ಆರಂಭವಾದಾಗಿನಿಂದ ಹಾಂಗ್ಕಾಂಗ್ನಲ್ಲಿ ಆರಂಭವಾಗಿದ್ದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮವು ಬರೋಬ್ಬರಿ 945 ದಿನಗಳ ಬಳಿಕ ಅಂತ್ಯಗೊಂಡಿದೆ. ಹಾಂಗ್ ಕಾಂಗ್ ಬುಧವಾರದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವುದನ್ನು ನಿಲ್ಲಿಸುತ್ತಿದೆ. ಮಾಸ್ಕ್ಗಳನ್ನು ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇದೀಗ ಹಾಂಗ್ಕಾಂಗ್ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸಲು ಮುಂದಾಗಿದೆ. ಹೀಗಾಗಿ ನಗರದಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಹಿಂಪಡೆದಿದೆ.
ಈ ವರ್ಷದ ಆರಂಭದಲ್ಲಿ ಹಾಂಗ್ ಕಾಂಗ್ ಇತರ ಸಾಂಕ್ರಾಮಿಕ ನಿರ್ಬಂಧಗಳನ್ನು ಕೈಬಿಟ್ಟಿದೆ. ಹಾಂಗ್ ಕಾಂಗ್ ಕಳೆದ ವರ್ಷ ತನ್ನ ಕಟ್ಟುನಿಟ್ಟಾದ COVID ನಿಯಮಗಳನ್ನು ಅಷ್ಟಷ್ಟಾಗಿ ಸಡಿಲಗೊಳಿಸುತ್ತಾ ಬಂದಿತ್ತು, ಆದರೆ ಮಾಸ್ಕ್ ಧರಿಸುವುದು ಕಡ್ಡಾಯ ನಿಮವನ್ನು ಮಾತ್ರ ಬಿಟ್ಟಿರಲಿಲ್ಲ.
ಮತ್ತಷ್ಟು ಓದಿ: Covid Cases: ಭಾರತದಲ್ಲಿ 1 ದಿನದಲ್ಲಿ 96 ಕೋವಿಡ್ ಪ್ರಕರಣಗಳು; ಎಷ್ಟಿವೆ ಸಕ್ರಿಯ ಕೇಸ್?
ಜುಲೈ 29, 2020 ರಿಂದ ಜನರು ಹೊರಾಂಗಣ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವಂತೆ ನಿಯಮವನ್ನು ರೂಪಿಸಲಾಗಿತ್ತು. 2 ವರ್ಷದ ಮೇಲ್ಪಟ್ಟ ಮಕ್ಕಳು ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಲಿಕೆ ಮತ್ತು ಮಕ್ಕಳ ಬೆಳವಣಿಗೆ ಮೇಲಿನ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಒಂದು ಹಂತದಲ್ಲಿ, ವ್ಯಾಯಾಮ ಮಾಡುವಾಗಲೂ ಮಾಸ್ಕ್ ಅಗತ್ಯವಿತ್ತು. 2020ರ ಸಂದರ್ಭದಲ್ಲಿ ಮಾಸ್ಕ್ ಕೊರತೆಯಿಂದ ಜನರು ತೊಟ್ಟ ಮಾಸ್ಕ್ ಗಳನ್ನೇ ಮರು ಬಳಕೆ ಮಾಡುತ್ತಿದ್ದರು. ಇದರಿಂದ ಸೋಂಕು ಅಪಾಯವೂ ಎದುರಾಗುವ ಸಾಧ್ಯತೆಯಿತ್ತು. ಈ ಸಮಸ್ಯೆಯನ್ನು ಮನಗಂಡು ಉಚಿತವಾಗಿ ಒಂದು ಕೋಟಿ ಮಾಸ್ಕ್ ವಿತರಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ