ಸದನದಲ್ಲಿ ತಪ್ಪು ಒಪ್ಪಿಕೊಂಡ್ರೆ ಮಾಡಿದ ತಪ್ಪಿಗೆ ಮಾಫಿನಾ? ಕುಮಾರಸ್ವಾಮಿಯೇ ಹೇಳಬೇಕು: ಚಲುವರಾಯಸ್ವಾಮಿ
ವೈಯಕ್ತಿಕ ಕ್ಯಾರೆಕ್ಟರ್ ಬಗ್ಗೆ ತಾನು ಯಾವತ್ತೂ ಮಾತಾಡಲ್ಲ, ಉತ್ತಮ ಸಂಸ್ಕಾರದಲ್ಲಿ ಬೆಳೆದು ಗೌರವಾನ್ವಿತ ಅನಿಸಿಕೊಂಡಿದ್ದೇನೆ, ಕುಮಾರಸ್ವಾಮಿ ತಮ್ಮ ಮನೆಗೆ ಲೇಟಾಗಿ ಹೋಗುತ್ತಿದ್ದರಂತೆ, ಅದಕ್ಕೆ ಕಾರಣ ತಾನಾ? ಮನೆಗೆ ಲೇಟಾಗಿ ಹೋಗಿದ್ದರೆ ಅದಕ್ಕೆ ಅವರ ಕಾರಣ, ಯಾಕೆ ಲೇಟಾಗುತಿತ್ತು ಅಂತ ಅವರೇ ಹೇಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ, ಏಪ್ರಿಲ್ 14: ತಾನ್ಯಾವುದೇ ಮನೆಹಾಳು ಕೆಲಸ ಮಾಡಿಲ್ಲ, ಕುಮಾರಸ್ವಾಮಿಯಷ್ಟು (HD Kumaraswamy) ಮನೆಹಾಳು ಕೆಲಸವನ್ನು ಬೇರೆ ಯಾರೂ ಮಾಡಿಲ್ಲ ಎಂದು ಮಂಡ್ಯದಲ್ಲಿ ಹೇಳಿದ ಸಚಿವ ಎನ್ ಚಲುವರಾಯಸ್ವಾಮಿ ತನ್ನ ಮತ್ತು ಕೇಂದ್ರ ಸಚಿವನ ನಡುವಿನ ವೈರತ್ವವನ್ನು ಮುಂದುವರಿಸಿದರು. ಸದನದಲ್ಲೇ ಒಪ್ಪಿಕೊಂಡುಬಿಟ್ಟಿದ್ದೇನೆ ಅಂತ ಕುಮಾರಸ್ವಾಮಿ ಹೇಳುತ್ತಾರೆ, ಅಂದರೆ ಅದರ ಅರ್ಥವೇನು? ಸದನದಲ್ಲಿ ಒಪ್ಪಿಕೊಂಡ ಮಾತ್ರಕ್ಕೆ ತಪ್ಪು ಮಾಫ್ ಆದಂತೆನಾ? ಯಾರಿಗೂ ಅನ್ಯಾಯ ಮಾಡದ ತನ್ನನ್ನು ಕೆಣಕುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ, ಅದರಿಂದೇನೂ ಉಪಯೋಗವಿಲ್ಲ, ವೃಥಾಹೇಳಿಕೆಗಳನ್ನು ನೀಡುವ ಬದಲು ಅವರು ಇತಿಹಾಸವನ್ನು ಸ್ವಲ್ಪ ಓದಿಕೊಳ್ಳಲಿ ಎಂದು ಚಲವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: ದೇಶದಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಕುಟುಂಬ ಇದ್ದರೆ ಅದು ದೇವೇಗೌಡರದ್ದು ಮಾತ್ರ: ಎನ್ ಚಲುವರಾಯಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ