Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಬಳಿಕ ಅಮೆರಿಕ ಪ್ರವಾಸದಲ್ಲಿದ್ದಾರೆ. ಟ್ರಂಪ್ ಮೋದಿಗೆ ಸ್ಮರಣಿಕೆಯಾಗಿ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ಅವರ್ ಜರ್ನಿ ಟುಗೆದರ್ ಎಂಬ ವಿಶೇಷ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್ ಎಂದು ಬರೆಯುವ ಮೂಲಕ, ಟ್ರಂಪ್ ಸಹಿ ಮಾಡಿ ಆ ಪುಸ್ತಕವನ್ನು ಮೋದಿಗೆ ಉಡುಗೊರೆಯಾಗಿ ಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಬಳಿಕ ಅಮೆರಿಕ ಪ್ರವಾಸದಲ್ಲಿದ್ದಾರೆ. ಟ್ರಂಪ್ ಮೋದಿಗೆ ಸ್ಮರಣಿಕೆಯಾಗಿ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ಅವರ್ ಜರ್ನಿ ಟುಗೆದರ್ ಎಂಬ ವಿಶೇಷ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್ ಎಂದು ಬರೆಯುವ ಮೂಲಕ, ಟ್ರಂಪ್ ಸಹಿ ಮಾಡಿ ಆ ಪುಸ್ತಕವನ್ನು ಮೋದಿಗೆ ಉಡುಗೊರೆಯಾಗಿ ಕೊಟ್ಟರು. ಟ್ರಂಪ್ ಅವರ ಮೊದಲ ಅವಧಿಯನ್ನು ವಿವರಿಸುವ ಈ ಫೋಟೋಬುಕ್, 2019 ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ದ್ವಿಪಕ್ಷೀಯ ಭೇಟಿಯಲ್ಲಿದ್ದಾಗ ನಡೆದ ಹೌಡಿ ಮೋದಿ ಕಾರ್ಯಕ್ರಮ ಸೇರಿದಂತೆ ಪ್ರಮುಖ ಘಟನೆಗಳ ಚಿತ್ರಗಳನ್ನು ಒಳಗೊಂಡಿದೆ.
ಅಮೆರಿಕದಲ್ಲಿ ಮೋದಿಯವರನ್ನು ಭೇಟಿಯಾಗುವುದು ನಿಜಕ್ಕೂ ಒಂದು ಗೌರವದ ಸಂಕೇತ ಕಳೆದ ಹಲವು ವರ್ಷಗಳಿಂದ ಅವರು ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ನಮ್ಮ ನಡುವೆ ಒಂದು ಗಟ್ಟಿಯಾದ ಬಾಂಧವ್ಯವಿದೆ. ಕಳೆದ 4 ವರ್ಷಗಳಿಂದ ಈ ಒಂದು ಬಾಂಧವ್ಯವನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಕಳೆದ ಬಾರಿ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಅಮೆರಿಕದಲ್ಲಿ ಮೋದಿಗಾಗಿ ಹೌಡೀ ಮೋದಿ ಕಾರ್ಯಕ್ರಮ ಮತ್ತು ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ನಮಸ್ತೆ ಟ್ರಂಪ್ ಎಂದು ಕಾರ್ಯಕ್ರಮ ಆಯೋಜಿಸಿದ್ದರು.
ಮೋದಿ-ಟ್ರಂಪ್ ಭೇಟಿ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿ, ರಷ್ಯಾ-ಉಕ್ರೇನ್ ಯುದ್ಧ ವಿಚಾರಗಳು ಚರ್ಚೆಗೆ ಬಂದಿವೆ. ಇಂದು ಮೋದಿ ಭಾರತಕ್ಕೆ ವಾಪಸಾಗುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಸುಂದರ ಫೋಟೋವನ್ನೊಳಗೊಂಡ ಅವರ್ ಜರ್ನಿ ಟುಗೆದರ್ ಎನ್ನುವ ಪುಸ್ತಕವನ್ನು ಮೋದಿಗೆ ತಮ್ಮ ಹಸ್ತಾಕ್ಷರ ಸಮೇತ ನೀಡಿದ್ದಾರೆ ಟ್ರಂಪ್. ಇದರಲ್ಲಿ ತಮ್ಮದೇ ಕೈ ಬರಹದಲ್ಲಿ ಮಿಸ್ಟರ್ ಪ್ರೈಮ್ ಮಿನಿಸ್ಟರ್ ನೀವು ತುಂಬಾ ಗ್ರೇಟ್ ಎಂದು ಟ್ರಂಪ್ ಬರೆದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ