ಬಾಗಪ್ಪ ಹರಿಜನ್ನಿಂದ ತನ್ನ ಜೀವಕ್ಕೆ ಅಪಾಯವಿದೆ ಅನ್ನೋದನ್ನು ಪಿಂಟ್ಯಾ ಅರಿತಿದ್ದ: ಲಕ್ಷ್ಮಣ ನಿಂಬರಗಿ, ಎಸ್ಪಿ
ತನ್ನ ಸಹೋದರ ಮತ್ತು ವಕೀಲ ರವಿ ಅಗರಖೇಡ ಕೊಲೆಯನ್ನು ಮಾಡಿಸಿದ ಆರೋಪ ಹೊತ್ತಿದ್ದ ಬಾಗಪ್ಪನಿಂದ ತನ್ನ ಜೀವಕ್ಕೂ ಅಪಾಯವಿದೆ ಎಂದು ಪ್ರಮುಖ ಆರೋಪಿ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಭಾವಿಸಿದ್ದ ಮತ್ತು ಅದೇ ಹಿನ್ನಲೆಯಲ್ಲಿ ಅವನು ಬಾಗಪ್ಪನ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ಹೇಳುತ್ತಾರೆ. ಪಿಂಟ್ಯಾನೊಂದಿಗೆ ರಾಹುಲ್ ತಳಕೇರಿ, ಗದಿಗೆಪ್ಪ ಮತ್ತು ಸುದೀಪ್ ಕಾಂಬಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ: ಈಗಾಗಲೇ ವರದಿಯಾಗಿರುವಂತೆ ಬಾಗಪ್ಪ ಹರಿಜನ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ನಗರದಲ್ಲಿ ಪತ್ರಿಕಾ ಗೋಷ್ಠಿಯೊಂದನನ್ನು ನಡೆಸಿ ಮಾತಾಡಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬಂಧಿಸಿರುವ ನಾಲ್ವರು ಕೊಲೆ ಅರೋಪಿಗಳಲ್ಲಿ ಕೇವಲ ಒಬ್ಬನ ವಿರುದ್ಧ ಮಾತ್ರ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ, ಉಳಿದ ಮೂವರ ಮೇಲೆ ಯಾವುದೇ ಕೇಸಿಲ್ಲ ಎಂದು ಹೇಳಿದರು. ಹಿಸ್ಟರಿ ಶೀಟರ್ ಮತ್ತು ರೌಡಿ ಶೀಟರ್ ಗಳ ವ್ಯಾಖ್ಯಾನ ಭಿನ್ನವಾಗಿದೆ, ಹಿಸ್ಟರಿ ಶೀಟರ್ ಅಂದರೆ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಬಂದವನು ಎಂದು ಎಸ್ಪಿ ಹೇಳಿದರು. ವೈಯಕ್ತಿಕ ವೈಷಮ್ಯ, ಹೆಣ್ಣು ಮತ್ತು ಆಸ್ತಿ-ಬಾಗಪ್ಪ ಕೊಲೆ ಹಿಂದಿನ ಕಾರಣಗಳು ಎಂದು ನಿಂಬರಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ್ ಕುಡಿಯುತ್ತಿರಲಿಲ್ಲ ಅದರೆ ಅವನೊಬ್ಬ ಸ್ತ್ರೀಲೋಲನಾಗಿದ್ದ: ರವೀಂದ್ರ, ನಿವೃತ್ತ ಡಿವೈಎಸ್ಪಿ