ಡೊನಾಲ್ಡ್ ಟ್ರಂಪ್ ಕೊಲ್ಲಲು ಹಣಬೇಕೆಂದು ಹೆತ್ತವರನ್ನೇ ಕೊಂದ ಬಾಲಕ
ಅಮೆರಿಕದಲ್ಲಿ ಬಾಲಕನೊಬ್ಬನ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದಕ್ಕಾಗಿ ಆತ ಹಣ ಸಂಗ್ರಹಿಸಲು ತನ್ನ ಹೆತ್ತವರನ್ನು ಕೊಲೆ ಮಾಡಿದ್ದಾನೆ. ಕಳೆದ ತಿಂಗಳು, ವೌಕೇಶಾ ಕೌಂಟಿ ಅಧಿಕಾರಿಗಳು 17 ವರ್ಷದ ನಿಕಿತಾ ಕ್ಯಾಸಪ್ ವಿರುದ್ಧ ಅವರ ತಾಯಿ ಟಟಿಯಾನಾ ಕ್ಯಾಸಪ್ ಮತ್ತು ಮಲತಂದೆ ಡೊನಾಲ್ಡ್ ಮೇಯರ್ ಅವರನ್ನು ಕೊಲೆ ಮಾಡಿದ ಜೊತೆಗೆ ಕಳ್ಳತನ ಮತ್ತು ಇತರ ಅಪರಾಧಗಳನ್ನು ಎಸಗಿದ ಆರೋಪ ಹೊರಿಸಲಾಗಿದೆ.

ವಾಷಿಂಗ್ಟನ್, ಏಪ್ರಿಲ್ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡಲು 17 ವರ್ಷದ ಬಾಲಕ ನಿಕಿತಾ ಕ್ಯಾಸಪ್ ಎಂಬಾತ ಯೋಜನೆ ರೂಪಿಸಿದ್ದ ಎನ್ನುವ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ. ಡೊನಾಲ್ಡ್ ಟ್ರಂಪ್ ಕೊಲ್ಲಲು ಸಾಕಷ್ಟು ಹಣ ಖರ್ಚು ಮಾಡಬೇಕಾಗಬಹುದು ಎನ್ನುವ ಕಾರಣಕ್ಕೆ ತನ್ನ ಹೆತ್ತವರನ್ನೇ ಕೊಂದು ಅವರ ಹಣವನ್ನು ದೋಚಿ ಈತ ಪರಾರಿಯಾಗಿದ್ದ. ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಗುರಿಯೊಂದಿಗೆ, ಅವನು ಮೊದಲು ತನ್ನ ಹೆತ್ತವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 11 ರಂದು ವೌಕೇಶಾದಲ್ಲಿ ತನ್ನ ತಾಯಿ 35 ವರ್ಷದ ಟಟಿಯಾನಾ ಕಾಸಾಪ್ ಮತ್ತು ಮಲತಂದೆ 51 ವರ್ಷದ ಡೊನಾಲ್ಡ್ ಮೇಯರ್ ಅವರನ್ನು ಗುಂಡು ಹಾರಿಸಿ ಕ್ಯಾಸಪ್ ಹತ್ಯೆಗೈದಿದ್ದಕ್ಕಾಗಿ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ, ಅವರಿಬ್ಬರ ಮೃತದೇಹಗಳಲ್ಲಿ ಗುಂಡೇಟುಗಳಿದ್ದವು.
ವಾರಂಟ್‌ನಲ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಲಾಗಿದೆ. ಬಾಲಕನ ಮೇಲೆ ತನ್ನ ಹೆತ್ತವರನ್ನು ಕೊಲೆ ಮಾಡಿದ ಆರೋಪ ಹೊರಿಸಲಾಗಿದೆ. ಫೆಬ್ರವರಿಯಲ್ಲಿ ಮಿಲ್ವಾಕಿ ಅವರ ನಿವಾಸದಲ್ಲಿ ಕ್ಯಾಸಪ್ ಇಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿ ಕೊಳೆತ ದೇಹದೊಂದಿಗೆ ವಾರಗಳ ಇದ್ದು ನಂತರ 14,000ಡಾಲರ್ ನಗದು ಮತ್ತು ಪಾಸ್ಪೋರ್ಟ್ ನಾಯಿಯೊಂದಿಗೆ ಪರಾರಿಯಾಗಿದ್ದ. ಮಾರ್ಚ್‌ನಲ್ಲಿ, ಅಧಿಕಾರಿಗಳು ಆತನನ್ನು ಕಾನ್ಸಾಸ್‌ನಿಂದ ಬಂಧಿಸಿದ್ದರು.
ಮತ್ತಷ್ಟು ಓದಿ: ಚೀನಾ ಬಿಟ್ಟು ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್
ನಿಕಿತಾ ಡ್ರೋನ್ ಮತ್ತು ಸ್ಫೋಟಕಗಳನ್ನು ಖರೀದಿಸಿದ್ದ, ಅಡಾಲ್ಫ್ ಹಿಟ್ಲರ್‌ನನ್ನು ಹೊಗಳುವ ಮತ್ತು ಅವನ ಉದ್ದೇಶಗಳನ್ನು ವಿವರಿಸುವ ಮೂರು ಪುಟಗಳ ಪ್ರಣಾಳಿಕೆಯೂ ಅವನ ಬಳಿ ಕಂಡುಬಂದಿದೆ. ಕ್ಯಾಸಪ್ ರಷ್ಯನ್ ಮಾತನಾಡುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ, ಉಕ್ರೇನ್‌ಗೆ ಪಲಾಯನ ಮಾಡುವ ಯೋಜನೆ ಹಾಕಿಕೊಂಡಿದ್ದ. ಅಧಿಕಾರಿಗಳು ಅಂತಿಮವಾಗಿ ಅವರನ್ನು ಕಾನ್ಸಾಸ್‌ನಲ್ಲಿ ಪತ್ತೆ ಮಾಡಿದರು, ಅಲ್ಲಿ ಆತ ಹಣ, ಪಾಸ್‌ಪೋರ್ಟ್‌ಗಳು, ಕಾರು ಮತ್ತು ನಾಯಿಯೊಂದಿಗೆ ಪತ್ತೆಯಾಗಿದ್ದ. ಕ್ಯಾಸಪ್ ಅವರ ಪ್ರಣಾಳಿಕೆಯು ಟ್ರಂಪ್ ಅವರನ್ನು ಕೊಲ್ಲಲು ಬಯಸಿದ್ದಕ್ಕೆ ಕಾರಣಗಳನ್ನು ವಿವರಿಸಿದೆ.
ಟಿಟಿಯಾನಾ ಮನೆಯ ಅಡುಗೆ ಮನೆ ಬಳಿ ನೆಲದಲ್ಲಿ ಬಿದ್ದಿದ್ದರೆ. ಮೇಯರ್ ಮೊದಲ ಮಹಡಿಯ ಕಚೇರಿಯಲ್ಲಿ ಬಿದ್ದಿದ್ದರು. ತಲೆಯಲ್ಲಿ ಗುಂಡೇಟು ಇತ್ತು. 17 ವರ್ಷದ ಕ್ಯಾಸಪ್ ಮೇಲೆ 9 ಪ್ರಕರಣಗಳನ್ನು ದಾಖಲಿಸಲಾಗಿದೆ. ಮೊದಲನೆಯದಾಗಿ ಇಬ್ಬರನ್ನು ಕೊಲೆ ಮಾಡಿದ್ದು, ಶವಗಳನ್ನು ಮರೆಮಾಚಿದ್ದು, ಕಳ್ಳತನ ಸೇರಿದಂತೆ ಹಲವು ಆರೋಪಗಳು ಆತನ ಮೇಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ