ಮೈಸೂರು ಘಟನೆಯಲ್ಲಿ ಪೊಲೀಸರೇ ತಪ್ಪಿತಸ್ಥರಾಗಿ ಶಿಕ್ಷೆಗೊಳಗಾದರೆ ಆಶ್ಚರ್ಯವಿಲ್ಲ: ಆರ್ ಅಶೋಕ, ವಿಪಕ್ಷ ನಾಯಕ
ಕೇವಲ ಮುಸಲ್ಮಾನರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಪೊಲೀಸರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿದೆ, ಒಬ್ಬ ಸಚಿವ ಪೊಲೀಸರನ್ನು ಏಕವಚನದಲ್ಲಿ ಸಂಬೋಧಿಸುತ್ತಾನೆ, ಸಚಿವನಾದವನೇ ಹಾಗೆ ಮಾತಾಡಿದರೆ ಜನಸಾಮಾನ್ಯರಿಗೆ ಪೊಲೀಸರ ಮೇಲಿನ ಭಯ ಎಲ್ಲಿ ಉಳಿಯುತ್ತದೆ? ಅವರೂ ಪೊಲೀಸರಿಗೆ ಮನಬಂದಂತೆ ಮಾತಾಡಲು ಶುರುಮಾಡುತ್ತಾರೆ ಎಂದು ಅಶೋಕ ಹೇಳಿದರು.
ಹಾಸನ: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಮೈಸೂರು ಘಟನೆ ಹಿನ್ನೆಲೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಪೊಲೀಸ್ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರದ ಮೇಲೆ ವಿಶ್ವಾಸ ಹೊರಟುಹೋಗಿದೆ, ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕಿದ್ದು ಅವರಿಗೆ ಚೆನ್ನಾಗಿ ಗೊತ್ತಿದೆ, ಮೈಸೂರಲ್ಲೂ ಅಪರಾಧಿಗಳನ್ನು ಹಿಡಿದು ಒಳಹಾಕಿದರೆ ಸರಕಾರವೇ ಅವರ ಪರ ನಿಂತು ಬಿಡಿಸುತ್ತದೆ ಮತ್ತು ಕರ್ತವ್ಯ ನಿರ್ವಹಿಸಿದ ಪೊಲೀಸರೇ ಅಪರಾಧಿಗಳಾಗಿ ಬಿಡುತ್ತಾರೆ, ಕೆಲವರನ್ನು ಸಸ್ಪೆಂಡ್ ಇಲ್ಲವೇ ಟ್ರಾನ್ಸ್ಫರ್ ಕೂಡ ಮಾಡಲಾಗುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಭಿನ್ನಮತಕ್ಕೆ ಬ್ರೇಕ್ ಹಾಕಲು ಅಖಾಡಕ್ಕಿಳಿದ ವರಿಷ್ಠರು: ಅಶೋಕ್ ಜತೆ ರಾಜ್ಯ ಸಹ ಉಸ್ತುವಾರಿ ಮಹತ್ವದ ಸಭೆ

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ

ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ

ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು

ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
