AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ, ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳ ಕೊರತೆ; ಸಂಕಷ್ಟದಲ್ಲಿ ರೋಗಿಗಳು

ಭಾರತ ಮತ್ತು ಚೀನಾ ಸೇರಿದಂತೆ ಇತರ ರಾಷ್ಟ್ರಗಳಿಂದ ಕಚ್ಚಾ ವಸ್ತುಗಳ ಅಗತ್ಯವಿರುವ ಸುಮಾರು 95 ಪ್ರತಿಶತದಷ್ಟು ಔಷಧಿಗಳೊಂದಿಗೆ ಪಾಕಿಸ್ತಾನದ ಔಷಧ ತಯಾರಿಕೆಯು ಹೆಚ್ಚು ಆಮದು-ಅವಲಂಬಿತವಾಗಿದೆ.

ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ, ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳ ಕೊರತೆ; ಸಂಕಷ್ಟದಲ್ಲಿ ರೋಗಿಗಳು
ಪ್ರಾತಿನಿಧಿಕ ಚಿತ್ರImage Credit source: Reuters/Amit Dave
ರಶ್ಮಿ ಕಲ್ಲಕಟ್ಟ
|

Updated on:Feb 26, 2023 | 7:48 PM

Share

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು (economic crisis) ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಇಲ್ಲಿನರೋಗಿಗಳು ಅಗತ್ಯ ಔಷಧಿಗಳಿಗಾಗಿ ಹೆಣಗಾಡುತ್ತಿದ್ದಾರೆ. ದೇಶದಲ್ಲಿ ಫಾರೆಕ್ಸ್ ಮೀಸಲು ಕೊರತೆಯು ಅಗತ್ಯವಿರುವ ಔಷಧಿಗಳನ್ನು ಅಥವಾ ದೇಶೀಯ ಉತ್ಪಾದನೆಯಲ್ಲಿ ಬಳಸುವ ಸಕ್ರಿಯ ಔಷಧೀಯ ಪದಾರ್ಥಗಳನ್ನು (Active Pharmaceutical Ingredients- API) ಆಮದು ಮಾಡಿಕೊಳ್ಳುವ ಪಾಕಿಸ್ತಾನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ, ಸ್ಥಳೀಯ ಔಷಧ ತಯಾರಕರು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಿದ್ದರಿಂದ ಆಸ್ಪತ್ರೆಗಳಲ್ಲಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಲೂ ಸಾಧ್ಯವಾಗದ ಪರಿಸ್ಥಿತಿ ಇಲ್ಲಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಆಪರೇಷನ್ ಥಿಯೇಟರ್‌ಗಳಲ್ಲಿ ಹೃದಯ, ಕ್ಯಾನ್ಸರ್ ಮತ್ತು ಮೂತ್ರಪಿಂಡ ಸೇರಿದಂತೆ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳಿಗೆ ಅಗತ್ಯವಿರುವ ಅರಿವಳಿಕೆ ಎರಡು ತಿಂಗಳಿಗಾಗುವಷ್ಟೇ ಉಳಿದಿದೆ. ಈ ಪರಿಸ್ಥಿತಿಯು ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಆಮದುಗಳಿಗೆ ಹೊಸ ಲೆಟರ್ ಆಫ್ ಕ್ರೆಡಿಟ್ (LC)ಗಳನ್ನು ನೀಡುತ್ತಿಲ್ಲ ಎಂದು ಹೇಳುವ ಮೂಲಕ ಔಷಧ ತಯಾರಕರು ಆರೋಗ್ಯ ವ್ಯವಸ್ಥೆಯಲ್ಲಿನ ಬಿಕ್ಕಟ್ಟಿಗೆ ಹಣಕಾಸು ವ್ಯವಸ್ಥೆಯನ್ನು ದೂಷಿಸಿದ್ದಾರೆ.

ಭಾರತ ಮತ್ತು ಚೀನಾ ಸೇರಿದಂತೆ ಇತರ ರಾಷ್ಟ್ರಗಳಿಂದ ಕಚ್ಚಾ ವಸ್ತುಗಳ ಅಗತ್ಯವಿರುವ ಸುಮಾರು 95 ಪ್ರತಿಶತದಷ್ಟು ಔಷಧಿಗಳೊಂದಿಗೆ ಪಾಕಿಸ್ತಾನದ ಔಷಧ ತಯಾರಿಕೆಯು ಹೆಚ್ಚು ಆಮದು-ಅವಲಂಬಿತವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಾಲರ್‌ಗಳ ಕೊರತೆಯಿಂದಾಗಿ ಹೆಚ್ಚಿನ ಔಷಧ ತಯಾರಕರಿಗೆ, ಆಮದು ಮಾಡಿಕೊಂಡ ವಸ್ತುಗಳನ್ನು ಕರಾಚಿ ಬಂದರಿನಲ್ಲಿ ನಿಲ್ಲಿಸಲಾಗಿದೆ.

ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಸಾರಿಗೆ ಶುಲ್ಕಗಳು ಮತ್ತು ಪಾಕಿಸ್ತಾನಿ ರೂಪಾಯಿಯ ತೀವ್ರ ಅಪಮೌಲ್ಯದಿಂದಾಗಿ ಔಷಧಗಳ ತಯಾರಿಕೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ ಎಂದು ಔಷಧ ತಯಾರಿಕಾ ಉದ್ಯಮವು ಹೇಳಿದೆ.

ಇದನ್ನೂ ಓದಿ: ಕೊಲೆಯಾದ ಖ್ಯಾತ ಮಾಡೆಲ್‌ನ ಕಾಲು ಫ್ರಿಡ್ಜ್‌ನಲ್ಲಿ ಪತ್ತೆ; ರುಂಡ, ಕೈಗಳು ನಾಪತ್ತೆ! ಭೀಕರತೆಯ ಸ್ಟೋರಿ ಇಲ್ಲಿದೆ

ಇತ್ತೀಚೆಗಷ್ಟೇ, ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ತಡೆಯಲು ಪಾಕಿಸ್ತಾನದ ವೈದ್ಯಕೀಯ ಸಂಘ (ಪಿಎಂಎ) ಸರ್ಕಾರದ ಮಧ್ಯಸ್ಥಿಕೆಗೆ ಕರೆ ನೀಡಿತು. ಆದಾಗ್ಯೂ, ಅಧಿಕಾರಿಗಳು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಇನ್ನೂ ಕೊರತೆಯ ಪ್ರಮಾಣವನ್ನು ನಿರ್ಣಯಿಸಲು ಪ್ರಯತ್ನಿಸುತ್ತಿದ್ದಾರೆ.

ಪಾಕಿಸ್ತಾನದ ಪಂಜಾಬ್‌ನ ಔಷಧಿ ಚಿಲ್ಲರೆ ವ್ಯಾಪಾರಿಗಳು, ನಿರ್ಣಾಯಕ ಔಷಧಿಗಳ ಕೊರತೆಯನ್ನು ನಿರ್ಧರಿಸಲು ಸರ್ಕಾರಿ ಸಮೀಕ್ಷೆ ತಂಡಗಳು ಕ್ಷೇತ್ರ ಭೇಟಿಗಳನ್ನು ನಡೆಸಿವೆ ಎಂದು ಹೇಳಿದ್ದಾರೆ. ಕೆಲವು ಸಾಮಾನ್ಯ ಆದರೆ ಪ್ರಮುಖ ಔಷಧಿಗಳ ಕೊರತೆಯು ಹೆಚ್ಚಿನ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಬಹಿರಂಗಪಡಿಸಿದ್ದಾರೆ. ಈ ಔಷಧಿಗಳಲ್ಲಿ ಪನಾಡೋಲ್, ಇನ್ಸುಲಿನ್, ಬ್ರೂಫೆನ್, ಡಿಸ್ಪ್ರಿನ್, ಕ್ಯಾಲ್ಪೋಲ್, ಟೆಗ್ರಾಲ್, ನಿಮೆಸುಲೈಡ್, ಹೆಪಾಮರ್ಜ್, ಬುಸ್ಕೋಪಾನ್ ಮತ್ತು ರಿವೋಟ್ರಿಲ್ ಇತ್ಯಾದಿ ಸೇರಿವೆ.

ಜನವರಿಯಲ್ಲಿ ಪಾಕಿಸ್ತಾನ ಔಷಧ ತಯಾರಕರ ಸಂಘದ (ಪಿಪಿಎಂಎ) ಕೇಂದ್ರ ಅಧ್ಯಕ್ಷ ಸೈಯದ್ ಫಾರೂಕ್ ಬುಖಾರಿ ಅವರು ಸುಮಾರು 20-25 ಪ್ರತಿಶತದಷ್ಟು ಔಷಧೀಯ ಉತ್ಪಾದನೆಯು ಪ್ರಸ್ತುತ ಮಂದಗತಿಯಲ್ಲಿ ನಿಂತಿದೆ ಎಂದು ಹೇಳಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಮುಂದಿನ ನಾಲ್ಕರಿಂದ ಐದು ವಾರಗಳವರೆಗೆ ಪ್ರಸ್ತುತ ನೀತಿಗಳು (ಆಮದು ನಿಷೇಧ) ಜಾರಿಯಲ್ಲಿದ್ದರೆ ದೇಶದಲ್ಲಿ ಕೆಟ್ಟ ಔಷಧ ಬಿಕ್ಕಟ್ಟು ಉಂಟಾಗುತ್ತದೆ” ಎಂದು ಅವರು ಹೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:44 pm, Sun, 26 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ