ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2.0 ಯುಗಾರಂಭ; ಭಾರತದ ಮೇಲಾಗುವ ಪರಿಣಾಮವೇನು?

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 12.30ಕ್ಕೆ (ಭಾರತದ ಸಮಯದ ಪ್ರಕಾರ ರಾತ್ರಿ 10.30) 2ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಟ್ರಂಪ್ ಹಾಗೂ ಅವರ ಕುಟುಂಬಸ್ಥರು ಪ್ರಮಾಣವಚನ ಸಮಾರಂಭ ನಡೆಯುವ ಸ್ಥಳವಾದ ಯುಎಸ್​ ಕ್ಯಾಪಿಟಲ್ ಕಟ್ಟಡದ ರೋಂಟುಡಾವನ್ನು ತಲುಪಿದ್ದಾರೆ. ಟ್ರಂಪ್ 2ನೇ ಅವಧಿಗೆ ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕದ ಅಧ್ಯಕ್ಷ ಸ್ಥಾನ ವಹಿಸುತ್ತಿರುವುದರಿಂದ ಭಾರತಕ್ಕೂ ಹಲವು ಲಾಭಗಳಿವೆ. ಹೀಗಾಗಿ, ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಭಾರತ-ಅಮೆರಿಕದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆಯಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2.0 ಯುಗಾರಂಭ; ಭಾರತದ ಮೇಲಾಗುವ ಪರಿಣಾಮವೇನು?
Donald Trump Pm Narendra Modi
Follow us
ಸುಷ್ಮಾ ಚಕ್ರೆ
|

Updated on: Jan 20, 2025 | 8:48 PM

ನವದೆಹಲಿ: ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಭರ್ಜರಿ ವಿಜಯ ಸಾಧಿಸುವ ಮೂಲಕ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಇಂದು ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನದ ಪ್ರಕಾರ) ಅವರು ಅಮೆರಿಕದಲ್ಲಿ ಅಧ್ಯಕ್ಷರಾಗಿ 2ನೇ ಬಾರಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಜಾಗತಿಕ ನಾಯಕರನ್ನು ಕೂಡ ಆಹ್ವಾನಿಸಲಾಗಿದೆ. ಕಾರಣಾಂತರಗಳಿಂದ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಾಗಿ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಪತ್ರವನ್ನು ಟ್ರಂಪ್​ಗೆ ನೀಡಲಿದ್ದಾರೆ. ಈಗಾಗಲೇ ಟ್ರಂಪ್ ಹಲವು ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದುಯವರನ್ನು ತಮ್ಮ ಅತ್ಯುತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಮೋದಿ ಕೂಡ ಟ್ರಂಪ್ ಪರವಾಗಿ ಚುನಾವಣೆಯಲ್ಲಿ ಪ್ರಚಾರದ ಭಾಷಣ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಭಾರತಕ್ಕೆ ಹಲವು ಲಾಭಗಳಿವೆ.

H-1B ವೀಸಾಗಳಿಂದ ಇಂಧನ ಸ್ವಾತಂತ್ರ್ಯದವರೆಗೆ ಭಾರತಕ್ಕೆ ಟ್ರಂಪ್ ಸರ್ಕಾರದಿಂದ ಏನೆಲ್ಲ ಲಾಭಗಳು ಉಂಟಾಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಚುನಾವಣೆಗೂ ಮುನ್ನ ಟ್ರಂಪ್ ಭರವಸೆ ನೀಡಿದ ನೀತಿ ಬದಲಾವಣೆಗಳನ್ನು ವೀಕ್ಷಿಸಲು ಜಗತ್ತು ಸಿದ್ಧವಾಗುತ್ತಿದೆ. ಅವರ ಕೆಲವು ನಿರ್ಧಾರಗಳು ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೋದಿಯವರ ಜೊತೆಗಿನ ಉತ್ತಮ ಬಾಂಧವ್ಯದ ಕಾರಣದಿಂದ ಹಾಗೂ ವಿಸ್ತಾರಗೊಳ್ಳುತ್ತಿರುವ ಭಾರತದ ಮಾರುಕಟ್ಟೆಯ ಕಾರಣದಿಂದ ಟ್ರಂಪ್ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪದಗ್ರಹಣ; ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿ ಜಾಗತಿಕ ನಾಯಕರು ಸಮಾರಂಭದಲ್ಲಿ ಭಾಗಿ

ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿರುವಂತೆ, ವಿಶ್ವಾದ್ಯಂತ ದೇಶಗಳು ಅವರ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿವೆ. ಟ್ರಂಪ್ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಸರ್ಕಾರದ ನೇತೃತ್ವ ವಹಿಸಿಕೊಳ್ಳುವುದರಿಂದ ಭಾರತವೂ ವಾಷಿಂಗ್ಟನ್‌ನೊಂದಿಗಿನ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.

H-1B ವೀಸಾಗಳ ಸಂಭವನೀಯ ಭವಿಷ್ಯ:

ಚುನಾವಣೆಯ ಪ್ರಚಾರದ ವೇಳೆ ಟ್ರಂಪ್ ವಲಸೆ ನೀತಿಗಳನ್ನು ಕಟ್ಟುನಿಟ್ಟುಗೊಳಿಸುವುದಾಗಿ ಘೋಷಿಸಿದ್ದರು. ಹೀಗೇನಾದರೂ ಆದರೆ ಭಾರತದ ಉದ್ಯೋಗಿಗಳಿಗೆ ನೀಡಲಾದ ಎಚ್​-1 ಬಿ ವೀಸಾ ಮೇಲೂ ಪರಿಣಾಮ ಉಂಟಾಗಲಿದೆ. ಅಮೆರಿಕದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವವರು ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾದಾಗ ವಿದೇಶಿ ಪ್ರತಿಭೆಗಳಿಗಿಂತ ಅಮೆರಿಕದ ಕಾರ್ಮಿಕರಿಗೆ ಆದ್ಯತೆ ನೀಡಿದ್ದಾರೆ ಎಂಬ ಅಂಶವನ್ನು ಪರಿಗಣಿಸಬೇಕು. ಟ್ರಂಪ್ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ H-1B ವೀಸಾ ಹೊಂದಿರುವವರು ಮತ್ತು ಈ ವೀಸಾಗಳನ್ನು ಪಡೆಯುವ ಪ್ರಯತ್ನದಲ್ಲಿ ಇರುವವರು ಟ್ರಂಪ್ ನಿರ್ಧಾರದ ಪರಿಣಾಮಗಳ ಬಗ್ಗೆ ಭಯಭೀತರಾಗಿದ್ದಾರೆ.

ರಕ್ಷಣಾ ಒಪ್ಪಂದ:

ಭಾರತ ತನ್ನ ರಕ್ಷಣಾ ಅಗತ್ಯಗಳಿಗೆ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಅದರ ಬದಲು ಅಮೆರಿಕದೊಂದೊಗೆ ರಕ್ಷಣಾ ಒಪ್ಪಂದಗಳನ್ನು ಹೆಚ್ಚಿಸಿದೆ. ಹಿಂದಿನ ಅಧ್ಯಕ್ಷರಾಗಿದ್ದ ಜೋ ಬೈಡೆನ್ ಅವಧಿಯಲ್ಲೂ ಮೋದಿ ಅಮೆರಿಕದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದರು. ಡೊನಾಲ್ಡ್ ಟ್ರಂಪ್ ಕೂಡ ಚೀನಾ ಪ್ರಭಾವವನ್ನು ಕಡಿಮೆ ಮಾಡಲು ಭಾರತದೊಂದಿಗೆ ರಕ್ಷಣಾ ಒಪ್ಪಂದ ಮುಂದುವರಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ

ಇಂಧನ ಸ್ವಾತಂತ್ರ್ಯ:

ಟ್ರಂಪ್ ಇಂಧನ ಸ್ವಾತಂತ್ರ್ಯವನ್ನು ಉತ್ತೇಜಿಸಲು ಒತ್ತು ನೀಡುವುದಾಗಿ ಘೋಷಿಸಿದ್ದಾರೆ. ಇದು ಭಾರತಕ್ಕೆ ಅನುಕೂಲಕರವಾಗಬಹುದು. ಟ್ರಂಪ್ ಅಮೆರಿಕದಲ್ಲಿ ಹೆಚ್ಚಿನ ತೈಲ ಕೊರೆಯುವಿಕೆಗೆ ಅವಕಾಶ ನೀಡಲು ನೋಡುತ್ತಿರುವುದರಿಂದ ಇದು ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸ್ಥಿರಗೊಳಿಸುತ್ತದೆ. ಭಾರತದಂತಹ ಇಂಧನ ಆಮದುದಾರರಿಗೆ, ಇದರಿಂದ ಪ್ರಯೋಜನಗಳು ಹೆಚ್ಚು.

ವ್ಯಾಪಾರ ಸಂಬಂಧ:

ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಿರುವುದು ಜಾಗತಿಕ ವ್ಯಾಪಾರ ಮತ್ತು ಭಾರತದ ಆರ್ಥಿಕತೆಗೆ ಸಂಭಾವ್ಯ ಪರಿಣಾಮಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ, ಯುಎಸ್ ಭಾರತದ ಅತಿದೊಡ್ಡ ರಫ್ತು ತಾಣವಾಗಿದ್ದು, 2024ರಲ್ಲಿ ಒಟ್ಟು ರಫ್ತಿನ ಸರಿಸುಮಾರು ಶೇ.18ರಷ್ಟಿದೆ. ಟ್ರಂಪ್ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಬಗ್ಗೆ ಪರಿಗಣಿಸಬಹುದು. ಏಕೆಂದರೆ, ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ವೇಳೆ ಹಲವು ದೇಶಗಳ ಮೇಲೆ ರಫ್ತು ಉತ್ಪನ್ನಗಳಿಗೆ ತೆರಿಗೆ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು. ಒಂದುವೇಳೆ ಈ ನೀತಿ ಜಾರಿಯಾದರೆ ಭಾರತದ ಐಟಿ, ಔಷಧ, ಜವಳಿ ವಲಯದ ಮೇಲೆ ಪರಿಣಾಮ ಉಂಟಾಗಬಹುದು. ಭಾರತದ ಅಮೆರಿಕದ 9ನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾದ್ದರಿಂದ ಅಮೆರಿಕದ ತೆರಿಗೆ ನೀತಿಯಲ್ಲಿನ ಬದಲಾವಣೆ ನೇರವಾಗಿ ಭಾರತದ ಮೇಲೆ ಪರಿಣಾಮ ಬೀರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್