Volodymyr Zelensky: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ: ವೊಲೊಡಿಮಿರ್ ಝೆಲೆನ್ಸ್ಕಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ದಿನ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ದಿನ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದರು. ರಷ್ಯಾದ ಅಧ್ಯಕ್ಷರ ನಾಯಕತ್ವದಲ್ಲಿ ದುರ್ಬಲತೆಯ ಅವಧಿಯು ಬರಲಿದೆ ಎಂದು ಝೆಲೆನ್ಸ್ಕಿ ಹೇಳಿದರು. ಒಂದಲ್ಲಾ ಒಂದು ಅವರ ಆಪ್ತ ಎನಿಸಿಕೊಂಡಿರುವವರೇ ಅವರ ವಿರುದ್ಧ ತಿರುಗಿಬೀಳುತ್ತಾರೆ. ಅವರ ಆತ್ಮೀಯರೇ ಅವರನ್ನು ಹತ್ಯೆ ಮಾಡುತ್ತಾರೆ ಎಂದರು.
ಪುಟಿನ್ ಅವರ ಆಡಳಿತದ ದುರ್ಬಲತೆಯನ್ನು ಅನುಭವಿಸುವ ಕ್ಷಣ ಒಂದಲ್ಲಾ ಒಂದು ದಿನ ಬಂದೇ ಬರುತ್ತದೆ. ಇದು ನಮ್ಮ ಭೂಮಿ, ನಮ್ಮ ಜನರು, ನಮ್ಮ ಇತಿಹಾಸ. ನಾವು ಉಕ್ರೇನ್‌ನ ಪ್ರತಿಯೊಂದು ಮೂಲೆಗೂ ಉಕ್ರೇನಿಯನ್ ಧ್ವಜವನ್ನು ಮತ್ತೆ ನಿಲ್ಲಿಸುತ್ತೇವೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಏತನ್ಮಧ್ಯೆ, ಝೆಲೆನ್ಸ್ಕಿ ಅವರ ಇತ್ತೀಚಿನ ಕಾಮೆಂಟ್‌ಗಳಿಗೆ ರಷ್ಯಾ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ.
ರಷ್ಯಾ ಮತ್ತು ಉಕ್ರೇನ್ ಮಧ್ಯದ ಕದನ ಆರಂಭವಾದ ಬಳಿಕ, ಈ ಯುದ್ಧ ಭಾರತೀಯ ಸೇನೆಯೂ ಸೇರಿದಂತೆ, ಜಗತ್ತಿನ ವಿವಿಧ ಸೇನಾಪಡೆಗಳಿಗೆ ಹಲವು ಪಾಠಗಳನ್ನು ಕಲಿಸಿದೆ. ಈ ಯುದ್ಧದ ಪರಿಣಾಮವಾಗಿ, ಕದನದ ಕುರಿತಾದ ಹಲವು ಸಾಂಪ್ರದಾಯಿಕ ನೋಟಗಳನ್ನು ಮರುಪರಿಶೀಲನೆ ನಡೆಸಬೇಕಾದ ಅಗತ್ಯವಿದೆ.
ಮತ್ತಷ್ಟು ಓದಿ: Russia-Ukraine Crisis ಬುಕಾ ಹತ್ಯೆ: ಯುದ್ಧ ಅಪರಾಧಗಳ ವಿಚಾರಣೆ ಮಾಡಬೇಕೆಂದು ಕರೆ ನೀಡಿದ ಅಮೆರಿಕ ಅಧ್ಯಕ್ಷ ಬೈಡನ್
ರಷ್ಯಾ ಉಕ್ರೇನ್ ಕದನದ ಪರಿಣಾಮ ಎಷ್ಟು ತೀವ್ರವಾಗಿದೆ ಎಂದರೆ, ಜರ್ಮನಿಯಂತಹ ಐರೋಪ್ಯ ರಾಷ್ಟ್ರಗಳು ತಮ್ಮ ಪ್ರದೇಶದಲ್ಲಿ ಯುದ್ಧ ಸಂಭವಿಸುವುದಿಲ್ಲ ಎಂಬ ಯೋಚನೆಗಳಿಂದ ತಕ್ಷಣವೇ ಎಚ್ಚರಗೊಂಡಂತೆ ಕಂಡುಬರುತ್ತಿವೆ. ಜರ್ಮನಿಯಂತೂ ತನ್ನ ರಕ್ಷಣಾ ವೆಚ್ಚವನ್ನು 100% ಹೆಚ್ಚಿಸಿದೆ.
ಮಿಲಿಟರಿಯ ಆಂತರಿಕ ವಿಶ್ಲೇಷಕರ ಪ್ರಕಾರ, ರಷ್ಯಾ ಉಕ್ರೇನ್‌ಗಳ ನಡುವಿನ ಸಮರದಿಂದ ಕಲಿಯಬೇಕಾದ ಪ್ರಮುಖ ಪಾಠವೆಂದರೆ ಭಾರತ ತನ್ನ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ