Sri Lanka: ಮತಪತ್ರ ಮುದ್ರಿಸಲು ಹಣ ಇಲ್ಲದೇ ಚುನಾವಣೆ ಮುಂದೂಡಿಕೆ; ಇದು ಲಂಕಾ ವಾಸ್ತವ ಚಿತ್ರವಾ?

No Money To Conduct Elections in Sri Lanka: ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರ ಆಯ್ಕೆಗೆ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಆಯೋಜನೆಗೆ 1 ಸಾವಿರ ಕೋಟಿ ರೂ ಹಣ ಇಲ್ಲದೇ ಶ್ರೀಲಂಕಾ ಈ ಚುನಾವಣೆಗಳನ್ನೇ ಮುಂದೂಡಿದ ಸಂಗತಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

Sri Lanka: ಮತಪತ್ರ ಮುದ್ರಿಸಲು ಹಣ ಇಲ್ಲದೇ ಚುನಾವಣೆ ಮುಂದೂಡಿಕೆ; ಇದು ಲಂಕಾ ವಾಸ್ತವ ಚಿತ್ರವಾ?
ಶ್ರೀಲಂಕಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2023 | 1:19 PM

ಕೊಲಂಬೋ: ಬ್ಯಾಲಟ್ ಪೇಪರ್​ಗಳನ್ನು ಮುದ್ರಿಸಲು ಹಣ ಇಲ್ಲದೇ ಶ್ರೀಲಂಕಾದಲ್ಲಿ ಸ್ಥಳೀಯ ಚುನಾವಣೆಗಳನ್ನೇ (Sri Lanka Local Elections) ಮುಂದೂಡಲಾಗಿದೆ. ಮಾರ್ಚ್ 9ರಂದು ಶ್ರೀಲಂಕಾದ್ಯಂತ ಸ್ಥಳೀಯ ಚುನಾವಣೆಗಳು ನಡೆಯಬೇಕಿತ್ತು. ಚುನಾವಣೆ ಆಯೋಜನೆಗೆ ಹಣ ಬಿಡುಗಡೆ ಮಾಡಬೇಕೆಂದು ಶ್ರೀಲಂಕಾ ಚುನಾವಣಾ ಆಯೋಗ ಮಾಡಿದ ಮನವಿಯನ್ನು ಲಂಕಾ ಹಣಕಾಸು ಇಲಾಖೆ ತಿರಸ್ಕರಿಸಿದೆ. ಇದು ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದ್ದು, ಅಧ್ಯಕ್ಷರ ಜನಪ್ರಿಯತೆಗೆ ಈ ಚುನಾವಣೆ ಒಂದು ಅಳತೆಗೋಲು ಎಂದೇ ಭಾವಿಸಲಾಗಿತ್ತು. ಈಗ ಮತಪತ್ರ ಮುದ್ರಿಸಲು ಹಣ ಇಲ್ಲವೆಂದು ಸರ್ಕಾರ ನೆವವೊಡ್ಡಿ ಚುನಾವಣೆ ಮುಂದೂಡಲು ಕಾರಣವಾಗಿದೆ ಎಂಬುದು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಲಟ್ ಪೇಪರ್ ಮುದ್ರಣ ಇತ್ಯಾದಿ ಚುನಾವಣಾ ವೆಚ್ಚ 1,000 ಕೋಟಿ ಲಂಕಾ ರೂ (ಭಾರತೀಯ ರೂಪಾಯಿಯಲ್ಲಿ 228ಕೋಟಿ) ಆಗುವ ಅಂದಾಜು ಇದೆ. ಇಷ್ಟು ಹಣ ಬಿಡುಗಡೆಗೆ ಚುನಾವಣಾ ಆಯೋಗ ಮನವಿ ಮಾಡಿತ್ತು. ಆದರೆ, ಈಗಾಗಲೇ ದಿವಾಳಿಯಾಗಿರುವ ಶ್ರೀಲಂಕಾ ಬಳಿ ಇಷ್ಟೂ ಹಣ ಇಲ್ಲದ ಸ್ಥಿತಿ ಇದೆ. ಏಪ್ರಿಲ್​ನಲ್ಲಿ ಕೊಡಬೇಕಿದ್ದ 46 ಬಿಲಿಯನ್ ಡಾಲರ್ (1.6 ಲಕ್ಷ ಕೋಟಿ ಲಂಕಾ ರೂ) ಮೊತ್ತದಷ್ಟು ಬಾಹ್ಯ ಸಾಲದ ಹಣವನ್ನು ಲಂಕಾ ಇನ್ನೂ ಬಾಕಿ ಉಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಚುನಾವಣೆಗೆ ಖರ್ಚು ಮಾಡುವುದು ಲಂಕಾಗೂ ದುಸ್ತರದ ಸಂಗತಿ ಎನಿಸಿರಬಹುದು.

ಸ್ಥಳೀಯ ಚುನಾವಣೆಗಳ ವಿವರ:

ಶ್ರೀಲಂಕಾದ್ಯಂತ 24 ಪುರಸಭೆ, 41 ನಗರ ಪಾಲಿಕೆ ಮತ್ತು 275 ಡಿವಿಶನಲ್ ಕೌನ್ಸಿಲ್​ಗಳು ಒಳಗೊಂಡಂತೆ 340 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯುವುದಿದೆ. ಒಟ್ಟು 8,711 ಸದಸ್ಯರ ಆಯ್ಕೆ ಆಗುವುದಿದೆ. 1.66 ಕೋಟಿ ಮತದಾರರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: China: ಜನಸಂಖ್ಯೆಯನ್ನು ಹೆಚ್ಚಿಸಲು ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುತ್ತಿರುವ ಚೀನಾ ಪ್ರಾಂತ್ಯ

2018ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ ಕೇವಲ ಶೇ. 10 ಸ್ಥಾನಗಳನ್ನು ಗೆದ್ದಿತ್ತು. ಮಾಜಿ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಎಸ್​ಎಲ್​ಪಿಪಿ ಪಕ್ಷ 231 ಸ್ಥಳೀಯ ಸಂಸ್ಥೆಗಳಲ್ಲಿ ಜಯಭೇರಿ ಭಾರಿಸಿತ್ತು.

ಶ್ರೀಲಂಕಾದ ಒಟ್ಟು ಜಿಡಿಪಿ ಇರುವುದೇ 84 ಬಿಲಿಯನ್ ಡಾಲರ್. ಅದರ ಜಿಡಿಪಿಯ ಅರ್ಧಕ್ಕಿಂತ ಹೆಚ್ಚು ಮೊತ್ತದಷ್ಟು ಬಾಹ್ಯ ಸಾಲವೇ ಇರುವುದು ಗಮನಾರ್ಹ. ಹೀಗಾಗಿ, ಶ್ರೀಲಂಕಾ ದಿವಾಳಿ ಹಂತದಲ್ಲಿದೆ. ಚೀನಾದ ವಿವಿಧ ಹಣಕಾಸು ಸಂಸ್ಥೆಗಳಿಂದ ಶ್ರೀಲಂಕಾ 7.4 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲ ಪಡೆದಿದೆ. ಜಪಾನ್ ಮೊದಲಾದ ದೇಶಗಳಿಂದಲೂ ಲಂಕಾ ಸಾಲ ಪಡೆದಿದೆ. ಭಾರತವೂ 4 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ಶ್ರೀಲಂಕಾಗೆ ನೀಡಿದೆ. ಸಾಲ ತೀರಿಸಲು ಚೀನಾ ಎರಡು ವರ್ಷದವರೆಗೆ ಗಡುವು ಕೊಟ್ಟಿದೆ. ಇದೀಗ ಐಎಂಎಫ್​ನಿಂದ ಸಾಲ ಸಿಕ್ಕರೆ ಶ್ರೀಲಂಕಾ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲಷ್ಟೇ ಸಾಧ್ಯವಾಗುತ್ತದೆ. ಚೀನಾದ ಕೆಲ ಸಾಲ ತೀರಿಸಲಾಗದೇ ಹಂಬನ್​ತೋಟ ಬಂದರನ್ನು ಶ್ರೀಲಂಕಾ ಮಾರಿದೆ. ಮುಂದಿನ ದಿನಗಳಲ್ಲಿ ಸಾಲದ ಕುಣಿಕೆಯೊಡ್ಡಿ ಲಂಕಾದ ಯಾವ್ಯಾವ ಪ್ರದೇಶಗಳ ಮೇಲೆ ಚೀನಾ ಹತೋಟಿ ಸಾಧಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?