ರೆಡ್ ಕಾರ್ಪೆಟ್ ರೀ ಲಾಂಚ್ಗೆ ಸ್ಟೈಲ್ ಆಗಿ ಎಂಟ್ರಿ ಕೊಟ್ಟ ಪವಿತ್ರಾ ಗೌಡ
Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಪವಿತ್ರಾ ಗೌಡ ಅವರ ಫ್ಯಾಷನ್ ಡಿಸೈನ್ ಶಾಪ್ ಆಗಿರುವ ರೆಡ್ ಕಾರ್ಪೆಂಟ್ ಬಂದ್ ಆಗಿತ್ತು. ಇದೀಗ ರೆಡ್ ಕಾರ್ಪೆಟ್ ಸ್ಟುಡಿಯೋ ಅನ್ನು ರೀ ಲಾಂಚ್ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಬಲು ಸ್ಟೈಲ್ ಆಗಿ ಆಗಮಿಸಿದ್ದಾರೆ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ, ತಮ್ಮ ಫ್ಯಾಷನ್ ಡಿಸೈನ್ ಶಾಪ್ ಆಗಿರುವ ರೆಡ್ ಕಾರ್ಪೆಟ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಪವಿತ್ರಾ ಗೌಡ ಜೈಲು ಸೇರಿದಾಗಿನಿಂದಲೂ ರೆಡ್ ಕಾರ್ಪೆಟ್ ಬಂದ್ ಆಗಿತ್ತು. ಅದೇ ಕಾರಣಕ್ಕೆ ಇಂದು (ಫೆಬ್ರವರಿ 14) ಪ್ರೇಮಿಗಳ ದಿನದಂದು ರೆಡ್ ಕಾರ್ಪೆಟ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡುತ್ತಿದ್ದಾರೆ. ರೀಲಾಂಚ್ ಕಾರ್ಯಕ್ರಮಕ್ಕೆ ಭಾರಿ ಗತ್ತಿನಿಂದ ಪವಿತ್ರಾ ಗೌಡ ಆಗಮಿಸಿದ್ದಾರೆ. ರೇಂಜ್ ರೋವರ್ ಕಾರಿನಲ್ಲಿ, ಗಾಗಲ್ಸ್ ತೊಟ್ಟು ಸ್ಟೈಲ್ ಆಗಿ ಬಂದಿಳಿದಿದ್ದಾರೆ. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ